Asianet Suvarna News Asianet Suvarna News

'ವರುಣಾ  ಲಕ್ಕಿ ಕ್ಷೇತ್ರ ಎಂದು ಭವಿಷ್ಯ ನುಡಿದಿರುವುದು ಸುಳ್ಳಾಗಲಿದೆ'

ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ತಂದೆಗೆ ಲಕ್ಕಿ ಕ್ಷೇತ್ರ ಇಲ್ಲಿ ನಿಂತು ಗೆದ್ದರೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿರುವುದು ಸುಳ್ಳಾಗಲಿದೆ ಎಂದು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ತೋಟದಪ್ಪ ಬಸವರಾಜು ಪ್ರತಿಕ್ರಿಯಿಸಿದ್ದಾರೆ.

Varuna Is Not  Lucky for Siddaramaiah Totadappa Basavaraju snr
Author
First Published Dec 4, 2022, 6:40 AM IST

 ಟಿ.ನರಸೀಪುರ (ಡಿ. 04):  ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ತಂದೆಗೆ ಲಕ್ಕಿ ಕ್ಷೇತ್ರ ಇಲ್ಲಿ ನಿಂತು ಗೆದ್ದರೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿರುವುದು ಸುಳ್ಳಾಗಲಿದೆ ಎಂದು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ತೋಟದಪ್ಪ ಬಸವರಾಜು ಪ್ರತಿಕ್ರಿಯಿಸಿದ್ದಾರೆ.

2018ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಅವರಪ್ಪನಾಣೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯನವರು ಭವಿಷ್ಯ ನುಡಿದಿದ್ದರು, ಆದರೆ ಕ್ರಮವಾಗಿ ಕುಮಾರಸ್ವಾಮಿಯವರು ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದರು ಎಂದು ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯನವರಿಗೆ (Siddaramaiah)  ಬಾದಾಮಿ ಕೋಲಾರ (Kolar)  ವರುಣ ಎಲ್ಲಿ ನಿಂತರೂ ಗೆಲ್ಲುವ ಆತ್ಮವಿಶ್ವಾಸವಿಲ್ಲ, ಆದ್ದರಿಂದಲೇ ಅವರು ಕ್ಷೇತ್ರವನ್ನು ಘೋಷಣೆ ಮಾಡಿಲ್ಲ. ವರುಣದಲ್ಲಿ 2008ರಲ್ಲಿ ಗೆದ್ದು ಪ್ರತಿಪಕ್ಷದ ನಾಯಕರಾದರು 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾದರು, ಕ್ಷೇತ್ರದ ಜನರು ಇವರನ್ನು ಬಾದಾಮಿ ಚಾಮುಂಡೇಶ್ವರಿಗೆ ಹೋಗಿ ಎಂದು ಹೇಳಿರಲಿಲ್ಲ, ಉನ್ನತ ಸ್ಥಾನವನ್ನು ಕೊಟ್ಟಕ್ಷೇತ್ರದ ಜನರಿಗೆ ದ್ರೋಹ ಮಾಡಿ ಬೆನ್ನಿಗೆ ಬೆನ್ನಿಗೆ ಚೂರಿ ಹಾಕಿ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತು ಬಾದಾಮಿಯಲ್ಲಿ ಉಸಿರುಗಟ್ಟಿಗೆದ್ದರು, 2023ರಲ್ಲಿ ಯತೀಂದ್ರ ರವರು ಸ್ಪರ್ಧಿಸಿದರೆ ಮಧ್ಯಾಹ್ನಕ್ಕೆ ಮುಂಚೆಯೇ ಮನೆ ಸೇರುತ್ತಾರೆ ಎಂದಿದ್ದಾರೆ.

ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ಮಧ್ಯಾಹ್ನದ ನಂತರ ಮನೆ ಸೇರುತ್ತಾರೆ ಅಷ್ಟೇ ಹೊರತು ಕಾಂಗ್ರೆಸ್‌ ಗೆಲ್ಲುವುದಿಲ್ಲ, ಇದು ಕ್ಷೇತ್ರದ ಮತದಾರರು ತೀರ್ಮಾನಿಸಿರುವ ವಿಷಯ. ಈ ಬಾರಿ ವರುಣದಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕ ಆರಂಭವಾಗುತ್ತದೆ ಕಳೆದ ಬಾರಿ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸ್ಪರ್ಧಿಸಿದರು ಚಾಮುಂಡೇಶ್ವರಿಯ ಜನ ಕೈಹಿಡಿಯಲಿಲ್ಲ, 128 ಇದ್ದ ಕಾಂಗ್ರೆಸ್‌ 78ಕ್ಕೆ ಇಳಿಯಿತು. ಈ ಬಾರಿ ವರುಣದಲ್ಲೂ ಸೋತು ಕಾಂಗ್ರೆಸ್‌ ಐವತ್ತು ಅಂಕಿಗೆ ಇಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ..? 

