Karnataka Politics: ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಜೋಶಿ

*   ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಸ್ತಬ್ಧಚಿತ್ರ ಮೆರವಣಿಗೆಗೆ ಕೆಲವು ಅಲಿಖಿತ ನಿಯಮಗಳಿವೆ
*   ಪ್ರತಿ ಮೂರು ವರ್ಷಕೊಮ್ಮೆ ರಾಜ್ಯಗಳು ಸ್ತಬ್ಧಚಿತ್ರ ಕಳುಹಿಸುತ್ತವೆ
*   ಕೋವಿಡ್‌ ಅತ್ಯಧಿಕವಾದರೆ ಸಮಸ್ಯೆ ಅಗದಂತೆ ಎಚ್ಚರ ವಹಿಸಿ

Union Minister Pralhad Joshi Slams on Siddaramaiah grg

ಹುಬ್ಬಳ್ಳಿ(ಜ.19): ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳ(Kerala) ಕಳುಹಿಸಿದೆ ಎಂಬ ಕಾರಣಕ್ಕೆ ಕೇಂದ್ರ ವಿರೋಧಿಸಿಲ್ಲ. ಜತೆಗೆ ಶಂಕರಾಚಾರ್ಯರ ಸ್ತಬ್ಧಚಿತ್ರ ಕಳುಹಿಸಲು ಸೂಚಿಸಿದ್ದೇವೆ ಎನ್ನುವುದು ಶುದ್ಧ ಸುಳ್ಳು. ಈ ವಿಚಾರದಲ್ಲಿ ಸಿದ್ದರಾಮಯ್ಯ(Siddaramaiah) ಮತ್ತು ಕಾಂಗ್ರೆಸ್‌ ನಾಯಕರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಕಿಡಿ ಕಾರಿದರು.

ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಗಣರಾಜ್ಯೋತ್ಸವ ಪರೇಡ್‌ನಲ್ಲಿ(Republic Day Parade) ಭಾಗವಹಿಸುವ ಸ್ತಬ್ಧಚಿತ್ರ ಮೆರವಣಿಗೆಗೆ ಕೆಲವು ಅಲಿಖಿತ ನಿಯಮಗಳಿವೆ. ಪ್ರತಿ ಮೂರು ವರ್ಷಕೊಮ್ಮೆ ರಾಜ್ಯಗಳು ಸ್ತಬ್ಧಚಿತ್ರ ಕಳುಹಿಸುತ್ತವೆ. ಕೇರಳ ಈಗಾಗಲೇ ಒಮ್ಮೆ ಸ್ತಬ್ಧಚಿತ್ರ ನೀಡಿದೆ. ಇತರ ರಾಜ್ಯಗಳಿಗೆ ಅವಕಾಶ ನೀಡಬೇಕು. ಅಲ್ಲದೆ, ಸ್ತಬ್ಧಚಿತ್ರದ ಕೆಲವು ಮಾರ್ಗದರ್ಶಿಯನ್ನು ಪಾಲಿಸಿಲ್ಲ. ಈ ಕಾರಣಕ್ಕೆ ಕೇರಳದ ಸ್ತಬ್ಧಚಿತ್ರ ಬೇಡ ಎಂದಿದ್ದೇವೆ.

Corona Cirsis: ಹುಬ್ಳೀಳಿ ಚಿಕಿತ್ಸೆ ಸಿಗದೇ ಕೋವಿಡ್‌ ಸೋಂಕಿತೆ ನರಳಾಟ

ಹಿಂದೆ ಯಾವ ಕಮ್ಯೂನಿಸ್ಟ್‌ ಪಾರ್ಟಿ ನಾರಾಯಣ ಗುರುಗಳ ಮೂರ್ತಿಯನ್ನು ಭಗ್ನಗೊಳಿಸಿತ್ತೋ, ಈಗ ಅವರು ರಾಜಕೀಯಕ್ಕಾಗಿ ನಾರಾಯಣ ಗುರುಗಳು ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌(Congress) ನಾಯಕರು ಪೂರ್ಣ ವಿಷಯ ತಿಳಿದು ಹೇಳಿಕೆ ನೀಡಬೇಕು. ಅದನ್ನು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ನಾರಾಯಣ ಗುರುಗಳ ಭಕ್ತರ ಮತ್ತು ಅನುಯಾಯಿಗಳಿಗೆ ತಪ್ಪು ಸಂದೇಶ ನೀಡಲಾಗಿದೆ ಎಂದರು.

ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಸೇರಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಉತ್ತರಪ್ರದೇಶದಲ್ಲಿ ಒಂದಿಷ್ಟುಶಾಸಕರು, ಸಚಿವರು ಚುನಾವಣೆ ಬಂದಾಗ ಪಕ್ಷದಿಂದ ಪಕ್ಷಕ್ಕೆ ಹೋಗುವುದು ಸಾಮಾನ್ಯ. ಇದು ಉತ್ತರ ಪ್ರದೇಶದ ಸಂಪೂರ್ಣ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ಉತ್ತಮ ಕೆಲಸವಾಗಿದ್ದು, ಸಮೀಕ್ಷೆಗಳು ಬಿಜೆಪಿ ಗೆಲವಿನ ಬಗ್ಗೆ ಮಾಹಿತಿ ನೀಡಿವೆ. ಇನ್ನು ಯೋಗಿ ಆದಿತ್ಯನಾಥ ತಮ್ಮ ತವರು ಕ್ಷೇತ್ರ ಗೋರಕ್‌ಪುರದಿಂದ ಸ್ಪರ್ಧಿಸುತ್ತಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದರಲ್ಲಿ ಅರ್ಥವಿಲ್ಲ ಎಂದರು.

