ಎಸಿ Vistadome coach ರೈಲು ಸೇವೆ ಬಳಸಿ: ಸಂಸದ ರಾಘವೇಂದ್ರ
ಯಶವಂತಪುರ- ಶಿವಮೊಗ್ಗ- ಯಶವಂತಪುರ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ: 16579/16580 ಗಾಡಿಯು ಡಿ.30ರಿಂದ ಮಾ.31ರವರೆಗೆ ಒಂದು ಎಸಿ ವಿಸ್ಟಾಡೋಮ್ ಕೋಚ್‌ನೊಂದಿಗೆ ಸಂಚಾರ ಪ್ರಾರಂಭಿಸಿದ್ದು, ಪ್ರಯಾಣಿಕರು ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಸಂಸದ ಬಿ. ವೈ. ರಾಘವೇಂದ್ರ ಕೋರಿದ್ದಾರೆ.
ಶಿವಮೊಗ್ಗ (ಡಿ.31) : ಯಶವಂತಪುರ- ಶಿವಮೊಗ್ಗ- ಯಶವಂತಪುರ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ: 16579/16580 ಗಾಡಿಯು ಡಿ.30ರಿಂದ ಮಾ.31ರವರೆಗೆ ಒಂದು ಎಸಿ ವಿಸ್ಟಾಡೋಮ್ ಕೋಚ್‌ನೊಂದಿಗೆ ಸಂಚಾರ ಪ್ರಾರಂಭಿಸಿದ್ದು, ಪ್ರಯಾಣಿಕರು ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಸಂಸದ ಬಿ. ವೈ. ರಾಘವೇಂದ್ರ ಕೋರಿದ್ದಾರೆ.
ಗಾಜಿನ ಹೊದಿಕೆ ಹಾಗೂ ಗಾಜಿನ ಕಿಟಕಿಗಳನ್ನು ಹೊಂದಿರುವ ಈ ಬೋಗಿಯು 44 ಆಸನಗಳನ್ನು ಹೊಂದಿದೆ. ಈ ಆಸನಗಳನ್ನು 180 ಡಿಗ್ರಿ ತಿರುಗಿಸಬಹುದಾಗಿದೆ. ಆಸನಗಳನ್ನು ತಮಗೆ ಬೇಕಾದಂತೆ ಹೊಂದಿಸಿಕೊಂಡು ಪ್ರವಾಸಿಗರು ಹೊರಗಿನ ದೃಶ್ಯವಳಿಗಳನ್ನು ಅಸ್ವಾದಿಸಬಹುದು. ಈ ಬೋಗಿಯ ಸೇವೆಯನ್ನು ಯಶವಂತಪುರ- ಶಿವಮೊಗ್(Shivamogga-Yeshwantapur)- ಇಂಟರ್‌ಸಿಟಿ ಎಕ್ಸ್‌ಪ್ರೆಸ್(intercity express train) ಒದಗಿಸಲಾಗಿದೆ. ಮಲೆನಾಡಿನ ಭಾಗದ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ವರದಾನವಾಗಿದೆ. ದಕ್ಷಿಣ ಭಾರತದಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ಈ ರೀತಿಯ ಭೋಗಿಯ ಸೌಲಭ್ಯ ಸಿಕ್ಕಿರುವುದು ಎರಡನೆಯದಾಗಿದೆ ಎಂದಿದ್ದಾರೆ.
ಈಗಾಗಲೇ ಕಳೆದ ವರ್ಷದಲ್ಲಿ ಈ ವಿಸ್ಟಾಡೋಮ್ ಕೋಚ್ ಬೆಂಗಳೂರು- ಶಿವಮೊಗ್ಗ (Bengaluru-Shivamogga)ನಡುವೆ ಸಂಚರಿಸಿದ್ದು, ಜನಮೆಚ್ಚುಗೆ ಪಡೆದಿತ್ತು. ತಾಂತ್ರಿಕ ಕಾರಣಗಳಿಂದ ಈ ಸೇವೆಯನ್ನು ರೈಲ್ವೆ ಹಿಂಪಡೆದಿತ್ತು. ಈ ವಿಸ್ಟಾಡೋಮ್ ಕೋಚ್ ಅನ್ನು ಪುನಾರಂಭಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದ ಹಿನ್ನೆಲೆ ರೈಲ್ವೆ ಇಲಾಖೆಗೆ ಪುನಃ ವಿಸ್ಟಾಡೋಮ್ ಕೋಚ್ ಅಳವಡಿಸಲು ಮನವಿ ಮಾಡಿಕೊಳ್ಳಲಾಗಿತ್ತು. ರೈಲ್ವೆ ಇಲಾಖೆಯು ನಮ್ಮ ಮನವಿಗೆ ಸ್ಪಂದಿಸಿ ವಿಸ್ಟಾಡೋಮ್ ಕೋಚ್ ಅನ್ನು ಪುನಃ 16579/16580 ಯಶವಂತಪುರ- ಶಿವಮೊಗ್ಗ- ಯಶವಂತಪುರ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಅಳವಡಿಸಿದೆ. 2023ರ ಮಾಚ್‌ರ್ 31ರವರೆಗೆ ಸಂಚರಿಸಲು ಅವಕಾಶ ಕಲ್ಪಿಸಿದೆ. ಈ ನೂತನ ಬೋಗಿ ಸೇವೆ ಪುನರಾರಂಭಿಸಿರುವ ರೈಲ್ವೆ ಇಲಾಖೆಗೆ ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದಿದ್ದಾರೆ.
ಪ್ರಸ್ತುತ ಯಶವಂತಪುರ- ಶಿವಮೊಗ್ಗ- ಯಶವಂತಪುರ ನಡುವೆ ಮಾತ್ರ ಸಂಚರಿಸುತ್ತಿರುವ ಈ ರೈಲು ಸೇವೆಯನ್ನು ಬೆಳಿಗ್ಗೆ ಬೇಗನೆ ಬೆಂಗಳೂರಿನಿಂದ ಆರಂಭಿಸಿ ತಾಳಗುಪ್ಪದವರೆಗೆ ವಿಸ್ತರಣೆ ಮಾಡಲು ರೈಲ್ವೆ ಇಲಾಖೆಯನ್ನು ವಿನಂತಿಸಿಕೊಳ್ಳಲಾಗುತ್ತಿದೆ. ಈ ಭೋಗಿ ಅವಶ್ಯಕತೆ ಬಗ್ಗೆ ರೈಲ್ವೆ ಇಲಾಖೆಗೆ ಮನದಟ್ಟು ಮಾಡುವ ಸಲುವಾಗಿ, ಈ ಬೋಗಿಯ ಸದುಪಯೋಗ ಬಳಸಿಕೊಳ್ಳುವಂತೆ ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ವಿನಂತಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.