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಹಿಂದೆ ಸರಿದರಾ ಎನ್ನುವ ಅನುಮಾನ ಕಂಡುಬರುತ್ತಿದೆ. ವರುಣಾ ಮತ್ತು ಕೋಲಾರದಲ್ಲಿ ಬೂತ್‌ ಮಟ್ಟದಲ್ಲಿ ಸಮೀಕ್ಷೆ ಮಾಡುತ್ತಿರುವ ಸಿದ್ದರಾಮಯ್ಯ ಅವರ ಆಪ್ತರು ಸಿದ್ದು ಪರ ಅಲೆ ಇದೆಯೇ ಎಂದು ಸರ್ವೇ ಮಾಡಿದ್ದಾರೆ. ಅಂತಿಮವಾಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಸಲಹೆ ಬಂದಿದೆ. ಜೊತೆಗೆ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರವೇ ಅದೃಷ್ಟದ ಕ್ಷೇತ್ರವೆಂದು ಅವರ ಪುತ್ರ ಯತೀಂದ್ರ ಅವರು ಸಲಹೆ ನೀಡಿದ್ದಾರೆ.

ಮುಂಬರುವ ವಿಧಾನಸಬಾ ಚುನಾವಣೆ ವೇಳೆ ಕ್ಷೇತ್ರವನ್ನು ಹುಡುಕುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ವರುಣಾ, ಕೋಲಾರ, ಕುಷ್ಟಗಿ, ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಕೇಳಿಬಂದಿತ್ತು. ಆದರೆ, ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍‌ ಒಬ್ಬರಿಗೆ ಕೇವಲ ಒಂದು ಟಿಕೆಟ್‌ ನೀಡುವ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಆಪ್ತರು ಕಿಡಿಕಾರಿದ್ದರು. ಆದರೆ, ಈಗ ಕೋಲಾರ ಮತ್ತು ವರುಣಾ ಕ್ಷೇತ್ರದಲ್ಲಿ ಬೂತ್‌ ಮಟ್ಟದಲ್ಲಿ ಸಿದ್ದಪರ ಇರುವ ಅಲೆಯನ್ನು ಸಮೀಕ್ಷೆ ಮಾಡಲಾಗಿದೆ. ಈ ವೇಳೆ ಕೋಲಾರದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಹೀಗಾಗಿ, ಕೋಲಾರವನ್ನು ಬಿಟ್ಟು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಆಪ್ತರಿಂದ ಸಿದ್ದರಾಮಯ್ಯ ಅವರಿಗೆ ಸಲಹೆ ಬಂದಿದೆ.

Karnataka Politics : ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ : ಸ್ವಾಮೀಜಿ

