ಕೋಲಾರ(ಜೂ.17) : ಏನ್‌ ಸಾರ್‌ ಬೊಜ್ಜು ಜಾಸ್ತಿ ಬಂದಿದೆ ಎಂದಿದ್ದಕ್ಕೆ ವಾಟಾಳ್‌ ನಾಗರಾಜ್‌ ಶಾಕ್‌ ಆದರು. ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೂಡಲೇ ಮೇಲೆದ್ದು ಹೌದಾ ಎಂದು ಹೊಟ್ಟೆಮೇಲೆ ಕೈ ಇಟ್ಕೊಂಡು ಸವರಿಕೊಂಡರು. ಎಲ್ಲಾದ್ರೂ ಉಂಟೆ ಹೀಗಾಗ್‌ ಬಿಟ್ರೆ ಹೆಂಗೆ, ನೀವು ಹೀಗೇಳಿದರೆ ನನ್‌ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.

ನಾನು ಒಂದು ಲೆವೆಲ್‌ ನಲ್ಲಿ ಇರ್ತೀನಿ,ಹೊಟ್ಟೆಬಂದರೆ ಭಯ ಬಂದುಬಿಡುತ್ತೆ.ಎರಡ್ಮೂರು ದಿನಕೊಮ್ಮೆ ಹೋಗಿ ತೂಕ ಹಾಕಿಸ್ತೀನಿ. ನಾನು ಯಾವಾಗ್ಲೂ 80 ರಿಂದ 85 ಕೆಜಿ ಒಳಗೆ ಇರ್ತೀನಿ.ಇದಕ್ಕಿಂತ ಜಾಸ್ತಿ ಕಡಿಮೆ ಇಳಿಬಾರ್ದು, ಮೇಲಕ್ಕೂ ಏರ್ಬಾರ್ದು.

ಗುರುವಾರ ಶಿವಮೊಗ್ಗ ಜಿಲ್ಲೆಯ 33 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ

ನನ್ನ ವಯಸ್ಸು ಎಷ್ಟು ಅಂತ ನನಗೆ ಸರಿಯಾಗಿ ಗೊತ್ತಿಲ್ಲ. ವಯಸ್ಸಾದ್ರೇನು ನನ್ನ ಉತ್ಸಾಹಕ್ಕೆ ವಯಸ್ಸಾಗಿಲ್ಲ ಎಂದು ನಕ್ಕು ಸಮಾಧಾನ ಮಾಡಿಕೊಂಡರು ವಾಟಾಳ್‌ ನಾಗರಾಜ್‌.