'ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶ ಅಭಿವೃದ್ಧಿ ಸಾಧ್ಯ'

ದೇಶಭಕ್ತ ಭಾರತೀಯರು, ವ್ಯಾಪಾರಸ್ಥರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ವಸ್ತುಗಳನ್ನು ತಮ್ಮದಾಗಿಸಿಕೊಂಡಾಗ ಮಾತ್ರ ಆತ್ಮನಿರ್ಭರ ಭಾರತಕ್ಕೆ ಒಂದು ಅರ್ಥ ಬರಲಿದೆ. ವಿದೇಶಿ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿದ್ದು, ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಬಳಸುವುದರಿಂದ ದೇಶ ಸಶಕ್ತ ಆಗುವುದರಲ್ಲಿ ಅನುಮಾನವಿಲ್ಲ ಎಂದು ಎಬಿವಿಪಿ ಹಿರಿಯ ಕಾರ್ಯಕರ್ತ ಬಸವರಾಜ ಡಿ. ಗುಬ್ಬಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Use Swadesi Products it will help Nation Development Says ABVP Senior activist Basavaraja Gubbi

ದಾವಣಗೆರೆ(ಜೂ.29): ಆತ್ಮನಿರ್ಭರ ಭಾರತವಾಗಲು ಸ್ವಾವಲಂಬಿ, ಸ್ವಾಭಿಮಾನಿ, ಸದೃಢ ಭಾರತ ನಿರ್ಮಾಣವಾಗಲು ಸ್ವದೇಶಿ ಮಂತ್ರದಿಂದ ಮಾತ್ರ ಸಾಧ್ಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹಿರಿಯ ಕಾರ್ಯಕರ್ತ ಬಸವರಾಜ ಡಿ. ಗುಬ್ಬಿ ಅಭಿಪ್ರಾಯಪಟ್ಟರು.

ನಗರದ ಜಯದೇವ ವೃತ್ತದಲ್ಲಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಆಯೋಜಿಸಿದ ಆತ್ಮ ನಿರ್ಭರ ಭಾರತ ಮತ್ತು ಸಮೃದ್ಧ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಸ್ವದೇಶಿ ಮಂತ್ರ, ಲೋಹಿಯಾ ತಂತ್ರಜ್ಞಾನದ ವಿಚಾರದಿಂದ 1974ರಲ್ಲಿ ಜಾರ್ಜ್ ಫರ್ನಾಂಡೀಸ್‌ ಹೊಸ ಕೈಗಾರಿಕಾ ನೀತಿಗಳನ್ನು ತಂದ ಸಂದರ್ಭದಲ್ಲಿ ಆತ್ಮನಿರ್ಭರ ಮಂತ್ರವನ್ನು ಜಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಹಾಗೂ ಸ್ವದೇಶಿ ಸ್ವಾವಲಂಬನೆ, ಉದ್ಯೋಗ ಸೃಷ್ಟಿ ಮಾಡುವಲ್ಲಿ ಜಾರ್ಜ್ ಫರ್ನಾಂಡೀಸ್‌ ಅವರ ಮಹತ್ವವನ್ನು ಸ್ಮರಿಸಿದರು.

ಈಗಿನ ಜಿಲ್ಲಾ ಕೈಗಾರಿಕಾ ಕೇಂದ್ರಗಳ (ಡಿಐಸಿ) ರಚನೆಗೆ ಜಾರ್ಜ್ ಫರ್ನಾಂಡೀಸ್‌ ಅವರೇ ಕಾರಣ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕಡಿಮೆ ಬಂಡವಾಳ, ಹೆಚ್ಚು ದುಡಿಮೆ ಮಾಡುವ ಕನಸು ಕಂಡರು. ಇದರ ಫಲವಾಗಿ 1981ರಲ್ಲಿ ನಾರಾಯಣಮೂರ್ತಿ, ನಂದನ್‌ ನಿಲೇಕಣಿ ಇಸ್ಫೋಸಿಸ್‌ ಪ್ರಾರಂಭಿಸಿದರು. ಅಜೀಂ ಪ್ರೇಮ್‌ಜೀ ಸಂಸ್ಥೆಯನ್ನು ಹುಟ್ಟುಹಾಕಿದರು. ಇದರಿಂದ ಭಾರತದಲ್ಲಿ 40 ಲಕ್ಷ ಪ್ರತ್ಯಕ್ಷ ಹಾಗೂ 1 ಕೋಟಿಗೂ ಹೆಚ್ಚು ಅಪ್ರತ್ಯಕ್ಷ ಉದ್ಯೋಗ ಸೃಷ್ಟಿಯಾಯಿತು. ಸುಮಾರು 7 ಲಕ್ಷ ಜನ ಪ್ರಾಣ ಕೊಟ್ಟು ತಂದುಕೊಂಡ ಸ್ವಾತಂತ್ರ್ಯ ದಯಾನಂದ ಸರಸ್ವತಿ ಅರವಿಂದರು ಹಾಗೂ ಸ್ವಾಮಿ ವಿವೇಕಾನಂದರಿಂದ ಸ್ವದೇಶಿ ಮಾಧ್ಯಮಗಳ ಮುಖಾಂತರ ಸ್ವಾತಂತ್ರ್ಯ ಬಲಪಡಿಸಲು ಸಾಧ್ಯ ಎಂದು ಹೇಳಿದರು.

'ನನಗೆ ಹಸಿವಿನ ಅರಿವಾಗಿದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ'

ದೇಶಭಕ್ತ ಭಾರತೀಯರು, ವ್ಯಾಪಾರಸ್ಥರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ವಸ್ತುಗಳನ್ನು ತಮ್ಮದಾಗಿಸಿಕೊಂಡಾಗ ಮಾತ್ರ ಆತ್ಮನಿರ್ಭರ ಭಾರತಕ್ಕೆ ಒಂದು ಅರ್ಥ ಬರಲಿದೆ. ವಿದೇಶಿ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿದ್ದು, ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಬಳಸುವುದರಿಂದ ದೇಶ ಸಶಕ್ತ ಆಗುವುದರಲ್ಲಿ ಅನುಮಾನವಿಲ್ಲ ಎಂದರು.

ಎಬಿವಿಪಿ ನಗರಾಧ್ಯಕ್ಷ ಪವನ್‌ ರೇವಣಕರ್‌ ಮಾತನಾಡಿ, ಈಗಿನ ಯುವಜನತೆ ಭಾರತದ ನಡೆ-ನುಡಿ ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ. ಚೀನಾದ ಟಿಕ್‌ಟ್ಯಾಕ್‌ ಡಿಜಿಟಲ್‌ ಆ್ಯಪ್‌ 1ರಿಂದಲೇ ವಾರ್ಷಿಕ .50 ಸಾವಿರ ಕೋಟಿ ಆದಾಯವನ್ನು ನಾವು ಚೀನಾಕ್ಕೆ ನೀಡುತ್ತಿದ್ದೇವೆ. ಆ ಹಣ ನಮ್ಮ ದೇಶದ ಸೈನಿಕರ ಮೇಲೆ ಯುದ್ಧ ಮಾಡಲು ಚೀನಾ ಬಳಸುತ್ತಿದೆ. ಹಾಗಾಗಿ ಇನ್ನು ಮುಂದಾದರೂ ಸ್ವದೇಶಿ ಮಂತ್ರದೆಡೆಗೆ ಸಾಗೋಣ ಎಂದರು.

ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯದರ್ಶಿ ಆಕಾಶ್‌ ಇಟಗಿ ಹಾಗೂ ವಿದ್ಯಾರ್ಥಿ ಪರಿಷತ್ತು ಕಾರ್ಯಕರ್ತರು ಭಾಗವಹಿಸಿದ್ದರು.
 

Latest Videos
Follow Us:
Download App:
  • android
  • ios