Asianet Suvarna News Asianet Suvarna News

ಲಸಿಕೆ ಬಗ್ಗೆ ಅಪ​ಪ್ರ​ಚಾರ ಮಾಡಿ​ದ​ವ​ರಿಗೆ ಸತ್ಯದ ಅರಿ​ವಾ​ಗಿ​ದೆ: ಸಚಿವ ಜೋಶಿ

ಕೊರೋನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ಸಾಕಷ್ಟು ಪ್ರಯತ್ನ| ಪಿಎಂ ಕೇರ್‌ ಫಂಡ್‌ನಲ್ಲಿ ವೆಂಟಿಲೇಟರ್‌ ಖರೀದಿ| ಭಾರತ ಸರ್ಕಾರ ಈ ವಿಷಯದಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ನಿಭಾಯಿಸಿದೆ| ರಾಜ್ಯಕ್ಕೆ 800 ಟನ್‌ ಆಮ್ಲಜನಕ ಪೂರೈಕೆ| ರೆಮ್ಡಿಸಿವಿರ್‌ 1.22 ಲಕ್ಷ ವ್ಯವಸ್ಥೆ: ಪ್ರಹ್ಲಾದ್‌ ಜೋಶಿ| 

Union Minister Pralhad Joshi Talks Over Corona Vaccine geg
Author
Bengaluru, First Published May 1, 2021, 12:25 PM IST

ಧಾರವಾಡ(ಮೇ.01): ಕೋವಿಡ್‌ ವ್ಯಾಕ್ಸಿನ್‌ ಬಗ್ಗೆ ಮೊದಲು ಕೆಲವರು ಅಪಪ್ರಚಾರ ಮಾಡಿದರು. ಆದರೆ, ಅದರ ಫಲ ಈಗ ಗೊತ್ತಾಗುತ್ತಿದ್ದು ಮೊದಲೇ ಈ ಬೆಂಬಲ ದೊರೆತಿದ್ದರೆ ಇಷ್ಟೊತ್ತಿಗೆ ಲಸಿಕೆ ವಿತರಣೆ ಮುಗಿಯುವ ಹಂತಕ್ಕೆ ಬರುತ್ತಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ಲಸಿಕೆ ಬಗ್ಗೆ ತುಂಬಾ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದರು. ಈಗ ಅದು ಸುರಕ್ಷಿತ ಎನ್ನುವುದು ಗೊತ್ತಾಗಿದ್ದು, ಬಹು ಪ್ರಮಾಣದಲ್ಲಿ ಲಸಿಕಾಕರಣ ನಡೆಯುತ್ತಿದೆ. ಆರಂಭದಲ್ಲಿ ಭಯ ಹುಟ್ಟಿಸದಿದ್ದರೆ ಲಸಿಕೆ ಇನ್ನೂ ಜಾಸ್ತಿ ಆಗುತ್ತಿತ್ತು. ಆರೋಪ ಮಾಡಿದವರಿಗೆ ಈಗ ಸತ್ಯದ ಅರಿವಾಗಿದೆ ಎಂದರು.

"

ಅಂದು ರೈಲ್ವೇ ಬೋಗಿ...ಇಂದು ಐಸೋಲೇಷನ್ ವಾರ್ಡ್, ರೈಲ್ವೇ ಅಧಿಕಾರಿಗಳ ವಿನೂತನ ಪ್ರಯತ್ನ

ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ಕೊರೋನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ಸಾಕಷ್ಟು ಪ್ರಯತ್ನವಿದೆ. ಪಿಎಂ ಕೇರ್‌ ಫಂಡ್‌ನಲ್ಲಿ ವೆಂಟಿಲೇಟರ್‌ ಖರೀದಿಸಲಾಗಿದೆ. ಭಾರತ ಸರ್ಕಾರ ಈ ವಿಷಯದಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ನಿಭಾಯಿಸಿದೆ. ರಾಜ್ಯಕ್ಕೆ 800 ಟನ್‌ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ರೆಮ್ಡಿಸಿವಿರ್‌ 1.22 ಲಕ್ಷ ವ್ಯವಸ್ಥೆಯಾಗಿದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios