ತಮ್ಮಿಂದ ಈ ಕೆಲಸ ಆಗಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಹೊರಹಾಕಲಾಗಿದೆ.
ಮೈಸೂರು (ಅ.15): ನಾಡಹಬ್ಬ ದಸರಾ ಮಹೋತ್ಸವವು ಯಡಿಯೂರಪ್ಪ ದಸರಾ ಆಗುತ್ತಿದ್ದು, ಅವರಿಗೆ ನಮ್ಮ ಸಾಂಸ್ಕೃತಿಕ ದಸರಾ ಬೇಕಿಲ್ಲ ಎಂದು ಆರೋಪಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಬುಧವಾರ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟಿಸಿದರು.
ಯಡಿಯೂರಪ್ಪ ಅವರಿಗೆ ನಗುವುದೇ ಗೊತ್ತಿಲ್ಲ, ವರ್ಷಕ್ಕೊಮ್ಮೆ ನಗುತ್ತಾರೆ. ಈ ಬಾರಿ ದಸರಾ ಉತ್ಸವ ನಡೆಯಲೇ ಬೇಕು. ಲೈಟ್ ಬೇಕು ಜಂಬೂಸವಾರಿ ಬೇಡ ಎಂದರೆ ಹೇಗೆ? ಇದೊಂದು ಹುಚ್ಚರ ಸರ್ಕಾರ, ದಿನಕ್ಕೊಬ್ಬ ಸಚಿವರು ಬಂದು ದಸರಾಗೆ ಮಂಕು ಬಡಿಸಿದ್ದಾರೆ. ತಮ್ಮಿಂದ ದಸರಾ ಆಚರಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ, ಇಲ್ಲವೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ದಸರಾ ಆಚರಿಸಿ, ನಾವು ಸಾರೋಟಿನಲ್ಲಿ ಚಾಮುಂಡೇಶ್ವರಿ ಮೆರವಣಿಗೆ ಮಾಡುತ್ತೇವೆ ಎಂದರು.
ಚಾಮುಂಡಿ ಬೆಟ್ಟಕ್ಕೆ ಅ.14 ರಿಂದ 3 ದಿನಗಳ ಕಾಲ ನಿಷೇಧ ...
ಯಡಿಯೂರಪ್ಪಗೆ ಪಕ್ಷಾಂತರಿಸುವುದು, ಮಂತ್ರಿಗಿರಿ ಹಂಚುವುದಷ್ಟೇ ಗೊತ್ತಿದೆ. ಶಿಕ್ಷಕರು, ವಿದ್ಯಾರ್ಥಿಗಳು ಸತ್ತರೆ ಒಂದು ಕೋಟಿ ಪರಿಹಾರ ಕೊಡಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಇದ್ದರು.
