ಪಂಚಮಸಾಲಿ ಮೀಸಲಾತಿ: ಹೋರಾಟ ಅತಿರೇಕವಾಗಬಾರದು, ಪರೋಕ್ಷವಾಗಿ ಕೂಡಲ ಶ್ರೀಗೆ ತಿವಿದ ವಚನಾನಂದ ಶ್ರೀ

ಹೋರಾಟ ಅತಿರೇಕವಾಗಬಾರದು. ಸರ್ಕಾರ ಪಂಚಮಸಾಲಿಗಳ ಮೇಲೆ ಆಗಿರುವ ಮೇಲೆ ಕೇಸ್ ಆಗಿದ್ರು ಅದನ್ನು ವಾಪಸ್‌ ಪಡೆಯಬೇಕು. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋರಾಟಕ್ಕೆ ಬಂದಿದ್ದರು. ರಾಜಕೀಯ ವ್ಯಕ್ತಿಗಳ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡೋದಿಲ್ಲ ಎಂದ ವಚನಾನಂದ ಸ್ವಾಮೀಜಿ 
 

Vachananand Swamiji Talks Over Panchamasali Reservation Struggle grg

ದಾವಣಗೆರೆ(ಡಿ.11):  ಬೆಳಗಾವಿಯಲ್ಲಿ ಲಾಠಿಚಾರ್ಜ್ ಆಗಬಾರದಿತ್ರು, ಅದನ್ನು ನಾವು ಖಂಡಿಸುತ್ತೇವೆ. ಪಂಚಮಸಾಲಿ ಸಮಾಜ ಮುಗ್ಧ ಸಮಾಜ ಅವರು ಹೊಡೆದಾಟಕ್ಕೆ ಹೋಗಿರಲಿಲ್ಲ. ಘಟನೆಯಲ್ಲಿ ಅಮಾಯಕ ಪಂಚಮಸಾಲಿಗಳು ಗಾಯಗೊಂಡಿದ್ದಾರೆ. ಪಂಚಮಸಾಲಿಗಳ ಜೊತೆ ಕೆಲ ಪೋಲೀಸರಿಗೂ ಗಾಯಗಳಾಗಿವೆ. ಯಾರೋ‌ ಕಿಡಿಗೇಡಿಗಳು ಕಲ್ಲು ತೂರಿ ಗಲಾಟೆ ಮಾಡುವಂತೆ ಮಾಡಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜಕ್ಕೆ ಕಪ್ಪು ಚುಕ್ಕೆ ತರಲು ಈ ರೀತಿ ಮಾಡಿದ್ದಾರೆ. ಘಟನೆಯಲ್ಲಿ ಕಿಡಿಗೇಡಿಗಳ ಕೃತ್ಯದ ಬಗ್ಗೆ ಸೂಕ್ತ ತನಿಖೆ ಮಾಡಿ ಅವರಿಗೆ ಶಿಕ್ಷೆ ನೀಡಬೇಕಿದೆ ಎಂದು ವಚನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದ ಸ್ವಾಮೀಜಿ ಅವರು, ಹೋರಾಟ ಅತಿರೇಕವಾಗಬಾರದು. ಸರ್ಕಾರ ಪಂಚಮಸಾಲಿಗಳ ಮೇಲೆ ಆಗಿರುವ ಮೇಲೆ ಕೇಸ್ ಆಗಿದ್ರು ಅದನ್ನು ವಾಪಸ್‌ ಪಡೆಯಬೇಕು. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋರಾಟಕ್ಕೆ ಬಂದಿದ್ದರು. ರಾಜಕೀಯ ವ್ಯಕ್ತಿಗಳ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದ್ದಾರೆ. 

ಪಂಚಮಸಾಲಿ ಹೋರಾಟ: ಪೊಲೀಸರಿಂದಲೇ ಕಲ್ಲು ತೂರಾಟ, ಕೂಡಲ ಶ್ರೀ

ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇದನ್ನು ವೇದಿಕೆ ಮಾಡಿಕೊಂಡಿದ್ದಾರೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂಬುದು ನಮ್ಮ ಆಶಯ ಹೋರಾಟ ಕೂಡ ಆಗಿದೆ.  ನಾವು ಈಗಲು ಕಾನೂನು ಬದ್ದ ಹೋರಾಟಕ್ಕೆ ಬದ್ದರಾಗಿದ್ದು   ಈಗ ವಕೀಲರು ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಹಿಂದೆ ಸರ್ಕಾರ 2ಡಿಯನ್ನು ನೀಡಿದ್ದು ನಾವು ಒಪ್ಪಿರಲ್ಲಿಲ್ಲ. ಅದನ್ನು ಕೆಲವರು ಸಂಭ್ರಮಿಸಿದವರು ಯಾರು ಎಂದು ಹೇಳಿ ಎಂದು ಕೂಡಲಸಂಗಮ ಶ್ರೀಗೆ ವಚನಾನಂದ ಸ್ವಾಮೀಜಿ ಪರೋಕ್ಷವಾಗಿ ತಿವಿದಿದ್ದಾರೆ. 

ಸಿಎಂ, ಪೋಲಿಸರ ಪ್ರೀ ಪ್ಲ್ಯಾನ್‌ನಿಂದ ಲಾಠಿ ಚಾರ್ಜ್‌: ಸಿದ್ದು ಸರ್ಕಾರದ ವಿರುದ್ಧ ಜಯಮೃತುಂಜಯ ಶ್ರೀಗಳ ಆಕ್ರೋಶ

ಅದನ್ನು ಒಪ್ಪದೆ ಕಾನೂನು ಹೋರಾಟವನ್ನು ನಾವು ಮಾಡುತ್ತಿದ್ದೇವೆ. ರಾಜ್ಯದಲ್ಲಿ 2A ಮೀಸಲಾತಿ ನೀಡಬೇಕು ಜೊತೆಗೆ ಕೇಂದ್ರದಲ್ಲಿ ಒಬಿಸಿಗೆ ಶಿಪಾರಸ್ಸು ಮಾಡಬೇಕಿದೆ. ಕೆಲವರು ತಾವು ಲೀಡರ್ ಆಗಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿ ಹೋರಾಟ ಸಾತ್ವಿಕ ಹೋರಾಟ ಇರಲಿ,  ಕಾನೂನು ಹೋರಾಟ ಮಾತ್ರ ನಿಲ್ಲುವುದೇ ಹೊರೆತು ಮತ್ಯಾವುದು ನಿಲ್ಲುವುದಿಲ್ಲ. ಈ ಹಿಂದೆ ಅಲ್ಪಸಂಖ್ಯಾತರ ಕೋಟಾವನ್ನು ಕಿತ್ತು ನಮಗೆ ಕೊಟ್ಟಿದ್ದರು ಅವರು ಸುಪ್ರೀಂ‌‌ಕೋರ್ಟ್ ಗೆ ಹೋದರು. ಇರುವ ಮೀಸಲಾತಿಯನ್ನು ಹೆಚ್ಚಿಸಿ ನಮಗೆ ಸರ್ಕಾರ ಮೀಸಲಾತಿ ಘೋಷಣೆ ಮಾಡಲಿ ಎಂದು ಆಗ್ರಹಿಸಿದ್ದಾರೆ.  

ನಾಳೆ ರಾಜ್ಯಾದ್ಯಂತ ಪಂಚಮಸಾಲಿ ಸಮಾಜದ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ  ಮಾತನಾಡಿದ ವಚನಾನಂದ ಶ್ರೀಗಳು, ಹೋರಾಟದ ಬಗ್ಗೆ ನಮಗೆ ಮಾಹಿತಿ ಇಲ್ಲ. ಮೀಸಲಾತಿ ಪಡೆಯುವ ಹೋರಾಟ ಅತಿರೇಕ ಆಗಬಾರದು. ಸರ್ಕಾರದ ಜೊತೆ ನಾವು ಕೂತು ಮಾತನಾಡಿದರೆ ಸರಿಯಾಗುತ್ತದೆ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios