Asianet Suvarna News Asianet Suvarna News

‘ಸಿಂಧನೂರಲ್ಲಿ ಪ್ಲಾಸ್ಟಿಕ್‌ ಬಳಸಿದರೆ 1 ಲಕ್ಷದವರೆಗೆ ದಂಡ’

ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇದಿಸಲಾಗಿದೆ| ಯಾವುದೇ ಅಂಗಡಿ, ಬಾರ್‌ ರೆಸ್ಟೋರೆಂಟ್‌, ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಮಾರಾಟ ಮಾಡುವಂತಿಲ್ಲ| ಮಾರಾಟ ಹಾಗೂ ಬಳಕೆ ಕಂಡು ಬಂದರೆ ಅಂತವರ ವಿರುದ್ದ 1 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತಿದೆ| ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ, ನೈರ್ಮಲ್ಯ ಕಾಪಾಡುವ ಜೊತೆಗೆ ನಗರಸಭೆಯೊಂದಿಗೆ ಸಹಕಾರಿಸಬೇಕು ಎಂದು ಶಾಸಕ ವೆಂಕಟರಾವ ನಾಡಗೌಡ ಮನವಿ ಮಾಡಿದರು|

Up to 1 Lack rs Fine for Those Who Use Plastic
Author
Bengaluru, First Published Oct 4, 2019, 2:39 PM IST

ಸಿಂಧನೂರು[ಅ.4]: ರಾಷ್ಟ್ರಪಿತ ಮಹಾತ್ಮಗಾಂಧಿಯವರ 150ನೇ ಜಯಂತಿ ಅಂಗವಾಗಿ ಅವರ ತತ್ವ ಸಿದ್ದಾಂತಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಅವರ ಕನಸಿನಂತೆ ನೈರ್ಮಲ್ಯ, ಹಸಿರು, ಆರೋಗ್ಯ, ಕಸಮುಕ್ತ ಭಾರತ ಸೃಷ್ಠಿಸುವ ಉದ್ದೇಶದಿಂದ ಜನಜಾಗೃತಿ ಮೂಡಿಸುವ ಅಂಗೀಕಾರ ಆಂದೋಲನಕ್ಕೆ ಮಾಜಿ ಸಚಿವ, ಶಾಸಕ ವೆಂಕಟರಾವ ನಾಡಗೌಡ ಪ್ರಮಾಣ ವಚನ ಬೋಧಿಸುವ ಮೂಲಕ ಚಾಲನೆ ನೀಡಿದರು.

ನಗರದ ನಗರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಪೂರ್ಣಗೊಂಡಿರುವ ಮನೆಗಳ ಫಲಾನುಭವಿಗಳಿಗೆ ಆರೋಗ್ಯ, ನೈರ್ಮಲ್ಯ, ನೀರು ಸಂರಕ್ಷಣೆ, ಮಳೆನೀರು ಕೊಯ್ಲು, ಗಿಡಮರಗಳನ್ನು ನೆಡುವದು, ಪರಿಸರ, ಸಂಪನ್ಮೂಲಗಳ ಸಂರಕ್ಷಣೆ, ಸೌರಶಕ್ತಿ ಬಳಕೆ, ಹೊಗೆ ರಹಿತ ಅಡುಗೆ ಮನೆ, ಸಮುದಾಯದೊಂದಿಗೆ ಸಹಬಾಳ್ವೆ, ಸಹಿಷ್ಣುತೆ, ವಿವಿಧ ಇಲಾಖೆಯಡಿ ದೊರೆಯುವ ಸೌಲಭ್ಯ ಮುಂತಾದವುಗಳ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಮೂರು ತಿಂಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಅಂಗೀಕಾರ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪೌರಾಯುಕ್ತ ಆರ್‌.ವಿರುಪಾಕ್ಷಮೂರ್ತಿ ಮಾತನಾಡಿ, ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇದಿಸಲಾಗಿದೆ. ಯಾವುದೇ ಅಂಗಡಿ, ಬಾರ್‌ ರೆಸ್ಟೋರೆಂಟ್‌, ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಮಾರಾಟ ಹಾಗೂ ಬಳಕೆ ಕಂಡು ಬಂದರೆ ಅಂತವರ ವಿರುದ್ದ 1 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತಿದೆ. ಇದಕ್ಕೆ ಯಾರು ಅವಕಾಶ ಮಾಡಿಕೊಡಬಾರದು. ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ, ನೈರ್ಮಲ್ಯ ಕಾಪಾಡುವ ಜೊತೆಗೆ ನಗರಸಭೆಯೊಂದಿಗೆ ಸಹಕಾರಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯರಾದ ಖಾಜಿ ಜಿಲಾನಿಪಾಶಾ, ಮುರ್ತುಜಾ ಹುಸೇನ್‌, ಆಲಂಭಾಷಾ, ವೀರೇಶ ಹಟ್ಟಿ, ಪ್ರಿಯಾಂಕಾ ನಾಯಕ್‌, ಶಬ್ಬೀರ್‌ ಅಹ್ಮದ್‌, ಮುನೀರ್‌ಪಾಶಾ, ಮುಖಂಡರಾದ ಪ್ರಭುರಾಜ್‌, ಎಸ್‌ಪಿ ಟೇಲರ್‌, ಲಿಂಗರಾಜ್‌ ಹೂಗಾರ, ಸಣ್ಣತಿಮ್ಮಯ್ಯ, ಮೈನುದ್ದೀನ್‌, ಕರೀಂಸಾಬ್‌, ನಗರಸಭೆ ಅಧಿಕಾರಿಗಳಾದ ಶಾಂತಕುಮಾರ, ಪ್ರವೀಣ್‌ಕುಮಾರ, ಸುಬ್ರಮಣ್ಯಂ, ಜಗದೀಶ ಸೇರಿದಂತೆ ಇನ್ನಿತರರು ಇದ್ದರು.

Follow Us:
Download App:
  • android
  • ios