ಬೆಂಗಳೂರು(ಏ.24): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್‌ ನಿಯಮದಲ್ಲಿ ಏಪ್ರಿಲ್‌ 23ರಿಂದ ಅನ್ವಯವಾಗುವಂತೆ ಕೊಂಚ ಸಡಿಲಿಕೆ ಮಾಡಿದ್ದ ರಾಜ್ಯ ಸರ್ಕಾರವು ಗುರುವಾರ ಇನ್ನಷ್ಟುಸಡಿಲಿಕೆಯ ಆದೇಶ ಹೊರಡಿಸಿದೆ. ಆರ್ಥಿಕ ಚೇತರಿಕೆ ಉದ್ದೇಶದಿಂದ ಸಣ್ಣ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದೆ.

ಶೈಕ್ಷಣಿಕ ಪುಸ್ತಕ ಮಳಿಗೆ, ಫ್ಯಾನ್‌ ಮಾರಾಟ, ಮೊಬೈಲ್‌ ರೀಚಾಜ್‌ರ್‍ ಅಂಗಡಿ, ತೆಂಗಿನಕಾಯಿ, ಅಡಿಕೆ ಮಾರಾಟ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ತೆರೆಯಲು ಅನುಮತಿ ನೀಡಲಾಗಿದೆ. ಅಂತೆಯೇ ಫä್ರಟ್ಸ್‌, ಐಸ್‌ ಕ್ರೀಮ್‌, ಜ್ಯೂಸ್‌, ಡ್ರೈ ಫä್ರಟ್ಸ್‌ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಕೂಲಿ ಕಾರ್ಮಿಕರ ಕೆಲಸ ಕಾರ್ಯಗಳಿಗೆ ಮತ್ತಷ್ಟುವಿನಾಯಿತಿ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಮೇ 3ರೊಳಗೆ ಬಹುತೇಕ ಕ್ಷೇತ್ರ ಕಾರ್ಯಾರಂಭ, ಆರ್ಥಿಕ ಉತ್ತೇಜನಕ್ಕಾಗಿ ದೊಡ್ಡ ಪ್ಯಾಕೇಜ್‌..!

ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಲಾಗಿದೆ. ಕಿರು ಅರಣ್ಯ ಪ್ರದೇಶದಲ್ಲಿ ಟಿಂಬರ್‌ ಚಟುವಟಿಕೆ ನಡೆಸಲು ಅವಕಾಶ ನೀಡಿಲ್ಲ. ಆದರೆ, ಆದಿವಾಸಿಗಳ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಬಿತ್ತನೆ ಬೀಜ ಮಾರಾಟ, ಬೀಜ ಪೂರೈಕೆ, ನರ್ಸರಿ, ಜೇನು ಸಾಕಾಣಿಕೆ ಮತ್ತು ಅದರ ಉಪ ಉತ್ಪನ್ನಗಳ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಹಿಟ್ಟಿನ ಗಿರಣಿ, ಬೇಳುಕಾಳುಗಳ ಮಿಲ್‌, ಬಿದಿರು, ತೆಂಗು, ಸಂಬಾರ ಪದಾರ್ಥಗಳ ಕೊಯ್ಲು, ಸಂಸ್ಕರಣೆ, ಪ್ಯಾಕೇಜಿಂಗ್‌ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಕೆಮ್ಮು, ಜ್ವರ ಮಾತ್ರೆ ಪಡೆವವರ ಮೇಲೆ ಕಣ್ಣು

ಸಹಕಾರ ಸಂಘಗಳು ಸೇರಿದಂತೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕಾರ್ಯಾರಂಭ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಕನಿಷ್ಠ ಮಟ್ಟದ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಶೈಕ್ಷಣಿಕ ಪುಸ್ತಕಗಳ ಮಾರಾಟ ಮಳಿಗೆಗಳು, ಎಲೆಕ್ಟ್ರಿಕ್‌ ಅಂಗಡಿಗಳು, ಗ್ರಾಮೀಣ ಭಾಗದಲ್ಲಿ ನಿರ್ಮಾಣ ಕಾಮಗಾರಿ, ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿ, ವಿದ್ಯುತ್‌, ಫೋನ್‌ ಸಂಪರ್ಕಕ್ಕೆ ಅನುಮತಿ ಕಲ್ಪಿಸಲಾಗಿದೆ. ನಗರ ಪ್ರದೇಶದಲ್ಲಿ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಮೊಬೈಲ್‌ ರೀಚಾಚ್‌ರ್‍ ಅಂಗಡಿಗಳು, ಆಹಾರ ಸಂಸ್ಕರಣಾ ಘಟಕಗಳು, ಹಾಲು, ಬೇಕರಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಯಾವುದಕ್ಕೆ ಸಡಿಲಿಕೆ?

- ಮೊಬೈಲ್‌ ರೀಚಾಜ್‌ ಅಂಗಡಿ, ಆಹಾರ ಸಂಸ್ಕರಣಾ ಘಟಕ, ಹಾಲು-ಬೇಕರಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ

- ಶೈಕ್ಷಣಿಕ ಪುಸ್ತಕ ಮಾರಾಟ ಮಳಿಗೆ, ಫ್ಯಾನ್‌ ಮಾರಾಟ ಸೇರಿದಂತೆ ಎಲೆಕ್ಟ್ರಿಕ್‌ ಅಂಗಡಿಗಳು

- ನಗರ ಪ್ರದೇಶದಲ್ಲಿ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾರ್ಯ

- ಬಿತ್ತನೆ ಬೀಜ ಮಾರಾಟ, ಬೀಜ ಪೂರೈಕೆ, ನರ್ಸರಿ, ಜೇನು ಸಾಕಾಣಿಕೆ ಮತ್ತು ಅದರ ಉಪ ಉತ್ಪನ್ನಗಳ ಚಟುವಟಿಕೆ

- ಹಿಟ್ಟಿನ ಗಿರಣಿ, ಬಿದಿರು, ತೆಂಗು, ಸಂಬಾರ ಪದಾರ್ಥಗಳ ಕೊಯ್ಲು, ಸಂಸ್ಕರಣೆ, ಪ್ಯಾಕೇಂಜಿಂಗ್‌ ಮತ್ತು ಮಾರಾಟ

- ಗ್ರಾಮೀಣ ಭಾಗದಲ್ಲಿ ನಿರ್ಮಾಣ ಕಾಮಗಾರಿ, ನೀರು ಸರಬರಾಜು-ಒಳಚರಂಡಿ ಕಾಮಗಾರಿ, ವಿದ್ಯುತ್‌, ಫೋನ್‌ ಸಂಪರ್ಕಕ್ಕೆ ಅನುಮತಿ