ಹುಬ್ಬಳ್ಳಿ(ಸೆ.07): ಕೋವಿಡ್‌ ಹಿನ್ನೆಲೆಯಲ್ಲಿ ಅತ್ಯಂತ ವಿಶಿಷ್ಟ ಪರಿಸ್ಥಿತಿಯಲ್ಲಿ ಈ ಬಾರಿ ಸಂಸತ್‌ ಅಧಿವೇಶನ ನಡೆಯಲಿದೆ. ಚರ್ಚೆಯೇ ಇಲ್ಲದೆ ಕೇರಳ, ರಾಜಸ್ತಾನ, ಪಶ್ಚಿಮ ಬಂಗಾಳದಲ್ಲಿ ಅಧಿವೇಶನ ಪೂರ್ಣಗೊಳಿಸಿದವರು ನಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವುದು ವಿಚಿತ್ರ ವರ್ತನೆ ಎಂದು ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತ್ಯಂತ ವಿಶಿಷ್ಟಪರಿಸ್ಥಿತಿಯಲ್ಲಿ ಈ ಬಾರಿ ಸಂಸತ್‌ ಅಧಿವೇಶನ ನಡೆಯಲಿದೆ. ಸೆ. 14ರಿಂದ ಅ. 1ರ ವರೆಗೆ ಸಂಸತ್‌ ಅಧಿವೇಶನ ನಡೆಯಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಹಲವಾರು ಮಾರ್ಪಾಡುಗಳನ್ನು ಅನಿವಾರ್ಯವಾಗಿ ಮಾಡಲಾಗಿದೆ. ಶನಿವಾರ ಭಾನುವಾರ ಸಹಿತವೂ ಅಧಿವೇಶನ ಆಯೋಜಿಸಲಾಗಿದೆ. ಇದರಲ್ಲಿ ಬೆಳಗ್ಗೆ ರಾಜ್ಯಸಭೆ 4 ಗಂಟೆ ಸಂಜೆ ಗಂಟೆ ಕಾಲ ಲೋಕಸಭೆ ನಡೆಯಲಿದೆ.

ಕೇರಳ, ರಾಜಸ್ತಾನ, ಪಶ್ಚಿಮ ಬಂಗಾಳದಲ್ಲಿ ಅಧಿವೇಶನ ನಡೆಸಿ ಚರ್ಚೆ ಇಲ್ಲದೇ ಬಿಲ್‌ ಪಾಸ್‌ ಮಾಡಲಾಗಿದೆ. ಕೇರಳದಲ್ಲಿ 14 ಬಿಲ್‌ಗಳನ್ನು ಪಾಸ್‌ ಮಾಡಲಾಗಿದೆ. ತಾವು ಅಧಿಕಾರ ಇರುವಲ್ಲಿ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು 1, 2 ದಿನ ಮಾತ್ರ ಅಧಿವೇಶನ ನಡೆಸಿ ಎಲ್ಲ ಬಿಲ್‌ ಪಾಸು ಮಾಡಿದ್ದಾರೆ. ಈ ಬಗ್ಗೆ ಅವರೇನೂ ಹೇಳುತ್ತಿಲ್ಲ . ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು ವಿರೋಧದ ಜೊತೆ ವಿಚಿತ್ರವಾಗಿ ವರ್ತನೆ ಮಾಡುತ್ತಿವೆ.

'ಹುಬ್ಬಳ್ಳಿಯಲ್ಲಿ ಮತ್ತೊಂದು ಫ್ಲೈ ಓವರ್‌'

ಸಂಸತ್ತಿಗೆ ಸಂಸದರು ಹಾಗೂ ಅತಿ ಮುಖ್ಯ ಅಧಿಕಾರಿಗಳಿಗೆ ಮಾತ್ರ ಸಂಸತ್‌ಗೆ ಅನುಮತಿ ಇದೆ. ಸಂಸದರ ಆಪ್ತ ಸಹಾಯಕರಿಗೆ ಅನುಮತಿಯಿಲ್ಲ. ಸಚಿವರ ವಿಷಯಾಧಾರಿತವಾಗಿ ಜಂಟಿ ಕಾರ್ಯದರ್ಶಿ ಅಥವಾ ಕಾರ್ಯದರ್ಶಿಗಳಿಗೆ ಹಾಗೂ ಒಬ್ಬರು ಆಪ್ತ ಸಹಾಯಕರಿಗೆ ಅವಕಾಶವಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ರಾಜ್ಯಸಭೆ ಹಾಗೂ ಲೋಕಸಭೆ ಎರಡೂ ಛೇಂಬರ್‌ನ್ನು ಅಧಿವೇಶನಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.

ಇನ್ನು ಹಿಂದೆ ಅಧಿವೇಶನ ನಡೆಸುವ ಕುರಿತು ನಾನೇ ಎಲ್ಲ ವಿರೋಧ ಪಕ್ಷಗಳ ನಾಯಕರ ಜೊತೆ ಮಾತನಾಡಿದ್ದೆ. ಮೊದಲು ಎಲ್ಲರೂ ಒಪ್ಪಿಗೆ ನೀಡಿ ನಂತರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಶ್ನೋತ್ತರ ಚರ್ಚೆ ನಡೆಸಲು ನೂರಕ್ಕೂ ಅಧಿಕಾರಿಗಳಿಗೆ ಅನುಮತಿ ನೀಡಬೇಕಾಗುತ್ತದೆ ಎಂದರು.