ಹುಬ್ಬಳ್ಳಿ(ಮೇ.16): ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ ಸ್ವಾವಲಂಬಿ ಭಾರತ ಯೋಜನೆಯ 20 ಲಕ್ಷ ಕೋಟಿ ಬೃಹತ್‌ ವೆಚ್ಚದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ 3ನೇ ಹಂತದ 11 ಸೂತ್ರಗಳ ಕ್ರಮಗಳಲ್ಲಿ ದೇಶದ ಕೃಷಿ ಹಾಗೂ ಕೃಷಿ ಆಧಾರಿತ ವೃತ್ತಿಗಳ ಪ್ರೋತ್ಸಾಹಕ್ಕೆ ಹಾಗೂ ಮೂಲ ಸೌಕರ್ಯ ನಿರ್ಮಾಣಕ್ಕೆ 1 ಲಕ್ಷ ಕೋಟಿ ಬೃಹತ್‌ ಅನುದಾನ ತೆಗೆದಿರಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಅನ್ನದಾತನ ಬೆನ್ನಿಗೆ ನಿಂತಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ರೈತರು ಪ್ರಕೃತಿ ವಿಕೋಪ ಹಾಗೂ ತತ್ಸಂಬಂಧಿತ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ದಾಖಲೆ ಆಹಾರ ಧಾನ್ಯ ಉತ್ಪಾದನೆ ಮಾಡಿ ತೋರಿಸಿದ್ದು ಸ್ವಾವಲಂಬಿ ಭಾರತ ಧ್ಯೇಯದ ಮುಖ್ಯ ಕೊಡುಗೆಯಾಗಿದ್ದಾರೆ. ಹೀಗಾಗಿ ದೇಶದ ಕೃಷಿ ಹಾಗೂ ಕೃಷಿ ತತ್ಸಂಬಂಧಿತ ಚಟುವಟಿಕೆ ಮತ್ತು ತನ್ಮೂಲಕ ಗ್ರಾಮೀಣಾಭಿವೃದ್ಧಿಗೆ ಭದ್ರ ಬುನಾದಿ ಹಾಕುವತ್ತ ಅರ್ಥ ಸಚಿವರು ಘೋಷಿಸಿದ ಹಲವಾರು ಕ್ರಮಗಳು ಸಹಕಾರಿಯಾಗಲಿವೆ ಎಂದು ಬಣ್ಣಿಸಿದ್ದಾರೆ.

ಲಾಕ್‌ಡೌನ್‌ ಸಡಿಲ: ಮೇ. 17,18 ರಂದು ಉತ್ತರ ಪ್ರದೇಶಕ್ಕೆ ಸ್ಪೆಷಲ್‌ ರೈಲು

ಬೃಹತ್‌ 1 ಲಕ್ಷ ಕೋಟಿ ಅನುದಾನದಲ್ಲಿ ಆಹಾರ ಸಂಸ್ಕರಣಗಳ ಸಂಕೀರ್ಣಗಳ ವ್ಯವಸ್ಥೆಗೆ 10 ಸಾವಿರ ಕೋಟಿ ಇದರಿಂದ 2 ಲಕ್ಷ ಸಂಸ್ಕರಣ ಘಟಕಗಳಿಗೆ ಅನುಕೂಲವಾಗಲಿದೆ. ಅದೇ ದೇಶಾದ್ಯಂತ ರೈತರ ಉತ್ಪನ್ನಗಳನ್ನು ಸಂರಕ್ಷಿಸಲು ಗೋದಾಮುಗಳು ಹಾಗೂ ಶೈತ್ಯಾಗಾರ ನಿರ್ಮಾಣ, ರೀತಿ ಟೊಮೆಟೋ, ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆದ ರೈತರ ಉತ್ಪನ್ನ ಸಾಗಾಟದಲ್ಲಿ ಶೇ. 50 ರಷ್ಟು ಸಬ್ಸಿಡಿಗಾಗಿ 500 ಕೋಟಿ, ಔಷಧ ಹಾಗೂ ಗಿಡಮೂಲಿಕೆಗಳನ್ನು ಬೆಳೆಯುವ ರೈತರಿಗಾಗಿ ವಿಶೇಷ ಪೋತ್ಸಾಹಕ್ಕೆ 4,000 ಕೋಟಿ, ಗಂಗಾ ನದಿಯ ದಂಡೆಯ ಮೇಲೆ 800 ಹೆಕ್ಟೇರ್‌ ಔಷಧ ಗಿಡಮೂಲಿಕೆಗಳ ಕಾರಿಡಾರ್‌ ಯೋಜನೆ, ಇದರಿಂದ 25 ಲಕ್ಷ ಎಕರೆ ಪ್ರದೇಶದಲ್ಲಿ ಔಷಧ ಸಸ್ಯ ಬೆಳೆಸಲು ಪ್ರೋತ್ಸಾಹ ನೀಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಳಾಗಿದ್ದು ಸ್ವಾವಲಂಬಿ ಕೃಷಿ ಭಾರತ ನಿರ್ಮಾಣಕ್ಕೆ ರಾಜಮಾರ್ಗದಂತಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ದೇಶದ ಮೀನುಗಾರರಿಗೆ ಹಾಗೂ ಮತ್ಸೋದ್ಯಮ ಪೋ›ತ್ಸಾಹಕ್ಕೆ  20,000 ಕೋಟಿ ವಿಶೇಷ ಅನುದಾನ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.