Asianet Suvarna News Asianet Suvarna News

ಗರ್ಭಕೋಶದ ಸೋಂಕು: ಶಸ್ತ್ರ ಚಿಕಿತ್ಸೆ ಇಲ್ಲದೇ ಔಷಧೋಪಚಾರಕ್ಕೆ ಗುಣಮುಖಳಾದ ಸೀತೆ!

: ಗರ್ಭಕೋಶದ ಸೋಂಕಿಗೆ ತುತ್ತಾಗಿದ್ದ ಹೆಣ್ಣು ಹುಲಿಗೆ ಶಸ್ತ್ರ ಚಿಕಿತ್ಸೆ ಇಲ್ಲದೆ ಔಷಧೋಪಚಾರ  ಮೂಲಕ ಚಿಕಿತ್ಸೆ ನೀಡಿ ಹುಲಿ ಚೇತರಿಸಿಕೊಂಡ ಘಟನೆ ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ನಡೆದಿದೆ.

Uterine infection: Sita cured by medication without surgery at shivamogga rav
Author
First Published Jan 28, 2023, 9:56 AM IST

ಶಿವಮೊಗ್ಗ (ಜ.28) : ಗರ್ಭಕೋಶದ ಸೋಂಕಿಗೆ ತುತ್ತಾಗಿದ್ದ ಹೆಣ್ಣು ಹುಲಿಗೆ ಶಸ್ತ್ರ ಚಿಕಿತ್ಸೆ ಇಲ್ಲದೆ ಔಷಧೋಪಚಾರ  ಮೂಲಕ ಚಿಕಿತ್ಸೆ ನೀಡಿ ಹುಲಿ ಚೇತರಿಸಿಕೊಂಡ ಘಟನೆ ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ನಡೆದಿದೆ.

ಗರ್ಭಕೋಶ ಸೋಂಕಿಗೆ ತುತ್ತಾಗಿದ್ದ ಹೆಣ್ಣು ಹುಲಿಗೆ ಚಿಕಿತ್ಸೆ ಫಲಕಾರಿಯಾಗಿದೆ. ಶಿವಮೊಗ್ಗದ ತಾವರೆಕೊಪ್ಪ ಸಿಂಹಧಾಮದ ಹುಲಿ 17 ವರ್ಷದ ಸೀತಾ ಚಿಕಿತ್ಸೆ ಬಳಿಕ ಸೀತಾ ಚೇತರಿಕೆ ಕಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.  ಕಳೆದ 9 ತಿಂಗಳ ಅವಧಿಯಲ್ಲಿ ರಾಮ ಹಾಗೂ ಹನುಮ ಎಂಬ ಹಿರಿಯ ಹುಲಿಗಳ ಸಾವು ಸಫಾರಿ ಸಿಬ್ಬಂದಿ ಬೇಸರಕ್ಕೆ ಕಾರಣವಾಗಿತ್ತು. 

ಹುಲಿ ದಾಳಿಗೆ ಮತ್ತೊಬ್ಬ ಯುವಕ ಬಲಿ: ಸೌದೆ ತರಲು ಹೋದವ ಮಸಣ ಸೇರಿದ

ಸೀತಾ ಕೂಡಾ ಅನಾರೋಗ್ಯದಿಂದ ಕೊನೆಯುಸಿರೆಳೆದರೆ ಎಂಬ ಚಿಂತೆ ಕಾಡುತ್ತಿತ್ತು. ಆದರೆ ಈಗ ಆತಂಕ ದೂರಾಗಿದೆ. 17 ವರ್ಷದ ಸೀತಾ ಕೆಲ ದಿನಗಳಿಂದ ಅಹಾರ ಸೇವಿಸುತ್ತಿರಲಿಲ್ಲ. ಈ ಕಾರಣದಿಂದ ಬಹುತೇಕ ನಿತ್ರಾಣಗೊಂಡಿತ್ತು. ಅದರ ಸಮಸ್ಯೆ ಗುರುತಿಸುವುದು ಸವಾಲಿನ ಕೆಲಸವಾಗಿತ್ತು. ಈ ಕೆಲಸದಲ್ಲಿ ಯಶಸ್ವಿಯಾದ ಸಫಾರಿ ವೈದ್ಯ ಡಾ.ಮುರುಳಿ ಹುಲಿಯ(Dr.muruli huliya), ಚಲನವಲನ ಗಮನಿಸಿ ಅದಕ್ಕೆ ಗರ್ಭಕೋಶದ ಸೋಂಕಿರಬಹುದೆಂಬ ಖಚಿತ ತೀರ್ಮಾನಕ್ಕೆ ಬಂದಿದ್ದರು. ಹುಲಿಗೆ ಶಸ್ತ್ರಚಿಕಿತ್ಸೆ ನಡೆಸದೇ ಕೇವಲ ರೋಗನಿರೋಧಕ ಮತ್ತಿತರ ಔಷಧ ನೀಡಿದ್ದರ ಪರಿಣಾಮ ಸೋಂಕು ವಾಸಿಯಾಗಿದೆ. 10 ದಿನಗಳ ನಿರಂತರ ಚಿಕಿತ್ಸೆ ಬಳಿಕ ಚೇತರಿಕೆ ಕಂಡು ಎಂದಿನಂತೆ ದಿನಚರಿ ಆರಂಭಿಸಿದೆ. ಇದು ಸಫಾರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಂತಸ ನೀಡಿದೆ.

ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣೆ ಮುಂದೆ ಕಿಮ್ಮನೆ ನೇತೃತ್ವದಲ್ಲಿ ಅಹೋ ರಾತ್ರಿ ಧರಣಿ

Follow Us:
Download App:
  • android
  • ios