ಬೆಳಗಾವಿ[ಮಾ.22]:  ಕೊರೋನಾ ಭೀತಿ ಹಿನ್ನಲೆಯಲ್ಲಿ ದೇಶಾದ್ಯಂತ ಮಾರ್ಚ್ 31ರವರೆಗೆ ಎಲ್ಲಾ ರೈಲುಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. 

"

 

ಇಂದು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಆರೋಗ್ಯದ ಹಿತದೃಷ್ಟಿಯಿಂದ ಸಬ್‌ಅರ್ಬನ್ ಸೇರಿ 12500 ರೈಲುಗಳ ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಕೊರೋನಾ ಡಿಪ್ರೆಶನ್‌ ನಿಮಗೂ ಬರಬಹುದು ಹುಷಾರು!

ಕೊರೋನಾ ವೈರಸ್ ಹರಡದಂತೆ ಮುಂದಿನ ಎರಡು ವಾರಗಳ ಕಾಲ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಜನತಾ ಕರ್ಫ್ಯೂ ಮುಂದುವರಿಸುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.  ಜನರ ಆರೋಗ್ಯದ ಹಿತದೃಷ್ಟಿಯಿಂದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ‌ನಾನೂ ಸಹ ಮನೆಯಲ್ಲೇ ಇದ್ದೇನೆ. ನಾನು ಗೃಹ ಕಚೇರಿಗೂ ಸಹ ತೆರಳಿಲ್ಲ ಎಂದು ಹೇಳಿದ್ದಾರೆ.