Asianet Suvarna News Asianet Suvarna News

ಮಂಗಳೂರು: ಆತಂಕ ಸೃಷ್ಟಿಸಿದ ಅನಾಥ ಬ್ಯಾಗ್‌

ಮಂಗಳೂರು ನಗರದ ಪಾಂಡೇಶ್ವರದ ಮಾಲ್‌ನ ಕಾರು ಪಾರ್ಕಿಂಗ್‌ ಜಾಗದಲ್ಲಿ ಅನಾಥ ಬ್ಯಾಗೊಂದು ಪತ್ತೆಯಾಗಿದ್ದು, ಕೆಲಕಾಲದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೆಕ್ಯೂರಿಟಿ ಅವರು ಬ್ಯಾಗ್‌ನ್ನು ಮೊದಲು ನೋಡಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

Unknown bag in Mangalore mall creates Anxiety
Author
Bangalore, First Published Aug 6, 2019, 8:51 AM IST
  • Facebook
  • Twitter
  • Whatsapp

ಮಂಗಳೂರು(ಆ.06): ನಗರದ ಪಾಂಡೇಶ್ವರದ ಮಾಲ್‌ನ ಕಾರು ಪಾರ್ಕಿಂಗ್‌ ಜಾಗದಲ್ಲಿ ಅನಾಥ ಬ್ಯಾಗೊಂದು ಪತ್ತೆಯಾಗಿದ್ದು, ಕೆಲಕಾಲದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಭಾನುವಾರ ಮಾಲ್‌ಗೆ ಆಗಮಿಸಿದ ಯಾರೋ ಕಾರಿನಲ್ಲಿ ರಕ್ತದೊತ್ತಡ (ಬಿಪಿ) ಪರೀಕ್ಷೆ ಮಾಡುವ ಸಾಧನದ ಬ್ಯಾಗ್‌ ತಂದಿದ್ದರು. ಆದರೆ ಮರಳಿ ಹೋಗುವಾಗ ಮಾಲ್‌ನ ಪಾರ್ಕಿಂಗ್‌ ಜಾಗದಲ್ಲೇ ಬಿಟ್ಟು ಹೋಗಿದ್ದರು. ಆ ಹೊತ್ತಿನಲ್ಲಿ ಯಾರೂ ಬ್ಯಾಗ್‌ ಇರುವಿಕೆಯನ್ನು ಗಮನಿಸಿರಲಿಲ್ಲ.

ಇನ್ಮುಂದೆ ಕರಾವಳಿಯ ಎಲ್ಲ ರೈಲುಗಳಿಗೂ ಸಿಸಿ ಕ್ಯಾಮೆರಾ ಕಣ್ಗಾವಲು!

ಸೋಮವಾರ ಬೆಳಗ್ಗೆ ಸೆಕ್ಯುರಿಟಿ ಸಿಬ್ಬಂದಿ ಪರಿಶೀಲನೆ ನಡೆಸುವಾಗ ಬ್ಯಾಗ್‌ ಕಂಡು ಬಂದಿದ್ದು ಇದರಿಂದ ಆತಂಕಿತರಾಗಿ ಪೊಲೀಸರಿಗೆ ತಿಳಿಸಿದರು. ಕೂಡಲೇ ಆಗಮಿಸಿದರು, ಶ್ವಾನದಳ ಪರಿಶೀಲನೆ ನಡೆಸಿತು. ಯಾವುದೇ ಅಪಾಯಕಾರಿ ವಸ್ತುವಲ್ಲವೆಂದು ಖಚಿತವಾದ ಬಳಿಕ ಬ್ಯಾಗ್‌ ತೆರೆದು ನೋಡುವಾಗ ರಕ್ತದೊತ್ತಡ ಸಾಧನವಿತ್ತು. ಈ ಮೂಲಕ ಕೆಲಕಾಲದ ಆತಂಕ ನಿವಾರಣೆಯಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios