ಚರಂಡಿ ಸೇರುತ್ತಿರುವ ಭದ್ರಾ ನದಿಯ ಅಪಾರ ನೀರು; ಜನಪ್ರತಿಧಿಗಳ ನಿರ್ಲಕ್ಷ್ಯ
- ಕಡೂರು-ಬೀರೂರಿನ ಜೀವನಾಡಿ ಭದ್ರೆಚರಂಡಿ ಪಾಲು: ಜನಪ್ರತಿಧಿಗಳ ನಿರ್ಲಕ್ಷ
- ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಬಳಿ 2 ವರ್ಷಗಳಿಂದ ಲಿಕೇಜ್: 1ವಾರ್ಡಿಗೆ ಆಗುವಷ್ಟುನೀರು ಪೋಲು
ಬೀರೂರು. (ಅ.29) : ಕಡೂರು-ಬೀರೂರು ಅವಳಿ ಪಟ್ಟಣಗಳಿಗೆ ಜೀವನಾಡಿಯಾಗಿ ಜನರ ದಾಹ ತಣಿಸುತ್ತಿರುವ ಭದ್ರೆಯು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದೆರಡು ವರ್ಷಗಳಿಂದ ಚರಂಡಿ ಪಾಲಾಗುತ್ತಿದ್ದಾಳೆ. ಇದು ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದ ಎದುರಿಗಿರುವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಒಳಭಾಗದಲ್ಲಿ ಲಕ್ಕವಳ್ಳಿ-ಕಡೂರುಗೆ ನೇರವಾಗಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಲೈನ್ ನಲ್ಲಿ ಲಿಕೇಜ್ ಆಗುತ್ತಿದ್ದು, ಪ್ರತಿನಿತ್ಯ ಶುದ್ದೀಕರಣವಾದ ಭದ್ರಾ ನೀರು ಚರಂಡಿ ಸೇರುತ್ತಿದೆ.
Chikkamagaluru: ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ: ಸಿ.ಟಿ.ರವಿ
ಕಳೆದ ವಾರದಸರದಲ್ಲಿ ಲಕ್ಕವಳ್ಳಿ ಜಾಕ್‌ವೆಲ್ ನಲ್ಲಿ ವಿದ್ಯುತ್ ಸಂಪರ್ಕ ಕæೖಕೊಟ್ಟು ವಾರಗಟ್ಟಲೆ ನೀರು ಪೂರೈಕೆ ಸ್ಥಗಿತವಾಗಿ, ಜನ ಹಬ್ಬದಲ್ಲಿ ಹೈರಾಣಾಗಿ ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಒಂದು ವಾರ ನೀರು ಬಿಡದಿದ್ದರೆ ಕುಡಿಯುವ ನೀರಿಗೆ ಎಷ್ಟುಪರಿತಾಪವಾಗುತ್ತದೆ ಎನ್ನುವುದು ಆಯಾ ವಾರ್ಡಿನ ಜನರಿಗೆ ಗೊತ್ತು. ಇಂತಹುದರಲ್ಲಿ ಎರಡು ವರ್ಷಗಳಿಂದ ಈ ಜಾಗದಲ್ಲಿ ಭದ್ರೆ ಚರಂಡಿ ಪಾಲಾಗುತ್ತಿದ್ದರೂ ಅಧಿಕಾರಿಗಳು ಇತ್ತ ತಲೆಹಾಕಿ ನೋಡದಿರುವುದು ಸೋಜಿಗದ ಸಂಗತಿ.
ಈ ಸಮಸ್ಯೆಗೆ ಪ್ರತಿಕ್ರಿಯಿಸಿದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಮೋಹನ್‌ಕುಮಾರ್, ಈ ವಿಚಾರವಾಗಿ ಪುರಸಭೆ ನೀರು ಗಂಟಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ. ಈ ಹಿಂದೆ ಲೀಕೇಜ್ ಸರಿಪಡಿಸಲು ಹಾಸ್ಟೆಲ್ ಒಳಭಾಗದಲ್ಲಿ ಯಾವುದೇ ಯಂತ್ರೋಪಕರಣ ಹೋಗುತ್ತಿರಲಿಲ್ಲ. ಜೊತೆಗೆ ನಮ್ಮ ಬೀರೂರು ಪುರಸಭೆ ವ್ಯಾಪ್ತಿಗೆ ಕೆ.ಇ.ಬಿ ಪಂಪ್ ಹೌಸ್ ಮಾತ್ರ ಬರುತ್ತದೆ. ಉಳಿದಂತೆ ಈ ಲೈನ್ ಕಡೂರು ಪುರಸಭೆ ವ್ಯಾಪ್ತಿಗೆ ಒಳಪಡುತ್ತಿದೆ. ಸಮಸ್ಯೆ ಬಗ್ಗೆ ಕಡೂರು ಅಧ್ಯಕ್ಷರೊಂದಿಗೆ ಚರ್ಚಿಸಿ ಪೈಪ್‌ಲೈನ್ ಕಾಮಗಾರಿ ಸರಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸೋಲ್ಲ ಎಂದರು.
ಬಿಸಿಎಂ ಹಾಸ್ಟೆಲ್ ನಲ್ಲಿ ಅನೇಕ ವಿದ್ಯಾರ್ಥಿಗಳಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಇದೆ. ಅನೇಕ ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಕುಡಿಯುವ ನೀರನ್ನು ದುಡ್ಡು ಕೊಟ್ಟು ಟ್ಯಾಂಕ್ ಮೂಲಕ ಪೂರೈಸಿಕೊಳ್ಳಲಾಗುತ್ತಿದೆ. ವಿಪಾರ್ಯಸವೆಂದರೆ ಪ್ರತಿ ನಿತ್ಯ ಕಣ್ಣೆದುರಿಗೆ ಕುಡಿಯುವ ನೀರು ಚರಂಡಿಗೆ ಹರಿಯುತ್ತಿದ್ದು, ಸಾರ್ವಜನಿಕರು ನೋಡಿದರೂ ನೋಡದಂತೆ ವರ್ತಿಸುತ್ತಾರೆ ಎಂದು ವಿದ್ಯಾರ್ಥಿ ನಿಲಯಾಧಿಕಾರಿ ರವಿಕುಮಾರ್ ಬೆಸರ ವ್ಯಕ್ತಪಡಿಸಿದ್ದಾರೆ.
Chikkamagaluru: ಮೋಟಮ್ಮ ಪುತ್ರಿ ನಯನಾಗೆ ಟಿಕೆಟ್ ಬೇಡ: ಕೈ ಮುಖಂಡರು
ಕುಡಿಯುವ ನೀರಿನ ಸಮಸ್ಯೆಯಾದರೆ ಅದರ ಗೋಳು ಪುರಸಭೆಯವರಿಗೆ ಏನುಗೊತ್ತು? ಆ ಸಂದರ್ಭದಲ್ಲಿ ನೀರು ಬಿಡದಿದ್ದರೆ ಜನ ಹಿಡಿಶಾಪ ಹಾಕುತ್ತಾರೆ. ಆದರೆ ಒಂದು ವಾರ್ಡಿಗೆ ಆಗುವಷ್ಟುನೀರು ಕಣ್ಣೇದುರಿಗೆ ಪೋಲಾಗುವುದನ್ನು ಕಂಡರೆ ಬೇಜಾರಾಗುತ್ತದೆ. ಪುರಸಭೆ ಅಧಿಕಾರಿಗಳು ಇದನ್ನು ಸರಿಪಡಿಸಲಾಗದಿದ್ದರೆ ಶಾಸಕರ ಅನುದಾನದಲ್ಲಿ ಸಮಸ್ಯೆ ಬಗೆಹರಿಸಬೇಕು ಅಥವಾ ಜಿಲಾಧಿಕಾರಿ ವಿಶೇಷ ಅನುದಾನದಲ್ಲಿ ಈ ಮಹತ್ತರ ಕುಡಿಯುವ ನೀರಿನ ಯೋಜನೆ ಸಮಸ್ಯೆಯನ್ನು ಬಗೆಹರಿಸಿ ನಾಗರೀಕರಿಗೆ ಸಹಕರಿಸಲಿ ಎನ್ನುತ್ತಾರೆ ರಾಜಾಜಿ ನಗರ ಗೃಹಿಣಿ ಶರ್ಮಿಳಾ ಅರುಣ್.