Corona Cirsis: ಹುಬ್ಳೀಳಿ ಚಿಕಿತ್ಸೆ ಸಿಗದೇ ಕೋವಿಡ್‌ ಸೋಂಕಿತೆ ನರಳಾಟ

*   ಕೊನೆಗೆ ಮನೆಗೆ ಆ್ಯಂಬುಲೆಬ್ಸ್‌ ಕಳುಹಿಸಿ ಚಿಕಿತ್ಸೆ ಕೊಟ್ಟ ಜಿಲ್ಲಾಡಳಿತ
*   ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ
*   ಧಾರವಾಡ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು
 

Covid Infected Woman Faces Problems Due to Not Get Treatment at KIMS in Hubballi grg

ಹುಬ್ಬಳ್ಳಿ(ಜ.17):  ಕೊರೋನಾ(Coronavirus) ಸೋಂಕಿತೆಗೆ ಸರಿಯಾದ ಚಿಕಿತ್ಸೆ(Treatment) ಸಿಗದೆ ಕೆಲಕಾಲ ನರಳಿದ ಘಟನೆ ನಗರದಲ್ಲಿ ನಡೆದಿದೆ. ಕೊನೆಗೆ ಜಿಲ್ಲಾಡಳಿತ ಮನೆಗೆ ಆ್ಯಂಬುಲೆಬ್ಸ್‌ ಕಳುಹಿಸಿ ಚಿಕಿತ್ಸೆ ಕೊಟ್ಟಿದೆ.
ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪತ್ನಿಯ ಸ್ವಾಬ್‌ ಸಂಗ್ರಹ ಮಾಡಿ ಪರೀಕ್ಷೆಗೊಳಪಡಿಸಿದೆ. ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಗಿದ್ದೇನು?:

ಇಲ್ಲಿನ ಸಿಮ್ಲಾನಗರದ ನಿವಾಸಿಗೆ ಕೊರೋನಾ ಲಕ್ಷಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ಆನಂದ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಟೆಸ್ಟ್‌(Covid Test)  ಮಾಡಿಸಿದ್ದರು. ಆಗ ಕೊರೋನಾ ದೃಢಪಟ್ಟಿತ್ತು. ಆದರೆ, ಹೋಂ ಐಸೋಲೇಷನ್‌ನಲ್ಲಿರುವಂತೆ(Home Isolation) ತಿಳಿಸಿದ್ದ ಆರೋಗ್ಯ ಇಲಾಖೆ(Department of Health), ನಂತರ ಯಾವುದೇ ಬಗೆಯ ಚಿಕಿತ್ಸೆ ನೀಡಿರಲಿಲ್ಲ.

Dharwad: 34 ಖಾಸಗಿ ಶಾಲೆಗಳ ಮಾನ್ಯತೆ ರದ್ದು?

ಈ ನಡುವೆ ಇವರ ಸಂಪರ್ಕಕ್ಕೆ ಬಂದಿದ್ದ ಇವರ ಪತ್ನಿಗೂ ಎರಡು ದಿನದಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಮಾತಾಡಿದರೂ ಸರಿಯಾಗಿ ಸ್ಪಂದನೆ ಸಿಕ್ಕಿರಲಿಲ್ಲ. ಸ್ವಾಬ್‌ ಸಂಗ್ರಹಿಸಿಕೊಂಡು ಹೋಗುವಂತೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಗಮನ ಹರಿಸಿರಲಿಲ್ಲ. ಕೊನೆಗೆ ಆರೋಗ್ಯ ಇಲಾಖೆ ಸ್ಪಂದಿಸದ ಕಾರಣ ಆರ್‌ಟಿಪಿಸಿಆರ್‌ ಟೆಸ್ಟ್‌(RTPCR Test) ಮಾಡಿಸಲು ಅವರು ಪತ್ನಿಯನ್ನು ಕರೆದುಕೊಂಡು ಕಿಮ್ಸ್‌ಗೆ(KIMS) ಹೋಗಿದ್ದರು.

ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಬೇಕೆಂದರೆ ಮಧ್ಯಾಹ್ನ 1 ಗಂಟೆಯೊಳಗೆ ಬರಬೇಕೆಂದು ಕಿಮ್ಸ್‌ ಸಿಬ್ಬಂದಿ ಹೇಳಿ ಕಳುಹಿಸಿದ್ದರಂತೆ. ಇದರಿಂದ ಬೇಸತ್ತ ಘಟಿಕಾಚಲಂ ಅವರು ಕೊನೆಗೆ ಮನೆಗೆ ವಾಪಸ್‌ ತೆರಳಿದ್ದರು. ಈ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಸಂಜೆ ವೇಳೆಗೆ ಜಿಲ್ಲಾಡಳಿತ ಆ್ಯಂಬುಲೆನ್ಸ್‌ನ್ನು(Ambulance) ಮನೆಗೆ ಕಳುಹಿಸಿ ಚಿಕಿತ್ಸೆ ನೀಡಿತು. ಅಲ್ಲದೇ ಪತ್ನಿಯ ಸ್ವಾಬ್‌ ಸಂಗ್ರಹಿಸಿಕೊಂಡು ಬಂದಿದೆ.