ಕೋಲಾರದ ಸಮಸ್ಯೆ ಬಗ್ಗೆ ಮುನಿಯಪ್ಪ ಮನವರಿಕೆ: ಈಗಾಗಲೇ ಕೋಲಾರ ಪ್ರವಾಸ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಸ್ಥಳೀಯ ಎಲ್ಲ ನಾಯಕರ ಬೆಂಬಲ ಸಿಕ್ಕಿರಲಿಲ್ಲ. ಈ ವೇಳೆ ಸ್ಥಳೀಯ ಪ್ರಬಲ ಮುಖಂಡ ಕೆ.ಎಚ್. ಮುನಿಯಪ್ಪ ಕೂಡ ಹಾಜರಾಗದೇ ಫೋನ್‌ನಲ್ಲಿ ಮಾತನಾಡಿದ್ದರು. ಜೊತೆಗೆ, ಕೋಲಾರ ಜಿಲ್ಲೆಯಲ್ಲಿ ಸ್ಥಳೀಯ ನಾಯಕರ ನಡುವೆ ಹೊಂದಾಣಿಕೆ ಕೊರತೆಯಿದ್ದು, ಅದನ್ನು ಸರಿಪಡಿಸುವಂತೆಯೂ ಸಲಹೆ ನೀಡಿದ್ದರು. ಇಡೀ ಕ್ಷೇತ್ರದಲ್ಲಿ ಮಾಡಿದ ಸಮೀಕ್ಷೆಯಿಂದ ಮತ್ತಷ್ಟು ಸಮಸ್ಯೆಗಳು ಕಂಡುಬಂದಿದ್ದು, ಇಲ್ಲಿ ಸ್ಪರ್ಧೆ ಮಾಡುವುದು ಬೇಡವೆನ್ನುವ ನಿರ್ಧಾರಕ್ಕೆ ಬರಲಾಗಿದೆ. ಕೋಲಾರ ಹೊರತುಪಡಿಸಿ ಬೇರೆ ಕ್ಷೇತ್ರಗಳ ಬಗ್ಗೆಯೂ ಸರ್ವೆ ಮಾಹಿತಿ ಪಡೆಯಲಾಗುತ್ತಿದ್ದು, ಕೊಪ್ಪಳದ ಕುಷ್ಟಗಿ ಬಗ್ಗೆ ಸರ್ವೇ ವರದಿ ತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ರಾಜ್ಯ ವಿವಿಧ ಕ್ಷೇತ್ರಗಳಿಗೆ ಹೋಲಿಕೆ ಮಾಡಿದಲ್ಲಿ ವರುಣ ಕ್ಷೇತ್ರವೇ ಸೂಕ್ತ ಎಂಬ ಅಭಿಪ್ರಾಯವನ್ನು ಆಪ್ತರು ಹೊರ ಹಾಕಿದ್ದಾರೆ.

ವರುಣಾ ಕ್ಷೇತ್ರ ಅದೃಷ್ಟದ ಕ್ಷೇತ್ರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ವರುಣಾ ವಿಧಾನಸಭಾ ಕ್ಷೇತ್ರವೇ ಅದೃಷ್ಟದ ಪ್ರದೇಶವಾಗಿದೆ. ಇಲ್ಲಿ ಸ್ಪರ್ಧೆ ಮಾಡಿ ಗೆದ್ದಾಗ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಸಿಕ್ಕಿದೆ. ಈಗಲೂ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ ಎಂದು ಸಿದ್ದರಾಮಯ್ಯ ಅರ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಜಾತಿ ಹಾಗೂ ಪಕ್ಷದ ದೃಷ್ಟಿಯಿಂದ ನೋಡಿದರೆ ಹಲವಾರು ಕ್ಷೇತ್ರಗಳು ಸೇಫ್ ಇವೆ. ಇದು ಅವರ ಕೊನೆ ಚುನಾವಣೆ ಆಗಿದ್ದರಿಂದ ವರುಣಾದಿಂದ ನಿಲ್ಲಲಿ ಎನ್ನುವುದು ಆಸೆ. ಅಪ್ಪ ವರುಣಾಗೆ ಬಂದರೆ ನಾನು ಸ್ಪರ್ಧೆ ಮಾಡಲ್ಲ. ಅಪ್ಪನಿಗಾಗಿ ದುಡಿಯುತ್ತೇನೆ. ಸಿದ್ದರಾಮಯ್ಯ ತಮ್ಮ ಕೊನೆ ಚುನಾವಣೆ ಎನ್ನುತ್ತಿದ್ದಾರೆ. ಈಗಲೂ ಸಿದ್ದರಾಮಯ್ಯ ಗೆದ್ದರೆ ಮುಖ್ಯಮಂತ್ರಿ ಆಗುವ ಅವಕಾಶಗಳಿವೆ. ವರುಣಾ ಕ್ಷೇತ್ರದಲ್ಲಿ ನಿಂತಾಗೆಲ್ಲ ಅವರಿಗೆ ಅಧಿಕಾರ ಸಿಕ್ಕಿದೆ. ಹಾಗಾಗಿ ಈ ಬಾರಿಯೂ ಸಿಗಬಹುದು ಎಂದು ಮುಖ್ಯಮಂತ್ರಿ ಕೂಗಿಗೆ ಯತೀಂದ್ರ ಧ್ವನಿಗೂಡಿಸಿದ್ದಾರೆ.

Follow Us:
Download App:
  • android
  • ios