ಕೊರೋನಾ ರೋಗಿಗಳಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗದಂತೆ‌ ನೋಡಿಕೊಳ್ಳಲು ಸೂಚನೆ| ‌ಹುಬ್ಬಳ್ಳಿಯ ಕಿಮ್ಸ್‌ನ ಎಂಸಿಎಚ್ ಕಟ್ಟಡದಲ್ಲಿ ಆಕ್ಸಿಜನ್ ಸಹಿತ 300 ಆಕ್ಸಿಜನ್ ಬೆಡ್ ವ್ಯವಸ್ಥೆ| ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ: ಜೋಶಿ| 

ಹುಬ್ಬಳ್ಳಿ(ಏ.26): ಕೊರೋನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಜನ ಜೀವನ ನಡೆಸಲು ಜನತೆ ಕಟ್ಟುನಿಟ್ಟನ ನಿಯಮವನ್ನ ಹಾಕಿಕೊಳ್ಳಬೇಕಾಗಿದೆ. ಭಾರತ ಸರ್ಕಾರ ಹೊಸದಾಗಿ 551 ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಅನುಮತಿ ನೀಡಿದೆ‌‌. ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಇಂದು(ಸೋಮವಾರ) ನಗರದ ಕಿಮ್ಸ್‌ ನಲ್ಲಿ ಕೋವಿಡ್ ರೋಗಿಗಳಿಗೆ ಹೆಚ್ಚುವರಿ ಬೆಡ್‌ಗಾಗಿ ಎಂಸಿಎಚ್ ವಿಭಾಗದಲ್ಲಿ ವ್ಯವಸ್ಥೆ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,‌ಹುಬ್ಬಳ್ಳಿಯ ಕಿಮ್ಸ್‌ನ ಎಂಸಿಎಚ್ ಕಟ್ಟಡದಲ್ಲಿ ಆಕ್ಸಿಜನ್ ಸಹಿತ 300 ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಫ್ರೀ ರೇಷನ್‌ ಕೊಟ್ರೆ ಕಾರ್ಮಿಕರು ಕೆಲಸಕ್ಕೆ ಬರೋದಿಲ್ಲ: ವಿಜಯ ಸಂಕೇಶ್ವರ

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ರೋಗಿಗಳಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗದಂತೆ‌ ನೋಡಿಕೊಳ್ಳಲು ಸೂಚಿಸುತ್ತೇವೆ. ಲಾಕ್‌ಡೌನ್ ಬಗ್ಗೆ ತಜ್ಞರು ಏನು ಸಲಹೆ ನೀಡಿದ್ದಾರೆ ಎಂಬುದನ್ನ ನಾನು ನೋಡಿಲ್ಲ. ತಜ್ಞರ ವರದಿ ಸರ್ಕಾರದ ಮುಂದಿದೆ. ಸರ್ಕಾರ ಎಲ್ಲವನ್ನೂ ಪರಿಗಣಿಸಿ ಸೂಕ್ತವಾದ ತೀರ್ಮಾನವನ್ನ ತೆಗೆದುಕೊಳ್ಳುತ್ತದೆ. ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಕೇಂದ್ರ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದ್ದಾರೆ.