ಒಂದೂವರೆಯಿಂದ ಎರಡು ಸಾವಿರ ಜನರಿಗೆ ಚಿಕಿತ್ಸೆ ನೀಡುವ ವೈದ್ಯರು ಕಿಮ್ಸ್‌ನಲ್ಲಿದ್ದಾರೆ| ಕಿಮ್ಸ್‌ಗೆ 100 ಬೆಡ್, ಕಾಟ್, ಬೆಡ್ ಶೀಟ್, ತಲೆದಿಂಬು, 100 ಸಲಾಯಿನ್ ಸ್ಟ್ಯಾಂಡ್‌ಗಳನ್ನು ದಾನವಾಗಿ ನೀಡಿದ ಸ್ವರ್ಣ ಸಮೂಹ ಗ್ರೂಪ್‌| ದೇಶಪಾಂಡೆ ಫೌಂಡೇಶನ್, ಟಾಡಾ ಹಿಟಾಚಿ, ಟಾಟಾ ಮಾರ್ಕೊ ಪೋಲೊಗಳಿಂದ ಒಟ್ಟು 570 ಬೆಡ್‌ಗಳನ್ನು ಕಿಮ್ಸ್‌ಗೆ ದಾನವಾಗಿ ನೀಡಲಾಯಿತು: ಜೋಶಿ| 

ಹುಬ್ಬಳ್ಳಿ(ಮೇ.02): ವಿವಿಧ ಜಿಲ್ಲೆಗಳಿಂದ ಕಿಮ್ಸ್‌ಗೆ ಕೋವಿಡ್ ಚಿಕಿತ್ಸೆಗೆಂದು ಬರುತ್ತಿದ್ದಾರೆ. ಅವರೆಲ್ಲರಿಗೆ ಚಿಕಿತ್ಸೆ ಒದಗಿಸಲಾಗುವುದು.100 ಬೆಡ್‌ನ ಕೋವಿಡ್ ಆಕ್ಸಿಜನ್‌ ಸಹಿತ ಆಸ್ಪತ್ರೆಯನ್ನು ವೇದಾಂತ ಸಂಸ್ಥೆಯವರು ಕಿಮ್ಸ್ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಗಾಳಿಯಿಂದ ಆಕ್ಸಿಜನ್ ಹೀರುವ ಯಂತ್ರೋಪಕರಣಗಳನ್ನು ಖರೀದಿಸಲಾಗುತ್ತದೆ. ಇದರಿಂದ ಕೋವಿಡ್‌ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಒಂದೂವರೆಯಿಂದ ಎರಡು ಸಾವಿರ ಜನರಿಗೆ ಚಿಕಿತ್ಸೆ ನೀಡುವ ವೈದ್ಯರು ಕಿಮ್ಸ್‌ನಲ್ಲಿ ಇದ್ದಾರೆ. ಕಿಮ್ಸ್‌ಗೆ ಸ್ವರ್ಣ ಸಮೂಹ ಗ್ರೂಪ್‌ನಿಂದ 100 ಬೆಡ್, ಕಾಟ್, ಬೆಡ್ ಶೀಟ್, ತಲೆದಿಂಬು, 100 ಸಲಾಯಿನ್ ಸ್ಟ್ಯಾಂಡ್‌ಗಳನ್ನು ದಾನವಾಗಿ ನೀಡಲಾಯಿತು. ಈ ವೇಳೆ ದೇಶಪಾಂಡೆ ಫೌಂಡೇಶನ್, ಟಾಡಾ ಹಿಟಾಚಿ, ಟಾಟಾ ಮಾರ್ಕೊ ಪೋಲೊಗಳಿಂದ ಒಟ್ಟು 570 ಬೆಡ್‌ಗಳನ್ನು ಕಿಮ್ಸ್‌ಗೆ ದಾನವಾಗಿ ನೀಡಲಾಯಿತು ಎಂದು ತಿಳಿಸಿದ್ದಾರೆ.

"

ಲಸಿಕೆ ಬಗ್ಗೆ ಅಪ​ಪ್ರ​ಚಾರ ಮಾಡಿ​ದ​ವ​ರಿಗೆ ಸತ್ಯದ ಅರಿ​ವಾ​ಗಿ​ದೆ: ಸಚಿವ ಜೋಶಿ

ದೇಶದಲ್ಲಿ ಲಾಕ್‌ಡೌನ್‌ ಹೇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಶಿ ಅವರು, ಈ ಬಗ್ಗೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದಷ್ಟೇ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona