Asianet Suvarna News Asianet Suvarna News

ಏನೇ ಖರೀದಿಸಿದರೂ ಕಡ್ಡಾಯವಾಗಿ ರಸೀದಿ ಪಡೆಯಿರಿ

ಯಾವುದೇ ಸರಕು ಮತ್ತು ಸೇವೆಗಳನ್ನು ಗ್ರಾಹಕರು ಖರೀದಿಸಿದಾಗ ಕಡ್ಡಾಯವಾಗಿ ನೋಂದಾಯಿತ ರಶೀದಿಯನ್ನು ಮಾರಾಟಗಾರರಿಂದ ಕೇಳಿ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌. ರಾಜಶೇಖರ್‌ ಗ್ರಾಹಕರಿಗೆ ಸಲಹೆ ನೀಡಿದರು.

Always get a receipt for whatever you buy snr
Author
First Published Dec 29, 2022, 5:29 AM IST

 ಚಿಕ್ಕಬಳ್ಳಾಪುರ : (ಡೊ. 29 ) :  ಯಾವುದೇ ಸರಕು ಮತ್ತು ಸೇವೆಗಳನ್ನು ಗ್ರಾಹಕರು ಖರೀದಿಸಿದಾಗ ಕಡ್ಡಾಯವಾಗಿ ನೋಂದಾಯಿತ ರಶೀದಿಯನ್ನು ಮಾರಾಟಗಾರರಿಂದ ಕೇಳಿ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌. ರಾಜಶೇಖರ್‌ ಗ್ರಾಹಕರಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು (Law)  ಸೇವೆಗಳ ಪ್ರಾಧಿಕಾರ, ಆಹಾರ (food) , ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ,ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದ ಸೆಂಟ್‌ ಜೋಸೆಫ್‌ ಮಹಿಳಾ ಪದವಿ ಪೂರ್ವ  ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜಡ್ಜ್‌ಗಳ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಕೇಂದ್ರ ವಿರೋಧ

ವಸ್ತುವಿನಲ್ಲಿ ದೋಷ ವಿದ್ದರೆ ದೂರು ನೀಡಿ

ಯಾವುದೇ ಸರಕು ಸೇವೆಗಳನ್ನು ಖರೀದಿಸುವಾಗ ಗ್ರಾಹಕರು ಗುಣ ಮಟ್ಟ ಮತ್ತು ಪರಿಮಾಣಗಳ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದು ನಾವು ನೀಡುತ್ತಿರುವ ಹಣದ ಮೌಲ್ಯಕ್ಕೆ ಸೇವೆಗಳು ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು ವಸ್ತುಗಳನ್ನು ಖರೀದಿಸಬೇಕು. ವ್ಯಾಪಾರಿಗಳಿಂದ ಸೇವೆಯಲ್ಲಿ ಅಸಮರ್ಪಕತೆ ಮತ್ತು ದೋಷ ಪೂರ್ಣ ನಿರ್ವಹಣೆ ಆಗಿದ್ದಲ್ಲಿ ಅಂತಹ ವ್ಯಕ್ತಿ ಮತ್ತು ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗೆ ಇದೆ ಎಂದರು.

ಜಿಲ್ಲಾಧಿಕಾರಿ ಎನ…. ಎಂ ನಾಗರಾಜ್‌ ಮಾತನಾಡಿ, ಪ್ರತಿಯೊಬ್ಬರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿದ್ದೇವೆ. ಯಾವುದೇ ಸರಕು ಮತ್ತು ಸೇವೆಗಳನ್ನು ವಸ್ತುಗಳನ್ನು ಖರೀದಿಸುವ ಪೂರ್ವದಲ್ಲಿಯೇ ಗ್ರಾಹಕರ ರಕ್ಷಣೆಗಾಗಿ ಹಲವಾರು ರಕ್ಷಣಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಈ ಕ್ರಮಗಳ ಹೊರತಾಗಿಯೂ ಸಹ ಯಾವುದಾದರೂ ಗ್ರಾಹಕರಿಗೆ ಮೋಸವಾದಲ್ಲಿ ಪರಿಹಾರಕ್ಕೂ ಸಹ ಅವಕಾಶ ಮಾಡಿಕೊಟ್ಟಿದೆ. ಪ್ರತಿಯೊಬ್ಬ ಗ್ರಾಹಕರು ಸಹ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚಾಗಿ ಜಾಗೃತಿ ಹೊಂದಬೇಕೆಂದರು.

ಖರೀದೆಗೆ ಮುನ್ನ ಮಾಹಿತಿ ಪಡೆಯಿರಿ

ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌ ನಾಗೇಶ್‌ ಮಾತನಾಡಿ, ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಸಂಪೂರ್ಣ ಮಾಹಿತಿಯನ್ನು ಕೇಳಿ ಪಡೆಯುವ ಅಧಿಕಾರ ಪ್ರತಿಯೊಬ್ಬ ಗ್ರಾಹಕರಿಗೆ ಇರುತ್ತದೆ. ಸಂಪೂರ್ಣ ಮಾಹಿತಿಯನ್ನು ಪಡೆದ ನಂತರವೇ ಖರೀದಿಗೆ ಮುಂದಾಗಬೇಕು. ಗ್ರಾಹಕರು ತಾವು ಖರೀದಿಸುವ ಸರಕು ಅಥವಾ ಸೇವೆಗಳಲ್ಲಿ ದೋಷವಿದ್ದರೆ ಅದರ ವಿರುದ್ಧ ಸುರಕ್ಷೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆಂದರು.

ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಅಧ್ಯಕ್ಷ ಸಯ್ಯದ್‌ ಅನ್ವರ್‌ ಕಲಿಮ್‌ ಮಾತನಾಡಿ, ಗ್ರಾಹಕ ಖರೀದಿಸಿದ ವಸ್ತುವಿನಲ್ಲಿ ದೋಷವಿದ್ದು, ಆ ವಸ್ತುವನ್ನು ವಾಪಸ್‌ ತೆಗೆದುಕೊಂಡು ಹಣ ಹಿಂತಿರುಗಿಸಲು ಮಾರಾಟಗಾರ ನಿರಾಕರಿಸಿದ ಸಂದರ್ಭದಲ್ಲಿ ಗ್ರಾಹಕರು ಗ್ರಾಹಕ ನ್ಯಾಯಾಲಯದಮೊರೆ ಹೋಗಿ ನ್ಯಾಯ ಪಡೆಯಬಹುದು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿ ಕಾಂತ್‌ ಜೆ ಮಿಸ್ಕಿನ…, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ.ಪಿ, ಆಹಾರ ಸುರಕ್ಷತಾ ಮತ್ತು ಗುಣಮಟ್ಟಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ಸುನಿಲ , ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ   ಮಾಲಾಕಿರಣ…, ಕೆಎಫ್‌ ಸಿಎಸ್‌ ಸಿ ಯ ಜಿಲ್ಲಾ ವ್ಯವಸ್ಥಾಪಕ ಎ .ಸಿ.ಚೌಡೇಗೌಡ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಎ . ಕೃಷ್ಣಯ್ಯ ಶೆಟ್ಟಿ, ಮತ್ತಿತರರು ಇದ್ದರು.

Follow Us:
Download App:
  • android
  • ios