ಮಂಗಳೂರು(ಜೂ.11): ಕೊರೋನಾ ಲಾಕ್‌ಡೌನ್‌ ಇದ್ದರೂ ಚಿತ್ರದುರ್ಗದಲ್ಲಿ ಸಾವಿರಾರು ಮಂದಿ ಸೇರಿ ಮೆರವಣಿಗೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಲಾಕ್‌ಡೌನ್‌ ನಿಯಮಾನುಸಾರವೇ ಕಾರ್ಯಕ್ರಮ ಮಾಡುತ್ತೇವೆ ಎಂದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪದಗ್ರಹಣಕ್ಕೆ ಅನುಮತಿ ಏಕೆ ನೀಡುತ್ತಿಲ್ಲ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

ಜೂ.7ರಂದು ಡಿಕೆಶಿ ಪದಗ್ರಹಣ ನಿಗದಿಯಾಗಿದ್ದು, ಜನ ಸೇರದಂತೆ ಮುಂಜಾಗ್ರತೆ ವಹಿಸಿ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಪಿಡಮಿಕ್‌ ಆ್ಯಕ್ಟ್ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಈಗ ಜೂ.14ರ ಕಾರ್ಯಕ್ರಮಕ್ಕೂ ಅನುಮತಿ ನಿರಾಕರಿಸಿ ತಾರತಮ್ಯ ನೀತಿ ಅನುಸರಿಸಿದೆ. ಎಪಿಡಮಿಕ್‌ ಆ್ಯಕ್ಟ್ನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಹಳ್ಳಿಗರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಯಾಕೆ? ಗುಟ್ಟು ಬಿಚ್ಚಿಟ್ಟ ಉದಾಸಿ

ಪ್ರಸ್ತುತ ದೇಶದ ಎಲ್ಲಿಂದ ಬಂದರೂ ಅವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಇಲ್ಲ, ಲಾಕ್‌ಡೌನ್‌ ಪಾಲನೆಯಾಗುತ್ತಿಲ್ಲ. ಇಷ್ಟೆಲ್ಲ ಅವ್ಯವಸ್ಥೆ ಇರುವಾಗ ಪದಗ್ರಹಣ ಕಾರ್ಯಕ್ರಮ ನಡೆಸಿದರೆ ಮಾತ್ರ ಸಮಸ್ಯೆಯಾಗುತ್ತದಾ ಎಂದು ಖಾದರ್‌ ಆಕ್ಷೇಪಿಸಿದರು.

ತಪ್ಪೊಪ್ಪಿಕೊಳ್ಳಿ: ಪ್ರಸ್ತುತ ಹೊರರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್‌ ವ್ಯವಸ್ಥೆಯಿಲ್ಲ. ಈ ಹಿಂದಿನಂತೆ ಪರೀಕ್ಷೆ ಮಾಡಲ್ಲ. ಈ ಮೂಲಕ ಸರ್ಕಾರ ದೊಡ್ಡ ತಪ್ಪು ಮಾಡುತ್ತಿದೆ. ಎರಡು ತಿಂಗಳ ನಂತರ ರಾಜ್ಯದಲ್ಲಿ ಕೊರೋನಾಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಅನಾಹುತ ಸಂಭವಿಸಿದರೆ ಆಗ ತನ್ನ ತಪ್ಪನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದರು.

ತನ್ನ ಅಂತ್ಯಕ್ರಿಯೆ ತಾನೇ ಮಾಡ್ಕೊಂಡು ಚಿತೆಗೆ ಹಾರಿದ ಯಲ್ಲಾಪುರ ವೃದ್ಧ

ಇದೀಗ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ಗಡಿಭಾಗ ಕಾಸರಗೋಡಿನ ವಿದ್ಯಾರ್ಥಿಗಳು ಮಂಗಳೂರಿಗೆ ಪರೀಕ್ಷೆಗೆ ಬರುವ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಖಾದರ್‌ ಒತ್ತಾಯಿಸಿದರು. ಮುಖಂಡರಾದ ಮಿಥುನ್‌ ರೈ, ಶಶಿಧರ ಹೆಗ್ಡೆ, ಅಬ್ದುಲ್‌ ರವೂಫ್‌, ಎ.ಸಿ. ವಿನಯರಾಜ್‌ ಮತ್ತಿತರರಿದ್ದರು.

ಪರ್ಯಾಯಕ್ಕೆ ಮೊದಲೇ ವ್ಯಾಪಾರಿಗಳ ಎಬ್ಬಿಸಿದ್ದೇಕೆ?

ಉರ್ವ, ಕದ್ರಿ, ಕಾವೂರು, ಕಂಕನಾಡಿ, ಬಿಜೈ, ಅಳಕೆ ಮಾರುಕಟ್ಟೆಗಳನ್ನು ನಿರ್ಮಿಸುವಾಗ ಅಲ್ಲಿದ್ದ ವ್ಯಾಪಾರಿಗಳಿಗೆ ಮೊದಲೇ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟು ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಈಗ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಸೆಂಟ್ರಲ್‌ ಮಾರುಕಟ್ಟೆವ್ಯಾಪಾರಿಗಳನ್ನು ಎಬ್ಬಿಸಿದ್ದಾರೆ. ಇದರಿಂದ ಜನರಿಗೂ ಸಮಸ್ಯೆಯಾಗಿದೆ ಎಂದು ಯು.ಟಿ. ಖಾದರ್‌ ಆರೋಪಿಸಿದರು.