ಬೆಳಗಾವಿಯಲ್ಲಿ ಅಧಿವೇಶನ ನಡೆಸದಿದ್ದಲ್ಲಿ ಕುರಿ ಸಮ್ಮೇಳನ: ವಾಟಾಳ್‌ ಎಚ್ಚರಿಕೆ| ಅಧಿವೇಶನ ನಡೆಸದೇ ಇದ್ದಲ್ಲಿ ಅ.14ರಂದು ಸುವರ್ಣಸೌಧದ ಮುಂದೆ ಕುರಿ ಸಮ್ಮೇಳನ| ರಸ್ತೆ ಮಧ್ಯ ಮಲಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ| ಪ್ರತಿಭಟನಾ ನಿರತ ವಾಟಾಳ್‌ ನಾಗರಾಜ ಸೇರಿದಂತೆ ಇತರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ| 

ಬೆಳಗಾವಿ:(ಸೆ.23) ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸದೇ ಇದ್ದಲ್ಲಿ ಅ.14ರಂದು ಸುವರ್ಣಸೌಧದ ಮುಂದೆ ಕುರಿ ಸಮ್ಮೇಳನ ನಡೆಸುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದ್ದಾರೆ. 


ಶನಿವಾರ ನಗರದ ಚೆನ್ನಮ್ಮ ವೃತ್ತದ ಬಳಿ ರಸ್ತೆ ಮಧ್ಯದಲ್ಲಿ ಮಲಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಇದೆ ವೇಳೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ನಡೆಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ನಿರತ ವಾಟಾಳ್‌ ನಾಗರಾಜ ಸೇರಿದಂತೆ ಇತರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.