ಚಿಕ್ಕಮಗಳೂರು : ವಾರಸ್ದಾರ ಧಾರವಾಹಿ ಚಿತ್ರೀಕರಣದ ಬಾಡಿಗೆ ಹಣ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ವಾಪಸ್ ಪಡೆಯಲು ಧಮ್ಕಿ ಹಾಕಿದ ಆರೋಪ ಹಿನ್ನೆಲೆ  ಇಬ್ಬರು ವ್ಯಕ್ತಿಗಳ ವಿರುದ್ಧ FIR ದಾಖಲಿಸಲಾಗಿದೆ. 

ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ನವೀನ್ ಹಾಗೂ ಸಂಜಯ್ ಎಂಬ ಇಬ್ಬರು ವ್ಯಕ್ತಿಗಳ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ಮಲ್ಲಂದೂರು ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.   

ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ನವೀನ್ ಎಂದು ಹೇಳಿಕೊಂಡು‌ ಧಮ್ಕಿ ಹಾಕಿದ್ದು, ಕೊಲೆ, ಜೀವ ಬೆದರಿಕೆ ಆರೋಪ ಹಿನ್ನಲೆ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲಾಗಿದೆ. 

ವಾರಸ್ದಾರ ಧಾರವಾಹಿ ಚಿತ್ರೀಕರಣದ ಬಾಡಿಗೆ ಹಣ ಬಾಕಿ ಸಂಬಂಧ ದೀಪಕ್ ಪ್ರಕರಣ ದಾಖಲು ಮಾಡಿದ್ದು, ಇದರಿಂದ ಕೇಸ್ ವಾಪಸ್ ಪಡೆಯಲು ದೀಪಕ್ ಮಯೂರ ಪಟೇಲ್ ಎಂಬ ವ್ಯಕ್ತಿಗೆ  ಧಮ್ಕಿ‌ ಹಾಕಿದ್ದರು.

ಚಿಕ್ಕಮಗಳೂರು ತಾಲೂಕಿನ ಬೈಗೂರು‌ ಗ್ರಾಮದಲ್ಲಿ ವಾರಸ್ದಾರ ಧಾರವಾಹಿ ಚಿತ್ರೀಕರಣ ನಡೆಸಲಾಗಿತ್ತು. ಕಿಚ್ಚ ಸುದೀಪ್ ಧಾರಾವಹಿ ನಿರ್ಮಾಣ ಮಾಡಿದ್ದು, ಚಿತ್ರೀಕರಣಕ್ಕೆ  ದೀಪಕ್ ‌ಮಯೂರ್ ಅವರ ಮನೆಯನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. 

ಆದರೆ ಚಿತ್ರೀಕರಣದ ಬಳಿಕ ಬಾಡಿಗೆ ಹಣ ನೀಡಿಲ್ಲವೆಂದು ದೀಪಕ್ ದೂರು ನೀಡಿದ್ದರು. ಬಳಿಕ ದೂರನ್ನು ವಾಪಸ್ ಪಡೆದುಕೊಳ್ಳಬೇಕೆಂದು ಬೆದರಿಕೆ ಹಾಕಲಾಗಿತ್ತು.