ವೀಕೆಂಡ್‌ ಕರ್ಫ್ಯೂ ಅಗತ್ಯವಿಲ್ಲ

ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ(Weekend Curfew) ಅಗತ್ಯವಿಲ್ಲ. ಕರ್ಫ್ಯೂ ಜಾರಿಯಿಂದ ಸಾಕಷ್ಟುಅರ್ಥಿಕ ಸಂಕಷ್ಟಸೃಷ್ಟಿಯಾಗಿದೆ. ಅರ್ಥಿಕ ವಹಿವಾಟು ನಡೆಯಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ವೀಕೆಂಡ್‌ ಕರ್ಫ್ಯೂ ಸಡಿಲಿಕೆ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವದಾಗಿ ಹೇಳಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ವಾರಾಂತ್ಯದ ಕರ್ಫ್ಯೂ ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಸಚಿವ ಜೋಶಿ ಹೇಳಿದರು.

ಕೋವಿಡ್‌ ಅತ್ಯಧಿಕವಾದರೆ ಸಮಸ್ಯೆ ಅಗದಂತೆ ಎಚ್ಚರ ವಹಿಸಿ

ಕೋವಿಡ್‌ 3ನೇ ಅಲೆ(Covid 3rd Wave) ಉತ್ತುಂಗಕ್ಕೆ ಹೋದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿ ಬೆಡ್‌, ಆಕ್ಸಿಜನ್‌ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೂಚಿಸಿದ್ದಾರೆ.
ನಗರದ ಸಕ್ರ್ಯೂಟ್‌ ಹೌಸ್‌ ಆವರಣದಲ್ಲಿ ಮಂಗಳವಾರ ಕೋವಿಡ್‌- 19ರ 3ನೇ ಅಲೆ ನಿಯಂತ್ರಣ ಹಾಗೂ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Dharwad: 34 ಖಾಸಗಿ ಶಾಲೆಗಳ ಮಾನ್ಯತೆ ರದ್ದು?

ಈ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದವರ ಸರಾಸರಿ ಪ್ರಮಾಣ ಬಹಳ ಕಡಿಮೆಯಿದೆ. ಹೋಂ ಐಸೋಲೇಶನ್‌ನಲ್ಲಿ ಇದ್ದು ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಸಕಾಲದಲ್ಲಿ ಔಷಧಿಗಳ ಕಿಟ್‌ ಮತ್ತು ಆಪ್ತ ಸಮಾಲೋಚನೆ ಮೂಲಕ ಸಲಹೆಗಳು ಸಿಗಬೇಕು. ಎನ್‌ಜಿಒ ಹಾಗೂ ಸಂಘ ಸಂಸ್ಥೆಗಳ ನೆರವು ಪಡೆದು ಔಷಧ ಕಿಟ್‌ ವಿತರಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುವಂತೆ ಸಚಿವರು ಸೂಚಿಸಿದರು.

ಜಿಲ್ಲಾಸ್ಪತ್ರೆ, ಕಿಮ್ಸ್‌ ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ವೈದ್ಯಕೀಯ ಆಕ್ಸಿಜನ್‌ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಕೋವಿಡ್‌ ಪ್ರಮಾಣ ಅತ್ಯಧಿಕ ಮಟ್ಟಕ್ಕೆ ತಲುಪಿದಾಗ ಯಾವುದೇ ಸೋಂಕಿತರಿಗೂ ತೊಂದರೆ ಆಗದಂತೆ ಎಚ್ಚರವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಕೇಂದ್ರ ಸಚಿವ ಜೋಶಿ ಸೂಚಿಸಿದರು.

ಶಾಸಕ ಜಗದೀಶ್‌ ಶೆಟ್ಟರ್‌(Jagadish Shettar), ಚಳಿ ಇರುವುದರಿಂದ ಕಿಮ್ಸ್‌ನ(KIMS) ಖಾಯಂ ಕಟ್ಟಡಗಳಲ್ಲಿಯೇ ಕೋವಿಡ್‌ ವಾರ್ಡ್‌ ನಿರ್ವಹಿಸಬೇಕು. ಸೋಂಕು ಅತ್ಯಧಿಕವಾದಾಗ ಮೇಕ್‌ಶಿಫ್ಟ್‌ ಆಸ್ಪತ್ರೆ ಬಳಸಿಕೊಳ್ಳಿ ಎಂದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಪೊಲೀಸ್‌ ಆಯುಕ್ತ ಲಾಬುರಾಮ್‌, ಜಿಪಂ ಸಿಇಒ ಡಾ. ಬಿ. ಸುಶೀಲಾ, ಎಸ್‌ಪಿ ಪಿ. ಕೃಷ್ಣಕಾಂತ್‌, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಸೇರಿ ಕಿಮ್ಸ್‌ ವೈದ್ಯರು ಸೇರಿ ಹಲವರಿದ್ದರು.
 

Latest Videos
Follow Us:
Download App:
  • android
  • ios