ತಹಸಿಲ್ದಾರರ ನಕಲಿ ಸಹಿ ಬಳಸಿ ಬರೋಬ್ಬರು 75 ಲಕ್ಷ ರು. ವಂಚಿಸಿದ ಘಟನೆಯೊಂದು ನಡೆದಿದೆ. ಏನಿದು ಘಟನೆ ಇಲ್ಲಿದೆ ವಿವರ

ಯಾದಗಿರಿ (ಸೆ.24): ಕೊರೋನಾ ಸಂದರ್ಭದಲ್ಲಿ ವಲಸಿಗರಿಗೆ ವ್ಯವಸ್ಥೆ, ಸೋಂಕಿತರ ಚಿಕಿತ್ಸೆಗೆಂದು ರಾಜ್ಯ ನೈಸರ್ಗಿಕ ವಿಕೋಪದಡಿ ಬಿಡುಗಡೆಯಾಗಿದ್ದ ಅನುದಾನದಲ್ಲಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ .75 ಲಕ್ಷಕ್ಕೂ ಹೆಚ್ಚು ಹಣ ದುರ್ಬಳಕೆಯಾಗಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಶ್ರೀಮಹಾಲಕ್ಷ್ಮಿ ಎಂಟರ್‌ ಪ್ರೈಸೆಸ್‌ ಹೆಸರಲ್ಲಿ ನೀಡಲಾದ ಚೆಕ್‌ನಲ್ಲಿ ಸುರಪುರ ತಹಸೀಲ್ದಾರರ ನಕಲಿ ಸಹಿ ಬಳಸಿ, ಆ್ಯಕ್ಸಿಸ್‌ ಬ್ಯಾಂಕಿನಿಂದ ಡ್ರಾ ಮಾಡಲಾಗಿದೆ ಎಂದು ಸುರಪುರ ಠಾಣೆಯಲ್ಲಿ ಕಲಂ 419, 420, 465, 468, 472 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು, ತಹಸೀಲ್ದಾರ್‌ ನಿಂಗಪ್ಪ ಬಿರಾದರ್‌ ದೂರು ನೀಡಿದ್ದಾರೆ.

ಯಾದಗಿರಿಯಲ್ಲಿ ಭಾರೀ ಮಳೆ: ಗುರುಸಣಗಿ ಬ್ಯಾರೇಜ್‌ನ 4 ಗೋಡೆಗಳು ಜಖಂ ...

ನೈಸರ್ಗಿಕ ವಿಕೋಪದಡಿ ತಹಸೀಲ್ದಾರರ ಖಾತೆಗೆ ಬಿಡುಗಡೆಯಾದ ಹಣದಲ್ಲಿ ವಂಚನೆಯಾಗಿತ್ತು. ಪ್ರಕರಣ ವಂಚನೆ ನಡೆದು 3 ತಿಂಗಳಾದ ನಂತರ ಇದೀಗ ವಂಚನೆ ಬೆಳಕಿಗೆ ಬಂದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಬ್ಯಾಂಕ್‌ ಸಿಬ್ಬಂದಿ ಕೈಚೆಳಕ ಇದರ ಹಿಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.