Tumakur : ಚರಂಡಿಯನ್ನು ಸ್ವಚ್ಚಗೊಳಿಸುವಂತೆ ನಗರಸಭೆಗೆ ಒತ್ತಾಯ
ನಗರದ ಹಾಸನ ಮತ್ತು ಅರಸೀಕೆರೆ ರಸ್ತೆ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿರುವ ಒಳಚರಂಡಿಯು ಗಬ್ಬು ನಾರುತ್ತಿದ್ದು ದುರ್ವಾಸನೆಯಲ್ಲಿಯೇ ಪಾದಚಾರಿಗಳು ಹಾಗೂ ವಾಹನ ಸಂಚಾರರು ಸಂಚರಿಸುವಂತಾಗಿದ್ದು, ನಗರಸಭೆ ಕೂಡಲೆ ಚರಂಡಿಯನ್ನುಸ್ವಚ್ಛ ತೆ ಮಾಡಬೇಕೆಂದು ಸ್ಥಳೀಯ ಅಂಗಡಿ ಮಾಲೀಕರು, ವಾಹನ ಸವಾರರು ಒತ್ತಾಯಿಸಿದ್ದಾರೆ.
ತಿಪಟೂರು: ನಗರದ ಹಾಸನ ಮತ್ತು ಅರಸೀಕೆರೆ ರಸ್ತೆ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿರುವ ಒಳಚರಂಡಿಯು ಗಬ್ಬು ನಾರುತ್ತಿದ್ದು ದುರ್ವಾಸನೆಯಲ್ಲಿಯೇ ಪಾದಚಾರಿಗಳು ಹಾಗೂ ವಾಹನ ಸಂಚಾರರು ಸಂಚರಿಸುವಂತಾಗಿದ್ದು, ನಗರಸಭೆ ಕೂಡಲೆ ಚರಂಡಿಯನ್ನುಸ್ವಚ್ಛ ತೆ ಮಾಡಬೇಕೆಂದು ಸ್ಥಳೀಯ ಅಂಗಡಿ ಮಾಲೀಕರು, ವಾಹನ ಸವಾರರು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ಹಾಸನ, ಅರಸೀಕೆರೆ ಮಾರ್ಗವಾಗಿ ಬಸ್‌ಗಳು, ದ್ವಿಚಕ್ರ ವಾಹಗಳು ಸಂಚರಿಸುತ್ತವೆ. ಹಾಸನ ಮತ್ತು ಅರಸೀಕೆರೆಯ ಎರಡು ಬಸ್ ನಿಲ್ದಾಣಗಳಿದ್ದು, ಪ್ರಯಾಣಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಈ ರಸ್ತೆಯಲ್ಲಿಯೇ ವಿವಿಧ ಅಂಗಡಿ ಮುಂಗಟ್ಟು, ಆಸ್ಪತ್ರೆ , ತರಕಾರಿ ಅಂಗಡಿಗಳಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ, ಚರಂಡಿ ಗಬ್ಬು ನಾರುತ್ತಿದೆ. ಡೆಂಗ್ಯೂ ಮಲೇರಿಯಾದಂತಹ ರೋಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವಂತಹ ಸಂದರ್ಭದಲ್ಲೇ ಸ್ವಚ್ಚತೆ ಆದ್ಯತೆ ನೀಡಬೇಕಾದ ನಗರಸಭೆ ಅಧಿಕಾರಿಗಳು ಜಾಣಕುರುಡು ವಹಿಸಿದ್ದಾರೆಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ವಿವಿಧ ಬಡಾವಣೆಗಳ ತ್ಯಾಜ್ಯ ಶೇಖರಣೆಯಾಗುತ್ತಿದ್ದು, ನಗರಸಭೆ ಸಿಬ್ಬಂದಿ ವರ್ಷವಾದರೂ ಸ್ವಚ್ಛತೆ ಮಾಡುವುದೇ ಇಲ್ಲ. ಕನಿಷ್ಠ ಹದಿನೈದು ದಿವಸ ಅಥವಾ ತಿಂಗಳಿಗೊಮ್ಮೆಯಾದರೂ ಸ್ವಚ್ಚತೆ ಮಾಡಿದರೆ ಜನರು ಆರೋಗ್ಯದಿಂದಿರುತ್ತಾರೆ ಎಂಬುದನ್ನು ನಗರಸಭೆ ಅಧಿಕಾರಿಗಳು ಮನಗಾಣಬೇಕು. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿಯನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಸಿಂಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾಂಕ್ರೀಟ್ ರಸ್ತೆಗಳಲ್ಲಿ ಆಳೆತ್ತರದ ಗಿಡ
ತಲಕಾಡು : ಇಲ್ಲಿನ ಆಶ್ರಯ ಬಡಾವಣೆಯ ಒಂದು ಮುಖ್ಯ ರಸ್ತೆ ಸೇರಿದಂತೆ 30 ಅಡಿ ಅಗಲವಿರುವ ಮೂರು ಅಡ್ಡಬೀದಿಗೆ 80 ಲಕ್ಷ ವೆಚ್ಚದಲ್ಲಿ ಸರ್ಕಾರ ನೂತನ ಕಾಂಟ್ ರಸ್ತೆ, ಚರಂಡಿ ಸೌಲಭ್ಯ ಒದಗಿಸಿಕೊಟ್ಟಿದೆ.
ಆದರೆ ಸ್ಥಳೀಯ ಪಂಚಾಯಿತಿ ನಿರ್ವಹಣೆ ಮಾಡದೆ ಚರಂಡಿಯಲ್ಲಿ ಆಳೆತ್ತರದ ಗಿಡಗಂಟಿ ಬೆಳೆದುಕೊಂಡಿದೆ. ಇಲ್ಲಿಗೆ ಕಾಂಕ್ರಿಟ್ ಚರಂಡಿ ಸೌಲಭ್ಯವನ್ನು ಎರಡು ವರ್ಷದ ಹಿಂದೆಯೇ ಸರ್ಕಾರ ಕಲ್ಪಿಸಿಕೊಟ್ಟಿದ್ದರು. ಆಗಾಗ್ಗೆ ಚರಂಡಿ ಸ್ವಚ್ಛತೆ ಕೈಗೊಳ್ಳಲು ಪಂಚಾಯಿತಿ ನಿರ್ಲಕ್ಷ್ಯವಹಿಸಿದ್ದು ಪರಿಣಾಮ ಚರಂಡಿ ತುಂಬಾ ಗಿಡಗಂಟಿ ಬೆಳೆದು ತ್ಯಾಜ್ಯದಿಂದ ತುಂಬಿ ಹೋಗಿದೆ.
ಇಲ್ಲಿನ ಪಂಚಾಯಿತಿಗೆ ಚರಂಡಿ ಸ್ಬಚ್ಚ ಮಾಡುವಂತೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದುಬಡಾವಣೆ ನಿವಾಸಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲ್ಲಿನ ಚರಂಡಿ ಸ್ವಚ್ಚತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.
ಪೂರ್ಣಕರ್ತವ್ಯಕ್ಕೆ ನಿಯೋಜಿಸಿ
ತಲಕಾಡು, ಟಿ. ನರಸೀಪುರ ತಾಲೂಕಿನ 2ನೇ ದೊಡ್ಡ ಗ್ರಾಪಂ ಹಾಗೂ ಪ್ರಸಿದ್ಧ ಪ್ರವಾಸಿ ತಾಣ. ಹೀಗಾಗಿ ಇಲ್ಲಿನ ಪಂಚಾಯಿತಿಗೆ ವಾರದ ಪೂರ್ಣದಿನಗಳ ಕರ್ತವ್ಯ ನಿರ್ವಹಿಸುವ ಪಿಡಿಒ ನೇಮಿಸುವ ಅಗತ್ಯವಿದೆ.
ಆದರೆ ಇಲ್ಲಿಗೆ ದೂರದ ಬನ್ನೂರು ಹೋಬಳಿ ಭಾಗದ ಪಂಚಾಯಿತಿಯಿಂದ ತಲಕಾಡು ಪಂಚಾಯಿತಿಗೆ ಇತ್ತೀಚೆಗಷ್ಟೇ ವರ್ಗಾವಣೆಯಾಗಿ ಬಂದಿರುವ ನೂತನ ಪಿಡಿಒ ಮಹೇಶ್ ಅವರಿಗೆ ಬನ್ನೂರು ಹೋಬಳಿ ಬಿ.ಸೀಹಳ್ಳಿ ಹಾಗು ತಲಕಾಡು ಎರಡು ಕಡೆಯ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದರಿಂದ ತಲಕಾಡು ಗ್ರಾಪಂ ಸೇವೆಗೆ ನಿತ್ಯ ಆಗಮಿಸುವ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಹೀಗಾಗಿ ಕೂಡಲೇ ಇಲ್ಲಿನ ಗ್ರಾಪಂಗೆ ಪೂರ್ಣ ಕರ್ತವ್ಯಕ್ಕೆ ಪಿಡಿಒ ನಿಯೋಜಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.