Uttarakannada: ಬೈಕ್ ಮಿಸ್ಸಿಂಗ್ ಪ್ರಕರಣ, ದೆವ್ವದ ಕಾಟದ ಆರೋಪಕ್ಕೆ ಪೊಲೀಸರಿಂದ ತೆರೆ
ಉತ್ತರಕನ್ನಡ ಜಿಲ್ಲೆಯ ಟಿಬೇಟಿಯನ್ ಕಾಲೋನಿಯಲ್ಲಿ ಮಿಸ್ಸಿಂಗ್ ಆಗಿದ್ದ ಬೈಕ್ ಕೊನೆಗೂ ವಾಪಾಸ್ ದೊರಕಿದೆ. ಹೋಟೆಲ್ ಒಂದರ ಸಿಸಿ ಕ್ಯಾಮೆರಾ ಚೆಕ್ ಮಾಡಿಸಿದ ವೇಳೆ ನೋಡು ನೋಡುತ್ತಿದ್ದಂತೇ ಬೈಕ್ ಕಣ್ಮರೆಯಾಗುತ್ತಿರುವುದು ಕಂಡು ಬಂದಿತ್ತು. ಇದನ್ನು ನೋಡಿದ ಜನರು ದೆವ್ವದ ಕೈವಾಡವೆಂದೇ ನಂಬಿ ಭೀತಿಗೊಳಗಾಗಿದ್ದರು. ಪೊಲೀಸರು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಉತ್ತರಕನ್ನಡ (ಡಿ.8): ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಮಿಸ್ಸಿಂಗ್ ಆಗಿದ್ದ ಬೈಕ್ ಕೊನೆಗೂ ವಾಪಾಸ್ ದೊರಕಿದೆ. ಮುಂಡಗೋಡದ ಟಿಬೇಟಿಯನ್ ಲಾಮಾ ಕ್ಯಾಂಪ್ 1ರ ಮೂರನೇ ಕ್ರಾಸ್‌ನಲ್ಲಿ ಗ್ಯಾರೇಜ್ ಬಳಿ ಇರಿಸಿದ್ದ ಯಮಹಾ R15 ಬೈಕ್‌ವೊಂದು ನೋಡು ನೋಡುತ್ತಿದ್ದಂತೇ ಮಾಯವಾಗುತ್ತಿರುವ ಸಿಸಿ ಕ್ಯಾಮೆರಾ ದೃಶ್ಯ ಸಾಕಷ್ಟು ಜನರನ್ನು ಆತಂಕಕ್ಕೀಡು ಮಾಡಿತ್ತು. ಸ್ಥಳೀಯ ಇಂದೂರ ಗ್ರಾಮದ ಲಕ್ಷ್ಮಣ ಎಂಬವರಿಗೆ ಸೇರಿದ ಬೈಕ್ ಇದಾಗಿದ್ದು, ರಿಪೇರಿಗೆ ಎಂದು ಗ್ಯಾರೇಜಿಗೆ ಬೈಕ್ ಬಿಟ್ಟಿದ್ದರು. ಆದರೆ, ಡಿಸೆಂಬರ್ 6ರಂದು ಮಧ್ಯ ರಾತ್ರಿ 11.57 ರಿಂದ 12 ಗಂಟೆ ಒಳಗಡೆ ಬೈಕ್ ಮಿಸ್ಸಿಂಗ್ ಆಗಿತ್ತು ಎನ್ನಲಾಗಿದೆ. ಬೈಕ್ ಕಳ್ಳತನವಾಗಿದೆ ಎಂದು ಹತ್ತಿರದ ಹೋಟೆಲ್ ಒಂದರ ಸಿಸಿ ಕ್ಯಾಮೆರಾ ಚೆಕ್ ಮಾಡಿಸಿದ ವೇಳೆ ನೋಡು ನೋಡುತ್ತಿದ್ದಂತೇ ಬೈಕ್ ಕಣ್ಮರೆಯಾಗುತ್ತಿರುವುದು ಕಂಡು ಬಂದಿತ್ತು.
ಇದನ್ನು ನೋಡಿದ ಜನರು ದೆವ್ವದ ಕೈವಾಡವೆಂದೇ ನಂಬಿ ಭೀತಿಗೊಳಗಾಗಿದ್ದಾರೆ. ಬೈಕ್ ಮಿಸ್ಸಿಂಗ್ ಸಂಬಂಧಿಸಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕಳೆದ 15 ದಿನಗಳ ಹಿಂದೆ ಟಿಬೇಟಿಯನ್ ಕಾಲೋನಿ ಬಳಿ 32 ವರ್ಷದ ಯುವಕನೋರ್ವ ದ್ವಿಚಕ್ರ ವಾಹನ ಚಲಾಯಿಸುವ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಸಾವಿಗೀಡಾಗಿದ್ದ. ಈತನದ್ದೇ ದೆವ್ವ ಬೈಕ್‌ಗಳನ್ನು ಕದಿಯುತ್ತಿದೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದರು.
ಈ ಬಗ್ಗೆ ತನಿಖೆಗೆ ಇಳಿದ ಪೊಲೀಸರು ತಂತ್ರಜ್ಞಾನ ಬಳಸಿ ಬೈಕ್ ಕದಿಯಲಾಗುತ್ತಿದೆಯೇ ಎಂದು ಪೊಲೀಸರ ಗುಮಾನಿ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ತೆರಳಿ ಸಾಕಷ್ಟು ಪರಿಶೀಲನೆ ನಡೆಸಿದಾಗ ಸ್ಥಳೀಯ ಪ್ರದೇಶದಲ್ಲೇ ಅಡ್ಡ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುಮ್ಮನೆ ಆತಂಕ ಸೃಷ್ಠಿಸುವ ಉದ್ದೇಶದಿಂದ ವಿಡಿಯೋವನ್ನು ಜೋಡಿಸಿ ದೆವ್ವದ ಕಾಟ ಎಂದು ಬಿಂಬಿಸಲು ಯತ್ನಿಸಲಾಗಿದೆ ಎಂದಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಂತೂ ಕೊನೆಗೂ ದೆವ್ವದ ಕಾಟ ಅನ್ನೋ ಆರೋಪಕ್ಕೆ ಪೊಲೀಸರು ತೆರೆ ಎಳೆದಿದ್ದು, ಸ್ಥಳೀಯ ಜನರು ನೆಮ್ಮದಿಯಲ್ಲಿ ಉಸಿರಾಡುವಂತಾಗಿದೆ.
Kolar: ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಇಬ್ಬರು ಕುರಿಕಳ್ಳರ ಬಂಧನ, 8 ಕುರಿ ಸಹಿತ ಒಂದು ಸ್ಕಾರ್ಪಿಯೋ ವಶ
ಸುರಪುರ: ಕುರಿಗಳನ್ನು ವಾಹನವೊಂದರಲ್ಲಿ ಕದ್ದೊಯ್ಯುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ, 8 ಕುರಿ, ಒಂದು ಸ್ಕಾರ್ಪಿಯೋ ವಾಹನವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಗುರುವಾರ ತಾಲೂಕಿನ ದೇವಾಪುರ ಕ್ರಾಸ್ ಬಳಿ ನಡೆದಿದೆ.
ಬಂಧಿತರು ನಾರಾಯಣ ಚವ್ಹಾಣ್, ಮೋಹನ ಚವ್ಹಾಣ್ ಶಹಾಪುರ ತಾಲೂಕಿನ ಕನ್ಯಾಕೋಳೂರು ಸಮೀಪದ ಜಾಪಾನಾಯಕ ತಾಂಡಾದವರಾಗಿದ್ದಾರೆ. ಹಲವು ವರ್ಷಗಳಿಂದ ಇವರಿಬ್ಬರು ಕುರಿ ಕಳ್ಳತನದಲ್ಲಿ ತೊಡಗಿದ್ದರು. ತಿಂಥಣಿಯ ಕುರಿ ಮಾಲೀಕ ಮೌನೇಶ ಅವರ 4 ಕುರಿಗಳು, ಲಿಂಗದಳ್ಳಿ ಎಸ್. ಕೆ. ಮಾನಪ್ಪ ಕಡ್ಡೋಣಿ ಅವರ 4 ಕುರಿಗಳನ್ನು ಕಳ್ಳರು ಕದ್ದೊಯ್ದು ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
Akhil Jain Murder Case: ದೃಶ್ಯಂ ಸಿನೆಮಾ ಸ್ಟೈಲ್ ನಲ್ಲಿ ಅಖಿಲ್ ಜೈನ್ ಹತ್ಯೆ, ಉದ್ಯಮಿ ಅಪ್ಪ
ಕಳ್ಳರ ಸೆರೆಗಾಗಿ ಎಸ್‌ಪಿ ಡಾ. ಸಿ.ಬಿ. ವೇದಮೂರ್ತಿ, ಡಿವೈಎಸ್‌ಪಿ ಡಾ. ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ಸಿಪಿಐ ಆನಂದ ವಾಘಮೋಡೆ ನೇತೃತ್ವದಲ್ಲಿ ಪಿಎಸ್‌ಐಗಳಾದ ಕೃಷ್ಣ ಸುಬೇದಾರ, ಸಿದ್ದಣ್ಣ ಅವರ ತಂಡ ರಚಿಸಲಾಗಿತ್ತು. ದೇವಪುರ ಕ್ರಾಸ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವಾಗ ಸ್ಕಾರ್ಪಿಯೋ ಗಾಡಿಯಲ್ಲಿದ್ದ ಕುರಿಗಳನ್ನು ನೋಡಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಉತ್ತರ ನೀಡಲು ತಡ ಬಡಸಿದ್ದಾರೆ. ಅನುಮಾನದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕುರಿ ಕಳ್ಳತನ ಬೆಳಕಿಗೆ ಬಂದಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಮುಖ್ಯ ಪೇದೆ ನಾಗರಾಜ, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಸಿದ್ರಾಮರೆಡ್ಡಿ, ಹುಸೇನಿ, ಬಸವರಾಜ, ಶಿವಶರಣಪ್ಪ, ಜಗದೀಶ ಇತರರಿದ್ದರು.