ಮೈಸೂರು (ಸೆ.14):  ಡ್ರಗ್ಸ್‌ ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಹೆಣ್ಣು ಮಕ್ಕಳಿಗೆ (ನಟಿಯರು) ಮಾತ್ರ ಜೈಲು, ಆಸ್ಪತ್ರೆ ಅಂತ ಓಡಾಡುಸುತ್ತಿದ್ದೀರಾ. ಯಾಕೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವಾ?, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ಸತ್ಯ ಒಪ್ಪಿಕೊಳ್ಳಿ. ಈ ಪ್ರಕರಣದಲ್ಲಿ ಮಂತ್ರಿಗಳು, ಎಂಎಲ…ಎಗಳು ಯಾರು ಇಲ್ವಾ ಎಂದು ಪ್ರಶ್ನಿಸಿದರು.

ರಾಗಿಣಿ, ಸಂಜನಾ ಕೂದಲು ಹೈದ್ರಾಬಾದ್‌ಗೆ ರವಾನೆ .

ಗುಟ್ಕ ತಿಂದವರು ಸಹ ಪೊಲೀಸರು, ಅಧಿಕಾರಿಗಳು ಯಾರು ಇಲ್ವಾ?, ಸರಿಯಾದ ತನಿಖೆ ಮಾಡದೆ ದಿಕ್ಕು ತಪ್ಪಿಸಿದರೆ, ಮುಂದಿನ ಮಂಗಳವಾರ ನಾನೇ ಸಿಸಿಬಿ ಮುಂದೆ ಸತ್ಯಾಗ್ರಹ ಮಾಡುತ್ತೇನೆ. ಪೊಲೀಸರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ನಿಮಗೆ ಯಾರ ಒತ್ತಡ ಇದೆ ಹೇಳಿ. ಎಲ್ಲರ ಹೆಸರು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.

ಈ ಪ್ರಕರಣದಲ್ಲೂ ಜಮೀರ್‌ ಇದ್ದರು ಬಂಧಿಸಬೇಕು. ಎಂಎಲ…ಎ ಇರಲಿ, ಸಚಿವರೇ ಇರಲಿ, ಎಲ್ಲರನ್ನು ಈ ಪ್ರಕರಣದಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು.