ಹಗ್ಗದಿಂದ ಕೈ-ಕಾಲು ಕಟ್ಟಿ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ
ಶಾಲೆಗೆ ಸಮರ್ಪಕವಾಗಿ ಹಾಜರಾಗುತ್ತಿಲ್ಲ ವಿದ್ಯಾರ್ಥಿನಿಗೆ ಶಿಕ್ಷಕನೋರ್ವ ವಿದ್ಯಾರ್ಥಿನಿಯ ಕೈ ಕಾಲು ಕಟ್ಟಿ ಶಿಕ್ಷಕನೋರ್ವ ಥಳಿಸಿದ್ದು, ಸೇವೆಯನ್ನು ಅಮಾನತು ಮಾಡಲಾಗಿದೆ.
ಜೋಯಿಡಾ [ಜ.21]: ಶಾಲೆಗೆ ಸಮರ್ಪಕವಾಗಿ ಹಾಜರಾಗುತ್ತಿಲ್ಲ ಎಂದು ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಬಿಸಿಲಿನಲ್ಲಿ ನಿಲ್ಲಿಸಿ ಹಗ್ಗದಿಂದ ಆತನ ಕೈಕಾಲು ಕಟ್ಟಿಬಾಸುಂಡೆ ಬರುವಂತೆ ಥಳಿಸಿರುವ ಘಟನೆ ತಾಲೂಕಿನ ಬಿರಂಪಾಲಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.
ಪುಳಿಯೋಗರೆ’ ಪದ ಹೇಳಿಸಿ ಹಾಸ್ಯ ಮಾಡಿದ್ದ ಶಿಕ್ಷಕ ಸಸ್ಪೆಂಡ್!...
ಶಿಕ್ಷಕ ರೊಸಯ್ಯ ರೆಡ್ಡಿ ಪೋಗೊ ಈ ಕೃತ್ಯ ಎಸಗಿದ ಆರೋಪಕ್ಕೆ ಗುರಿಯಾಗಿದ್ದು, 4ನೇ ತರಗತಿಯ ಜಾನು ಠಕ್ಕು ಗೌಳಿ ಥಳಿತಕ್ಕೊಳಗಾದ ವಿದ್ಯಾರ್ಥಿ. ಕಳೆದ ಕೆಲ ದಿನಗಳಿಂದ ಶಾಲೆಗೆ ಗೈರಾಗಿದ್ದ ಜಾನು ಸೋಮವಾರ ಶಾಲೆಗೆ ಆಗಮಿಸಿದ್ದು, ಈ ವೇಳೆ ಶಿಕ್ಷಕ ರೊಸಯ್ಯ ವಿದ್ಯಾರ್ಥಿ ಮೇಲೆ ಕೋಪ ವ್ಯಕ್ತಪಡಿಸಿದ್ದಾನೆ. ಬಾಲಕನ ಕೈಕಾಲನ್ನು ಕಟ್ಟಿ, ಬಿಸಿಲಿನಲ್ಲಿ ನಿಲ್ಲಿಸಿ ಬೆನ್ನ ಮೇಲೆ ನೀರು ಸುರಿದು ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ.
ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!...
ಈ ವೇಳೆ ವಿದ್ಯಾರ್ಥಿ ಅಳುವುದನ್ನು ಕೇಳಿಸಿಕೊಂಡು ಸ್ಥಳೀಯರು ಶಾಲೆಯತ್ತ ಧಾವಿಸಿದ್ದು, ವಿದ್ಯಾರ್ಥಿ ಮೇಲೆ ಕೌರ್ಯ ಎಸಗಿದ ಶಿಕ್ಷಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಸುದ್ದಿ ತಿಳಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಶಿಕ್ಷಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.