Asianet Suvarna News Asianet Suvarna News

ಬೀದರ್‌ ಚಿಕಪೇಟೆ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ

ಬೀದರ್‌ ನಗರದ ಹೊರವಲಯದ ಚಿಕಪೇಟ್‌ನ ಚತುಷ್ಪಥ ರಸ್ತೆಯ ಉಳಿದ 3.5 ಕಿ.ಮೀ. ರಸ್ತೆ ಕಾಮಗಾರಿಗೆ ಗುರುವಾರ ಕೇಂದ್ರ ಸಚಿವ ಭಗವಂತ ಖೂಬಾ ಭೂಮಿ ಪೂಜೆ ನೇರವೆರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

Union Minister Bhagwant Khooba initiated the road work of Bidar Chikapet today rav
Author
First Published Mar 9, 2023, 9:29 PM IST

ಬೀದರ್‌ (ಮಾ.9) : ಬೀದರ್‌ ನಗರದ ಹೊರವಲಯದ ಚಿಕಪೇಟ್‌ನ ಚತುಷ್ಪಥ ರಸ್ತೆಯ ಉಳಿದ 3.5 ಕಿ.ಮೀ. ರಸ್ತೆ ಕಾಮಗಾರಿಗೆ ಗುರುವಾರ ಕೇಂದ್ರ ಸಚಿವ ಭಗವಂತ ಖೂಬಾ ಭೂಮಿ ಪೂಜೆ ನೇರವೆರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಕಾಮಗಾರಿಯೂ ಏಪ್ರಿಲ್‌ 2015ರಲ್ಲಿ 10 ಕೋಟಿಗೆ ಟೆಂಡರ್‌ ಆಗಿತ್ತು. ಆದರೆ, ಬೀದರ್‌ ಜನತೆ ದುರಾದೃಷ್ಟವಶಾತ್‌ ಮೇ 2016ರಲ್ಲಿ ಪೌರಾಡಳಿತ ಸಚಿವರಾಗಿದ್ದ ಈಶ್ವರ ಖಂಡ್ರೆ(Eshwara khandre) ತಾನು ಸಚಿವನಾದ ಎರಡೆ ತಿಂಗಳಲ್ಲಿ, ಪ್ರಗತಿಯಲ್ಲಿದ್ದ ಕಾಮಗಾರಿ ನಿಲ್ಲಿಸಿದ್ದರು. ಟೆಂಡರ್‌ ರದ್ದುಗೊಳಿಸಿ ಕಾಮಗಾರಿ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ಸರ್ಕಾರ ಬೇರೆ ಕೆಲಸಕ್ಕೆ ಬಳಸಿಕೊಂಡಿದೆ. ಈ ಕಾಮಗಾರಿ ಅಂದಿನಿಂದ ಇಂದಿನವರೆಗೆ ಸುಮಾರು 7 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಕಾರಣ, ಇಂದು ಈ ಕಾಮಗಾರಿಗೆ ಚಾಲನೆ ನೀಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.

ಮಹಾಪುರುಷರ ತ್ಯಾಗದಿಂದ ಭಾರತ ಸಂಸ್ಕೃತಿ, ಸಂಸ್ಕಾರ ವಿಶ್ವಮಾನ್ಯ: ಈಶ್ವರಪ್ಪ...

ಈ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವಲ್ಲಿ ನಾನು ಸತತ 7 ವರ್ಷಗಳಿಂದ ಪ್ರತಿಯೊಬ್ಬ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ನನ್ನ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ್‌ ಮುನೇನಕೊಪ್ಪ(Shankara patil munenakoppa) ಸ್ಪಂದಿಸಿ, ಅವರ ಕೆಕೆಆರ್‌ಡಿಬಿ ಅನುದಾನದಲ್ಲಿ 16 ಕೋಟಿ ರು. ಅನುದಾನ ನೀಡಿದ್ದಾರೆ ಎಂದರು.

10 ಕೋಟಿ ರು.ಅನುದಾನದಲ್ಲಿ ಮುಗಿಯಬೇಕಾದ ಕಾಮಗಾರಿ, ಇಂದು ಒಟ್ಟು 23 ಕೋಟಿ ಅನುದಾನ ಅಂದರೆ ಒಟ್ಟು 13 ಕೋಟಿ ಹೆಚ್ಚುವರಿ ಅನುದಾನ ಈ ಕಾಮಗಾರಿಗೆ ಬೇಕಾಗುತ್ತಿದೆ. ಇದು ಜನರ ತೆರಿಗೆ ಹಣವಾಗಿದ್ದರಿಂದ ಈ ಹೆಚ್ಚುವರಿ 13 ಕೋಟಿ ಅನುದಾನವನ್ನು ಸರ್ಕಾರ ಈಶ್ವರ ಖಂಡ್ರೆ ಅವರಿಂದ ಪಡೆಯಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.

ಇಂತಹ ಅಭಿವೃದ್ಧಿ ವಿರೋಧಿ ಶಾಸಕರು ತನ್ನ ಸ್ಥಾನಕ್ಕೆ ಅಗೌರವ ತೋರಿರುವ ಶಾಸಕರಿಗೆ ಜನರು ಬರುವ ಚುನಾವಣೆಯಲ್ಲಿ ಸೋಲಿಸಿ, ಶಿಕ್ಷೆ ನೀಡಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು. ಈ ಕಾಮಗಾರಿಯೂ ಮುಂಬರುವ 6 ತಿಂಗಳಲ್ಲಿ ಪೂರ್ಣಗೊಳ್ಳಲ್ಲಿದ್ದು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಖೂಬಾ ತಿಳಿಸಿದರು.

ಸುಳ್ಳು, ಮೋಸವೇ ಕಾಂಗ್ರೆಸ್‌ನ ದೇವರು: ಸಿಎಂ ಬೊಮ್ಮಾಯಿ

ಈ ಸಂದÜರ್ಭದಲ್ಲಿ ಶಾಸಕರಾದ ರಹಿಂ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಟೊಣ್ಣೆ, ಪಿಡಬ್ಲುಡಿ ಕಾರ್ಯನಿರ್ವಾಹಕ ಎಂಜಿನಿಯರ್‌ ಸುಭಾಷ್‌ ಸಿಕ್ಸಾನಕರ್‌, ಬಿಜೆಪಿ ಮುಖಂಡರಾದ ಗುರುನಾಥ ಕೊಳ್ಳುರ, ಜಿ.ಕೆ. ಕನ್ಸ್‌ಟ್ರಕ್ಷನ್‌ ಎಮ್‌ಡಿ. ಸಚಿನ್‌ ಕೊಳ್ಳೂರ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios