ಕಾರವಾರದಲ್ಲಿ ಮೀಟರ್ ಬಡ್ಡಿ ದಂಧೆಕೋರನನ್ನು ಸಾಲಗಾರರು ಕಿಡ್ನಾಪ್ ಮಾಡಿ 32 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ವಿಶೇಷ ಪ್ರಕರಣ ಬೆಳಕಿಗೆ ಬಂದಿದೆ. ಮುಂಡಗೋಡದಲ್ಲಿ ನಡೆದ ಈ ಘಟನೆಯಲ್ಲಿ ಜಮೀರ್ ಎಂಬಾತನನ್ನು ಖ್ವಾಜಾ ಮತ್ತು ಆತನ ಗ್ಯಾಂಗ್ ಕಿಡ್ನಾಪ್ ಮಾಡಿದ್ದಾರೆ.
ಕಾರವಾರ, ಉತ್ತರಕನ್ನಡ (ಜ.31): ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಜನರು ಬೇಸತ್ತು ಸಾವಿಗೆ ಶರಣಾಗುತ್ತಿರುವ ಗಟನೆಗಳು ಸದ್ದು ಮಾಡಿತ್ತಿರುವ ಬೆನ್ನಲ್ಲೇ ಕಾರವಾರದಲ್ಲೊಂದು ವಿಶೇಷ ಪ್ರಕರಣ ಬೆಳಕಿಗೆ ಬಂದಿದೆ. ಮೀಟರ್ ಬಡ್ಡಿ ದಂಧೆಯನ್ನು ಮಾಡುತ್ತಿದ್ದ ವ್ಯಕ್ತಿಯನ್ನೇ ಕಿಡ್ನಾಪ್ ಮಾಡಿದ ಸಾಲಗಾರ ಖ್ವಾಜಾ ಅಂಡ್ ಗ್ಯಾಂಗ್ ಆತನ ಕುಟುಂಬದಿಂದ 32 ಲಕ್ಷ ರೂ.ಗೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ದಾಖಲಾದ ಮೀಟರ್ ಬಡ್ಡಿಯ ವಿಶೇಷ ಪ್ರಕರಣವಾಗಿದೆ. ಮೀಟರ್ ಬಡ್ಡಿ ದಂಧೆಯ ಕುರಿತು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಕಿಡ್ನ್ಯಾಪ್ ಆಗಿದ್ದ ಜಮೀರ್ ದರ್ಗಾವಾಲೆ ಎಂಬಾತ ಮುಂಡಗೋಡ ಪಟ್ಟಣದಲ್ಲಿ ಮೀಟರ್ ಬಡ್ಡಿ ನಡೆಸುತ್ತಿದ್ದನು. ಆದರೆ, ಆತನಿಂದ ಸಾಲ ಪಡೆದುಕೊಂಡವರು ಮೀಟರ್ ಬಡ್ಡಿ ಕಟ್ಟಲು ಸಾಧ್ಯವಾಗದೇ, ಹೈರಾಣಾಗಿ ಸಾಲ ಕೊಟ್ಟ ವ್ಯಕ್ತಿಯನ್ನೇ ಕಿಡ್ನ್ಯಾಪ್ ಮಾಡಿದ್ದಾರೆ.
ಇನ್ನು ಮೀಟರ್ ಬಡ್ಡಿ ನಡೆಸುತ್ತಿದ್ದ ಜಮೀರ್ ತಾನು 1 ಲಕ್ಷ ರೂ. ಸಾಲ ಕೊಟ್ಟರೆ ಅದಕ್ಕೆ ಒಂದು ತಿಂಗಳಿಗೆ 30 ಸಾವಿರ ರೂ. ಬಡ್ಡಿ ಕೊಡಬೇಕಿತ್ತು. ಅಂದರೆ, ಕೇವಲ ನಾಲ್ಕು ತಿಂಗಳಿಗೆ ಈತ ಕೊಟ್ಟ ಸಾಲದ ಹಣ ಬಡ್ಡಿಯ ರೂಪದಲ್ಲಿಯೇ ಡಬಲ್ ಆಗುತ್ತಿತ್ತು. ಅಂದರೆ, ಜಮೀರ್ ಬಳಿ 1 ಲಕ್ಷ ರೂ. ಸಾಲ ಪಡೆದರೆ ತಿಂಗಳಿಗೆ 30,000 ರೂ. ಬಡ್ಡಿ ಕೊಡಬೇಕು. ಕೆಲವೇ ತಿಂಗಳಲ್ಲಿ ಈತ ಕೊಟ್ಟ ಸಾಲದ ಅಸಲು ಕೊಡಲು ಬಂದರೆ, ಅಸಲು ಪಡೆಯದೇ ಇನ್ನೂ ಕೆಲವು ತಿಂಗಳ ಕಾಲ ಬಡ್ಡಿ ಕಟ್ಟಿಕೊಂಡು ಹೋಗುವಂತೆ ಕಿರುಕುಳ ನೀಡುತ್ತಿದ್ದನು.
ಇದನ್ನೂ ಓದಿ: ಮೈಸೂರಿನಲ್ಲಿ ಕೂತು ದುಬೈನಲ್ಲಿದೀವಿ ಅಂತಾ ವಂಚಿಸ್ತಿದ್ದ ಖದೀಮರ ಬಂಧನ ಹೇಗೆ ವಂಚಿಸುತ್ತಿದ್ದರು ಗೊತ್ತಾ?
ಇದೇ ರೀತಿ ಮುಂಡಗೋಡ ಪಟ್ಟಣದ ನಿವಾಸಿ ಖ್ವಾಜಾ ಎಂಬ ವ್ಯಕ್ತಿಗೆ ಜಮೀರ್ 1 ಲಕ್ಷ ರೂ. ಮೀಟರ್ ಬಡ್ಡಿಗೆ ಸಾಲ ಕೊಟ್ಟಿದ್ದನು. ಸಾಲದ ಬಡ್ಡಿಯನ್ನು ಕೊಡುವಂತೆ ಪ್ರತೀ ತಿಂಗಳು ಜಮೀರ್ ಕಡೆಯ ಹುಡುಗರು ಪೀಡಿಸುತ್ತಿದ್ದರು. ಜೊತೆಗೆ, ಖ್ವಾಜಾಗೆ ಇನ್ನಷ್ಟು ಸಾಲ ಬೇಕು ಕೊಡು ಎಂದರೂ ಕೊಡದೇ ಜಮೀರ್ ಕೇವಲ ಬಡ್ಡಿ ವಸೂಲಿಗೆ ಹುಡುಗರನ್ನು ಕಳುಹಿಸುತ್ತಿದ್ದನು. ಆದ್ದರಿಂದ ಸಾಲ ಕೊಟ್ಟ ಜಮೀರ್‌ನನ್ನು ಕಿಡ್ನ್ಯಾಪ್ ಮಾಡಿದ ಖ್ವಾಜಾ ಆ್ಯಂಡ್ ಗ್ಯಾಂಗ್ ಜಮೀರನ ಕುಟುಂಬಸ್ಥರಿಂದ 32 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಜಮೀರ್‌ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಕಿಡ್ನ್ಯಾಪರ್ಸ್ ಕೇಳಿದ್ದ 32 ಲಕ್ಷ ರೂ.ನಲ್ಲಿ ಮೊದಲ ಕಂತು ಹಣವಾಗಿ 18 ಲಕ್ಷ ರೂ. ಹಣವನ್ನು ಕೊಡಲು ಹೋಗಿದ್ದರು. ಆದರೆ, ಈ ವೇಳೆ ಜಮೀರ್‌ನನ್ನು ಕಳ್ಳರು ಕಿಡ್ನಾಪ್ ಮಾಡಿದ್ದು, ತಾವು ಹಣ ಕೊಡಲು ಹೋಗುತ್ತಿದ್ದು, ಮುಂದಾಗುವ ಅನಾಹುತದಿಂದ ಕಾಪಾಡುವಂತೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಮೀರ್‌ನ ಕುಟುಂಬ ಸದಸ್ಯರು ಹಣ ಕೊಡಲು ಹೋದಾಗ ಪೊಲೀಸರ ತಂಡದಿಂದ 13 ಜನರ ಕಿಡ್ನ್ಯಾಪ್ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಿದಾಗ ಜಮೀರ್ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಕರಾಳ ಮುಖವನ್ನು ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆನ್‌ಲೈನ್ ವಂಚನೆ ಆಘಾತಕಾರಿ ಪ್ರಕರಣ; 1 ಅನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!
