ರಾಮನಗರ(ಜೂ.10): ಎಸ್ಸೆಸ್ಸೆಲ್ಸಿ, ಫಾರ್ಮಸಿ, ಎಂಜಿನಿಯರಿಗ್‌ ಹಾಗೂ ಡಿಪ್ಲೊಮಾ ಸೇರಿದಂತೆ ಎಲ್ಲಾ ಪದವಿಯ ಅಂತಿಮ ಪರೀಕ್ಷೆಗಳನ್ನು ನಡೆಸದೇ ವಿದ್ಯಾರ್ಥಿಗಳನ್ನು ಉತ್ತೀ​ರ್ಣ​ರ​ನ್ನಾಗಿ ಮಾಡ​ಬೇಕು ಎಂದು ಒತ್ತಾಯಿಸಿ ಕನ್ನಡ ಚಳ​ವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗ​ರಾಜ್‌ ನೇತೃ​ತ್ವ​ದಲ್ಲಿ ಕನ್ನ​ಡ​ಪರ ಸಂಘ​ಟ​ನೆ​ಗಳ ಕಾರ್ಯ​ಕ​ರ್ತರು ನಗ​ರ​ದಲ್ಲಿ ಮಂಗ​ಳ​ವಾರ ಪ್ರತಿ​ಭ​ಟನೆ ನಡೆ​ಸಿ​ದರು.

ನಗ​ರದ ಐಜೂರು ವೃತ್ತ​ದಲ್ಲಿ ಸೇರಿದ ಪ್ರತಿ​ಭ​ಟ​ನಾ​ಕಾ​ರರು ತರ​ಗ​ತಿ​ಯಲ್ಲಿ ಕಲಿಕಾ ಮಾನ​ದಂಡಕ್ಕೆ ಅನು​ಗು​ಣ​ವಾಗಿ ವಿದ್ಯಾ​ರ್ಥಿ​ಗ​ಳನ್ನು ತೇರ್ಗಡೆ ಮಾಡು​ವಂತೆ ಕೇಂದ್ರ ಹಾಗೂ ರಾಜ್ಯ​ಸ​ರ್ಕಾ​ರ​ಗ​ಳನ್ನು ಒತ್ತಾ​ಯಿ​ಸಿ​ದರು.
ಈ ವೇಳೆ ಸುದ್ದಿ​ಗಾ​ರರೊಂದಿಗೆ ಮಾತ​ನಾ​ಡಿದ ವಾಟಾಳ್‌ ನಾಗ​ರಾಜ್‌, ಆನ್‌ಲೈನ್‌ ಶಿಕ್ಷವಣವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಎಷ್ಟೋ ಹಳ್ಳಿಗಳಲ್ಲಿ ಮೊಬೈಲ್‌ ವ್ಯವಸ್ಥೆ ಇಲ್ಲ. ಮೊಬೈಲ್‌ ಖರೀದಿ ಮಾಡಲು ಜನರ ಬಳಿ ಹಣ ಇಲ್ಲ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆನ್‌ ಲೈನ್‌ ಶಿಕ್ಷಣವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರ​ಹಿ​ಸಿ​ದರು.

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಕೇಂದ್ರಕ್ಕೆ ಸ್ಟ್ರಾಂಗ್‌ರೂಮ್‌ನಷ್ಟೇ ಭದ್ರತೆ

ಈಗಾಗಲೇ ದೆಹಲಿ, ಮಹಾರಾಷ್ಟ್ರ ಸೇರಿ 12ರಾಜ್ಯಗಳಲ್ಲಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದ್ದಾರೆ. ಮುಖ್ಯವಾಗಿ ಮುಂಬೈ ಐಐಟಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಗೋವಾ ವಿಶ್ವವಿದ್ಯಾಲಯ ಎಲ್ಲಾ ಪದವಿ ಪರೀಕ್ಷೆಗಳನ್ನು ಬಂದ್‌ ಮಾಡಿ, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ್ದಾರೆ. ಕರ್ನಾ​ಟ​ಕ​ದಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬಾರದು ಎಂದು ಹೇಳಿದರು.

ದೇಶದ ಹಲವು ರಾಜ್ಯಗಳು ಈಗಾಗಲೇ ಪರೀಕ್ಷೆಗಳನ್ನು ರದ್ದು ಮಾಡಿದೆ. ಹಾಗಾಗಿ ರಾಜ್ಯ ಸರ್ಕಾರವು ಕೂಡ ಇಂತಹ ಕ್ರಮಕೈಗೊಳ್ಳಬೇಕು. ಜೀವ ಇದ್ದರೇ, ಜೀವನ ಇದನ್ನು ಅರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿದ್ಯಾ​ರ್ಥಿ​ಗ​ಳಿಂದ ಪರೀಕ್ಷೆ ಶುಲ್ಕ, ಕಾಲೇಜ್‌ ಶುಲ್ಕ ಪಡೆ​ಯ​ಬಾ​ರದು. ಸರ್ಕಾರ ವಿದ್ಯಾ​ರ್ಥಿ​ಗ​ಳಿಗೆ ಶುಲ್ಕ​ಕ್ಕಾಗಿ ಪ್ರತ್ಯೇಕ ಪ್ಯಾಕೇಜ್‌ ಘೋಷಣೆ ಮಾಡ​ಬೇಕು ಎಂದು ವಾಟಾಳ್‌ ನಾಗಾ​ರಜ್‌ ಸರ್ಕಾ​ರ​ವನ್ನು ಒತ್ತಾಯ ಮಾಡಿ​ದರು.
ಪ್ರತಿ​ಭ​ಟ​ನೆ​ಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ, ಎಂ.ಜಗದೀಶ್‌, ಪದಾಧಿಕಾರಿಗಳಾದ ಗಾಯಿತ್ರಿ ಬಾಯಿ, ಸಿ.ಎಸ್‌.ಜಯಕುಮಾರ್‌ , ಜಯರಾಮು, ಮರೀಸ್ವಾಮಿ, ಆರ್‌ .ಜೆ.ಅರ್ಜುನ್‌, ಬಿ.ಸುರೇಶ್‌, ಶಿವಪ್ರಸಾದ್‌, ರಾಣಿಕಿರಣ್‌ ಸೇರಿದಂತೆ ಹಲವರು ಹಾಜರಿದ್ದರು.