ಕಾರವಾರ (ಏ.02): ಹಜಾರಿಬಾಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಉತ್ತರ ಕನ್ನಡ ಜಿಲ್ಲೆಯ ಯೋಧ ಹೃದಯಾಘಾತದಿಂದ ಯೋಧ ಸಾವಿಗೀಡಾಗಿದ್ದಾರೆ. 

ಸಿದ್ದಾಪುರ ತಾಲುಕಿನ ಹಂಗಾರಖಂಡದ ನಿವಾಸಿ ಸಂದೀಪ್ ನಾರಾಯಣ ನಾಯ್ಕ ಮೃತಪಟ್ಟಿದ್ದಾರೆ, ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ರಾಂಚಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. 

ಯೋಧರಿಗೆ ಕಡಿಮೆ ತೂಕದ ಗುಂಡು ನಿರೋಧಕ ಜಾಕೆಟ್‌ ..
 
2011ರಲ್ಲಿ ಸೇನೆಗೆ ಸೇರಿದ್ದ ಯೋಧ ಸಂದೀಪ್ ಕಳೆದ 11 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 203 ಕೋಬ್ರಾ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 

ಏ.3 ರಂದು ಬೆಳಗ್ಗೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು ಸ್ವಗ್ರಾಮದಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದೆ.