Valmiki Jatre 2023: ಇಂದು, ನಾಳೆ ಅದ್ಧೂರಿ ವಾಲ್ಮೀಕಿ ರಥೋತ್ಸವ, ಸಾಮೂಹಿಕ ವಿವಾಹ
ರಾಜ್ಯದ ವಾಲ್ಮೀಕಿ ನಾಯಕ ಸಮುದಾಯ ಒಂದೆಡೆ ಸೇರಿಸಿ ಸಾಂಸ್ಕೃತಿಕವಾಗಿ ಎಚ್ಚರಿಸುವ ಚಿಂತನೆಯಲ್ಲಿ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಿಂದ ರೂಪಿಸಿರುವ ವಾಲ್ಮೀಕಿ ಜಾತ್ರೆಯ ಐದನೇ ವರ್ಷದ ಉತ್ಸವಕ್ಕೆ ಇಂದು ಅದ್ಧೂರಿ ಚಾಲನೆ ದೊರೆಯಲಿದೆ.
ಹರಿಹರ (ಫೆ.8) : ರಾಜ್ಯದ ವಾಲ್ಮೀಕಿ ನಾಯಕ ಸಮುದಾಯ ಒಂದೆಡೆ ಸೇರಿಸಿ ಸಾಂಸ್ಕೃತಿಕವಾಗಿ ಎಚ್ಚರಿಸುವ ಚಿಂತನೆಯಲ್ಲಿ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಿಂದ ರೂಪಿಸಿರುವ ವಾಲ್ಮೀಕಿ ಜಾತ್ರೆಯ ಐದನೇ ವರ್ಷದ ಉತ್ಸವಕ್ಕೆ ಇಂದು ಅದ್ಧೂರಿ ಚಾಲನೆ ದೊರೆಯಲಿದೆ.
ಕಾರ್ಯಕ್ರಮದ ವಿವರ:
ಫೆ.8ರಂದು ಬೆಳಗ್ಗೆ 7ರಿಂದ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆ ಹಾಗೂ ಮಹರ್ಷಿ ವಾಲ್ಮೀಕಿ ಧ್ವಜಾರೋಹಣದ ಸಾನ್ನಿಧ್ಯ ಪ್ರಸನ್ನಾನಂದ ಶ್ರೀಗಳು ವಹಿಸಲಿದ್ದು, ಅಧ್ಯಕ್ಷತೆ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಲಂಕೇಶ್ ವಹಿಸಿ 5ನೇ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ನಂತರ 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿದೆ.
Valmiki Jayanti: ರಾಷ್ಟ್ರಪತಿಗೆ ಆಹ್ವಾನ ನೀಡಲು ಸಿದ್ಧತೆ
ಜಾತ್ರೆಗೆ ಭರ್ಜರಿ ಸಿದ್ಧತೆ: ಊಟದ ವ್ಯವಸ್ಥೆ
ಜಾತ್ರೆಯ ಭದ್ರತೆಗೆ ಡಿವೈಎಸ್‌ಪಿ 4, ಸಿಪಿಐ 12, ಪಿಎಸ್‌ಐ 36, ಎಎಸ್‌ಐ 46, ಪೇದೆಗಳು 363, ಗೃಹ ರಕ್ಷಕ ಸಿಬ್ಬಂದಿ 200 ಮಂದಿ ಭದ್ರತೆಗೆ ನಿಯೋಜಿಸಲಾಗಿದೆ. ವೇದಿಕೆ,ಸಭಾಂಗಣದಲ್ಲಿ 30,000 ಆಸನಗಳ ವ್ಯವಸ್ಥೆ, 2 ಭಾಗದಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಭದ್ರತೆ ದೃಷ್ಟಿಯಿಂದ 40ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ. ಊಟದ ವ್ಯವಸ್ಥೆಗಾಗಿ 100 ಕೌಂಟರ್‌ಗಳು, 450 ಮಂದಿ ಅಡುಗೆ ಭಟ್ಟರು, ಹೆಸರುಬೇಳೆ ಪಾಯಸ, ಗೋದಿ ಪಾಯಸ, ಅನ್ನ, ಸಾಂಬಾರ್, ಬೆಳಗಿನ ಉಪಹಾರಕ್ಕೆ ಟೊಮಾಟೋ ಬಾತ್, ಪಲಾವ್ ಹಾಗೂ ಇತರೆ ಆಹಾರ ಪದಾರ್ಥಗಳು ಔತಣಕ್ಕೆ ಸಿದ್ಧವಾಗಿವೆ.
ನಾಳೆ ಜಿಲ್ಲೆಗೆ ಸಿಎಂ ಬೊಮ್ಮಾಯಿ
ದಾವಣಗೆರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ.9 ರಂದು ಜಿಲ್ಲೆಗೆ ಆಗಮಿಸಲಿದ್ದು, ಅಂದು ಮಧ್ಯಾಹ್ನ 1.50ಕ್ಕೆ ಹೆಲಿಕಾಪ್ಟರ್ ಮೂಲಕ ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿ ಗುರುಪೀಠದ ವತಿಯಿಂದ ಆಯೋಜಿಸಿರುವ 2023ನೇ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಜನಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನೆಯಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 3.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
Davanagere: ಶಾಮನೂರು ಶಿವಶಂಕರಪ್ಪ ಬಗ್ಗೆ ಹಗುರ ಮಾತು ಬೇಡ: ವೀರಶೈವ ಮಹಾಸಭಾ ಎಚ್ಚರಿಕೆ