ಧಾರವಾಡ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು

ಹುಬ್ಬಳ್ಳಿ-ಧಾರವಾಡ (ಹು-ಧಾ) ಕಮೀಷನರೆಟ್‌, ಧಾರವಾಡ ಜಿಲ್ಲಾ ಪೊಲೀಸ್‌ ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದ್ದು, ಆತಂಕ ಆವರಿಸಿದೆ. ಮಹಾನಗರ ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ವರ್ಚುವಲ್‌ ಸಭೆ ನಡೆಸಿ ಸಿಬ್ಬಂದಿಗೆ ಧೈರ್ಯ ಹೇಳಿದ್ದಾರೆ. 

Covid 19 Spike: ಇಂದಿನಿಂದ 1-8ನೇ ಭೌತಿಕ ತರಗತಿ ಬಂದ್‌

ಮೊದಲ ಹಾಗೂ ಎರಡನೇ ಅಲೆಯಂತೆ ಕೋವಿಡ್‌ ಮೂರನೇ ಅಲೆ ಆರಂಭದಲ್ಲೆ ಪೊಲೀಸ್‌ ಸಿಬ್ಬಂದಿಗೆ ಕೊರೋನಾ ಕಾಡುತ್ತಿದೆ. ಕಮೀಷನರೆಟ್‌ನ 9 ಪೊಲೀಸ್‌(Police) ಇನ್‌ಸ್ಪೆಕ್ಟರ್‌ ಸೇರಿದಂತೆ ಸಿಬ್ಬಂದಿ ಸೋಂಕಿತರಾಗಿದ್ದಾರೆ. ಫ್ರಂಟ್‌ಲೈನ್‌ ವಾರಿಯರ್ಸ್‌ಗಳಾಗಿ ಕರ್ತವ್ಯದಲ್ಲಿರುವ ಪೊಲೀಸರಲ್ಲಿ ಸಹಜವಾಗಿ ಕಳವಳಕ್ಕೆ ಕಾರಣವಾಗಿದೆ.

11 ಮಕ್ಕಳಿಗೆ, ಓರ್ವ ಶಿಕ್ಷಕರಿಗೆ ಸೋಂಕು

ಧಾರವಾಡ:  ಶಾಲೆಗಳನ್ನು(Schools) ತಾತ್ಕಾಲಿಕವಾಗಿ ಬಂದ್‌ ಮಾಡಿರುವುದು ಹಾಗೂ ವಾರಾಂತ್ಯ ಕರ್ಫ್ಯೂ(Weekend Curfew) ಹಿನ್ನೆಲೆಯಲ್ಲಿ ಭಾನುವಾರ ಶಾಲಾ ಮಕ್ಕಳು(Children) ಮತ್ತು ಶಿಕ್ಷಕರಲ್ಲಿ(Teachers) ತುಸು ಮಟ್ಟಿಗೆ ಸೋಂಕಿನ ಪ್ರಮಾಣ ತಗ್ಗಿದೆ. ಭಾನುವಾರದ ವರದಿಯಂತೆ ನೇಕಾರ ನಗರದ ಸರ್ಕಾರಿ ಶಾಲೆಯಲ್ಲಿ 11 ಮಕ್ಕಳಿಗೆ ಹಾಗೂ ಕುಂದಗೋಳ ಸರ್ಕಾರಿ ಶಾಲೆಯಲ್ಲಿ ಒರ್ವ ಶಿಕ್ಷಕರಿಗೆ ಕೋವಿಡ್‌ ಸೋಂಕು ಪತ್ತೆಯಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದು ಮನೆಯಲ್ಲಿ ಕ್ವಾರಂಟೈನ್‌(Quarantine) ಆಗಿದ್ದಾರೆ ಎಂದು ಶಿಕ್ಷಣ ಇಲಾಖೆ(Department of Education) ಅಧಿಕಾರಿಗಳು ಮಾಹಿತಿ ನೀಡಿದರು.

ವಾರಾಂತ್ಯ ಕರ್ಫ್ಯೂ ನಿಯಮ ಉಲ್ಲಂಘನೆ

ಧಾರವಾಡ: ಆರಂಭದಲ್ಲಿ ಕೋವಿಡ್‌ ರೂಪಾಂತರ ತಳಿಗೆ ಭಯಗೊಂಡಂತೆ ಕಂಡು ಬಂದ ಧಾರವಾಡದ ಜನತೆ ಇತ್ತೀಚೆಗೆ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಸೇರಿದಂತೆ ವಾರಾಂತ್ಯ ಕರ್ಫ್ಯೂಗೆ ಸ್ಪಂದನೆಯೇ ನೀಡುತ್ತಿಲ್ಲ.
 

Latest Videos
Follow Us:
Download App:
  • android
  • ios