ಸಿಎಂ, ಪೋಲಿಸರ ಪ್ರೀ ಪ್ಲ್ಯಾನ್‌ನಿಂದ ಲಾಠಿ ಚಾರ್ಜ್: ಸಿದ್ದು ಸರ್ಕಾರದ ವಿರುದ್ಧ ಜಯಮೃತುಂಜಯ ಶ್ರೀಗಳ ಆಕ್ರೋಶ
ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದದಿಸಬೇಕೆಂದು ನಾವು ಸಿಎಂ ಸಿದ್ದರಾಮಯ್ಯ ಅವರನ್ನ ಕರೆದಿದ್ದೆವು. ಆದರೆ ಸಿಎಂ ನಮಗೆ ಸ್ಪಂದನೆ ನೀಡದ ಹಿನ್ನಲೆಯಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ಮುಂದಾದೆವು: ಕೂಡಲ ಸಂಗಮ ಪಂಚಮಲಸಾಲಿ ಪೀಠದ ಬಸವ ಜಯ ಮೃತುಂಜಯ ಸ್ವಾಮೀಜಿ
ಚಿತ್ರದುರ್ಗ/ಬೆಳಗಾವಿ(ಡಿ.10): ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಮಾಯಕರ ಮೇಲೆ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ರಾಮ, ಹನುಮಾನ್, ಕೇಸರಿ ಕಂಡರೆ ಆಗಲ್ಲ. ಸಂಕಟ ಬಂದಾಗ ವೆಂಟಕರಮಣ ಎಂಬಂತೆ ನಡೆದುಕೊಳ್ಳುತ್ತಾರೆ. ರಾಮನ ಹೆಸರಿಟ್ಟುಕೊಂಡು ಕ್ರೌರ್ಯ ಮೆರೆಯುತ್ತಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕು. ಹಿಂದೂ, ರೈತ, ಮಹಿಳಾ ವಿರೋಧಿ ಸರ್ಕಾರ ತೊಲಗಬೇಕು ಎಂದು ಕಿಡಿ ಕಾರಿದ್ದಾರೆ.
ಜಾತಿಗಣತಿಗೆ ನಮ್ಮ ವಿರೋಧವಿಲ್ಲ, ಕಾಂತರಾಜು ವರದಿಯ ಮೇಲೆ ಅನುಮಾನಗಳಿವೆ: ಕೂಡಲ ಶ್ರೀ
ಶ್ರೀಗಳನ್ನು ಕರೆಸಿ ಮಾತನಾಡುವ ಬದಲು ಬಂಧಿಸಲಾಗಿದೆ. ಕಂಡಲ್ಲಿ ಗುಂಡಿಕ್ಕಿ ಶ್ರೀಗಳನ್ನೇ ಮುಗಿಸುವ ಪಿತೂರಿ ಇತ್ತೇನೋ?. ಜನ ವಿರೋಧಿ, ಮಠಾಧೀಶರ ವಿರೋಧಿ ಸರ್ಕಾರ ಪತನ ಆಗಬೇಕು. ಇಂದು ಧರಣಿ ನಿರತ ಸ್ಥಳಕ್ಕೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ ಭೇಟಿ ನೀಡಿ ಬಸವಮೃತ್ಯುಂಜಯ ಶ್ರೀಗಳನ್ನ ಭೇಟಿ ಮಾಡಿ ಬೆಂಬಲಿಸಿದ್ದರು ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖಂಡರನ್ನು ನೋಡಿ ಹಿಂದೆ ಸರಿದು ನಿಂತ ಮೃಣಾಲ್
ಬಿಜೆಪಿ ಮುಖಂಡರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಹೋರಾಟದ ವೇಳೆ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಶಾಸಕ ಅರವಿಂದ ಬೆಲ್ಲದ್, ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಸ್ಥಳೀಯ ಪಂಚಮಸಾಲಿ ಮುಖಂಡರು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದ್ದಾರೆ.
ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ಮುಖಂಡರು ಆಸ್ಪತ್ರೆಗೆ ಬಂದಿದ್ದು ನೋಡಿ ಮೃಣಾಲ್ ಹಿಂದೆ ಸರಿದು ನಿಂತಿದ್ದಾರೆ.
ಪಂಚಮಸಾಲಿ 2ಎ ಮೀಸಲಾತಿ: ನಮ್ಮ ಸಮಾಜದ ಶಾಸಕರಿಗೂ ಇಚ್ಛಾಶಕ್ತಿ ಕೊರತೆ ಎದ್ದು ಕಾಣ್ತಿದೆ, ಕೂಡಲ ಶ್ರೀ
ಪಂಚಮಸಾಲಿ ಮೀಸಲಾತಿ ಹೋರಾಟ ವೇಳೆ ಲಾಠಿ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೂಡಲ ಸಂಗಮದ ಪಂಚಮಲಸಾಲಿ ಪೀಠದ ಬಸವ ಜಯ ಮೃತುಂಜಯ ಸ್ವಾಮೀಜಿ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದದಿಸಬೇಕೆಂದು ನಾವು ಸಿಎಂ ಸಿದ್ದರಾಮಯ್ಯ ಅವರನ್ನ ಕರೆದಿದ್ದೆವು. ಆದರೆ ಸಿಎಂ ನಮಗೆ ಸ್ಪಂದನೆ ನೀಡದ ಹಿನ್ನಲೆಯಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ಮುಂದಾದೆವು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. ಸಿಎಂ ವೇದಿಕೆಗೆ ಬಂದು ಸ್ಪಷ್ಟ ಭರವಸೆ ನೀಡಿ ಅಂತಾ ಹೇಳಿದ್ವಿ. ಆದರೆ ಸಿಎಂ ಬರದೆ ಸರ್ಕಾರದ ಪರವಾಗಿ 3 ಸಚಿವರನ್ನ ಕಳಸಿದ್ದರು. ಸಿಎಂ ಬರುವರೆಗೂ ನಾವು ಬಿಡಲ್ಲ ಎಂದ ಹೋರಾಟಗಾರರು ಹಠ ಹಿಡಿದಿದ್ದರು. ಹೀಗಾಗಿ ಸಿಎಂ ಇದ್ದಲ್ಲಿಗೇ ಹೋಗಲು ಯತ್ನಿಸಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಟ್ಯಾಕ್ಟರ್ ಹಾಗೂ ಹೋರಾಟಕ್ಕೆ ಬರುವ ಹೋರಾಟಗಾರರನ್ನ ತಡೆದು ಹೋರಾಟಕ್ಕೆ ಬರಲು ನಿರ್ಬಂಧ ಹೇರಿದರು. ನಮ್ಮ ಹೋರಾಟದಿಂದ ಸಿಎಂ ಹತಾಶರಾಗಿದ್ದಾರೆ. ಸಿಎಂ ಹಾಗೂ ಪೋಲಿಸರು ಪ್ರೀ ಪ್ಲ್ಯಾನ್ ಮಾಡಿಸಿ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಲಿಂಗಾಯತರ ಮೇಲೆ ಯಾವ ಸರ್ಕಾರ ಕೂಡ ಹಲ್ಲೆ ಮಾಡಿಲ್ಲ. ಈ ಸರ್ಕಾರ ನಮ್ಮ ಮೇಲೆ ಹಲ್ಲೆ ಮಾಡಿದೆ. ಈ ಸರ್ಕಾರ ನಮ್ಮ ಮೇಲೆ ಗೋಲಿಬಾರ್ ಮಾಡಲು ಹೇಸುತ್ತಿರಲಿಲ್ಲ. ನಿಮ್ಮ ಸರ್ಕಾರದಿಂದ ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಹೇಳಿ, ಇಲ್ಲವಾದರೆ ನಮಗೆ ಯಾರು ನ್ಯಾಯ ಒದಗಿಸುತ್ತಾರೋ ಆ ಸರ್ಕಾರ ತರುತ್ತೇವೆ. ಇದೇ 12 ರಂದು ಪ್ರತಿ ಗ್ರಾಮದ ರಸ್ತೆ ತಡೆದು ಪ್ರತಿಭಟನೆ ಮಾಡಲು ಕರೆ ನೀಡಿದ್ದೇವೆ. ನಮ್ಮನ್ನು ಸಿಎಂ ಮಾತನಾಡಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ನಾವೇ ಸೌಧಕ್ಕೆ ಹೋಗಲು ಪ್ರಯತ್ನಿಸಿದ್ದೀವಿ ಎಂದು ಬಸವ ಜಯ ಮೃತುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.