ಬೆಂ.ಗ್ರಾಮಾಂತರ: ಬಿಬಿಎಂಪಿ ತ್ಯಾಜ್ಯ ಅಕ್ರಮ ವಿಲೇವಾರಿಗೆ ಆಕ್ರೋಶ

ದೊಡ್ಡಬಳ್ಳಾಪುರ ತಾಲೂಕಿನ ಶಿರವಾರ ಗ್ರಾಮದ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಲಾರಿಗಳಲ್ಲಿ ತಂದು ಅನಧಿಕೃತವಾಗಿ ಸುರಿಯುತ್ತಿರುವುದಕ್ಕೆ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿರವಾರ ಗ್ರಾಮದ ಸಮೀಪದಲ್ಲಿ 40ಕ್ಕೂ ಹೆಚ್ಚು ಕಸದ ಲಾರಿಗಳು ರಾತ್ರಿವೇಳೆ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಲಾರಿಗಳನ್ನು ತಡೆದಿದ್ದಾರೆ.

Unscientific way of Waste management in Bengaluru Ruaral

ಬೆಂ.ಗ್ರಾಮಾಂತರ(ಸೆ.08): ಬಿಬಿಎಂಪಿ ವ್ಯಾಪ್ತಿಯ ಕಸವನ್ನುದೊಡ್ಡಬಳ್ಳಾಪುರ ತಾಲೂಕಿನ ಶಿರವಾರ ಗ್ರಾಮದ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಲಾರಿಗಳಲ್ಲಿ ತಂದು ಅನಧೀಕೃತವಾಗಿ ಸುರಿಯುತ್ತಿರುವುದಕ್ಕೆ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಪಂಗೆ ಸೇರಿದ ಶಿರವಾರ ಗ್ರಾಮದ ಸಮೀಪದಲ್ಲಿ 40ಕ್ಕೂ ಹೆಚ್ಚು ಕಸದ ಲಾರಿಗಳು ರಾತ್ರಿವೇಳೆ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಲಾರಿಗಳನ್ನು ತಡೆದಿದ್ದಾರೆ. ಈ ವೇಳೆ ಚಾಲಕರು ಪರಾರಿಯಾಗಿದ್ದು, ಎರಡು ಲಾರಿಗಳು ಸ್ಥಳದಲ್ಲೆ ಉಳಿದುಕೊಂಡಿವೆ.

2500 ಜನರಿಗೆ 20 ಕೋಟಿ ವಂಚಿಸಿದ್ದ ಮಾಜಿ ಸೈನಿಕ ಸೇರಿ ಮೂವರ ಸೆರೆ

ಬಿಬಿಎಂಪಿ ಕಸವನ್ನು ಈಗಾಗಲೇ ಭಕ್ತರಹಳ್ಳಿ ಹಾಗೂ ಸಕ್ಕರೆ ಗೊಲ್ಲಹಳ್ಳಿಯ ಟೆರ್ರಾಫಾರ್ಮ ಮತ್ತು ಎಂಎಸ್‌ಜಿಪಿ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ತಂದು ಕಸ ಸುರಿಯುತ್ತಿರುವ ಕಾರಣ ಸುತ್ತಮುತ್ತಲಿನ ಗ್ರಾಮಗಳ ಜನರ ಬದುಕು ನರಕದಂತಾಗಿದೆ.

ಇಲ್ಲಿನ ಪರಿಸರ ಸಂಪೂರ್ಣ ವಿಷಮಯವಾಗಿದ್ದು ಗ್ರಾಮಗಳ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದರೂ ಕದ್ದುಮುಚ್ಚಿ ಬಿಬಿಎಂಪಿ ಕಸವನ್ನು ತಾಲೂಕಿನ ಇನ್ನಿತರೆ ಗ್ರಾಮಗಳ ಸಮೀಪ ಸುರಿಯುತ್ತಿರುವುದು ತಾಲೂಕಿನ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ಸುಲಿನ್ ಶೃಂಗಸಭೆ : ಡಯಾಬಿಟೀಸ್ ಆರೈಕೆ ಬಗ್ಗೆ ಕುಂಬ್ಳೆ ಬ್ಯಾಟಿಂಗ್

ರೈತರು ಮತ್ತು ಸಂಘ-ಸಂಸ್ಥೆಗಳ ಮುಖಂಡರು ಆಕ್ರೋಶವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

Latest Videos
Follow Us:
Download App:
  • android
  • ios