ಬೆಳಗಾವಿ(ಜ.11): ದೇಶಭಕ್ತರನ್ನು ಭೇಟಿಯಾಗಲು ದೆಹಲಿಯಿಂದ ಇಲ್ಲಿಗೆ ಬಂದಿದ್ದೇನೆ. 72 ವರ್ಷದಲ್ಲಿ ಕಾಂಗ್ರೆಸ್ ಮಾಡದ್ದನ್ನು ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ. ದೇಶದ ಜನ ನರೇಂದ್ರ ಮೋದಿಗೆ ಆಶೀರ್ವಾದ ನೀಡಿದ್ದಾರೆ. ಇದು ಕಾಂಗ್ರೆಸ್‌ಗೆ ಜೀರ್ಣವಾಗುತ್ತಿಲ್ಲ ಎಂದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. 

ಶನಿವಾರ ನಗರದ ಸರ್ದಾರ್ ಮೈದಾನದಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಕ್ಷೇತ್ರದ ಸುರೇಶ್ ಅಂಗಡಿ ಅವರನ್ನು ಮೋದಿ ಅವರು ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಕಾಶ್ಮೀರದಲ್ಲಿ 370 ರದ್ದು, ರಾಮಮಂದಿರ ವಿವಾದ ಇತ್ಯರ್ಥ, ಪೌರತ್ವ ತಿದ್ದುಪಡಿ ಕಾಯ್ದೆ 6 ತಿಂಗಳಲ್ಲಿ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಮೊದಲು ಕಾಶ್ಮೀರದಲ್ಲಿ ಭಾರತ ಧ್ವಜಕ್ಕೆ ಬೆಂಕಿ ಇಡಲಾಗುತ್ತಿತ್ತು, ನಾವು ಹಿಂದೆ ಕಾಶ್ಮೀರದಲ್ಲಿ ಭಾರತ ಧ್ವಜ ಹಾರಿಸಲು ಹೋಗಿದ್ದೇವೆ. 3500 ಕಾರ್ಯಕರ್ತರು ಕರ್ನಾಟಕದಿಂದ ಕಾಶ್ಮೀರದಲ್ಲಿ ಭಾರತ ಧ್ವಜ ಹಾರಿಸಲು ಆಗಮಿಸಿದ್ದರು. ಪ್ರಧಾನಿ ಮೋದಿ ಅವರು ತ್ರಿವಳಿ ತಲಾಖ್ ಕಾನೂನು ರದ್ದು‌ ಮಾಡಿ ಮುಸ್ಲಿಂ ಅಕ್ಕತಂಗಿಯರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆಯನ್ನು 72 ವರ್ಷಗಳಿಂದ ನಿಮಗೆ ತರಲಾಗಲಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಹಿಂದೂ ಬಾಂಧವರಿಗಾಗಿ ಪೌರತ್ವ ನೀಡಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ ನಡೆಯುತ್ತಿತ್ತು, ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂದೂಗಳ ಮತಾಂತರಕ್ಕೆ ಒತ್ತಾಯಿಸಲಾಗುತ್ತಿತ್ತು. ಹೀಗಾಗಿ ಈ ಕಾಯ್ದೆಯಿಂದ ಅಲ್ಲಿಂದ ಬರುವ ಹಿಂದೂಗಳಿಗೆ ಪೌರತ್ಚ ನೀಡುವ ಯೋಜನೆಯಾಗಿದೆ ಎಂದು ಹೇಳಿದ್ದಾರೆ. 

ರಾಣಿ ಚೆನ್ನಮ್ಮ ಕ್ಷೇತ್ರಕ್ಕೆ ಬಂದಿದ್ದೇನೆ ಹೆಚ್ಚಿನ ಜೋಶ್ ಕಾಣಿಸಬೇಕು. ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿ ಕಾರ್ಯಕರ್ತರಿಗೆ ಕೈ ಎತ್ತಿ ಘೋಷಣೆ ಕೂಗಲು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.  

ಇಟಲಿಯಿಂದ ಬಂದ ಸೋನಿಯಾ ಗಾಂಧಿಗೂ ಭಾರತ ಪೌರತ್ವ ನೀಡಿದೆ. ಇದನ್ನು ಸೋನಿಯಾ ಗಾಂಧಿ ಮರೆಯಬಾರದು. ರಾಹುಲ್ ಗಾಂಧಿ ಕೇವಲ ಸುಳ್ಳು ಮಾತನಾಡುವುದು ಸರಿಯಲ್ಲ. 70 ವರ್ಷದಲ್ಲಿ ನೀಡಲು ಸಾಧ್ಯವಾಗದ ಕಾರ್ಯವನ್ನ ಬಿಜೆಪಿ ಸರ್ಕಾರ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮೋದಿ ಸರ್ಕಾರ 6 ತಿಂಗಳಲ್ಲಿ ಮಾಡಿದೆ. ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ದೌರ್ಜನಕ್ಕೆ ಒಳಗಾದವರು, ಅಸಹಾಯಕ ಹಿಂದುಗಳಿಗೆ ರಕ್ಷಣೆ ನೀಡಿದ್ದೇವೆ. ದೌರ್ಜನ್ಯ, ಹಿಂಸೆಗೆ ಒಳಗಾದ ಹಿಂದುಗಳಿಗೆ ಭಾರತದಲ್ಲಿ ಪೌರತ್ವ ನೀಡುವ ಕೆಲಸವನ್ನ ಮೋದಿ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ. 

ಪೌರತ್ವ ಬಯಸಿದ ಹಿಂದುಗಳಿಗೆ ಸೋನಿಯಾ ಗಾಂಧಿ ಪೌರತ್ವ ನೀಡಲಿಲ್ಲ, ಸೋನಿಯಾ ಗಾಂಧಿ ಇಟಲಿಯಿಂದ ಬಂದವಳು, ಆದರೂ ಭಾರತ ದೇಶ ಸೋನಿಯಾ ಗಾಂಧಿಗೆ ಪೌರತ್ವ ನೀಡಿದೆ. ಈಗ ಮೌನಿ ಬಾಬರಂತೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಹಿಂದು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ ಕ್ರೇಜಿವಾಲ್ ಪಾಕಿಸ್ತಾನದ ಮಾತುಗಳನ್ನು ಆಡುತ್ತಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತುಗಳನ್ನ ಸೋನಿಯಾ, ಕ್ರೇಜಿವಾಲ್, ಮಮತಾ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ದೇಶ ಯಾವುದೇ ಮುಸ್ಲಿಂ ಬಾಂಧವರ ಪೌರತ್ವ ಕಸಿದುಕೊಳ್ಳುದಿಲ್ಲ. ರಾಹುಲ್ ಗಾಂಧಿಗೆ ಜನರ ಮುಂದೆ ಮುಖ ತೋರಿಸಲು ಆಗುತ್ತಿಲ್ಲ. ಅದಕ್ಕಾಗಿ ಮುಖ ಮುಚ್ಚಿಕೊಂಡು ವಿದೇಶದಲ್ಲಿ ಓಡಾಡುತ್ತಿದ್ದಾನೆ ಎಂದು ಅನುರಾಗ ಠಾಕೂರ್ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಚಿತ್ರ ಓಡಲಿ ಬಿಡಲಿ ಪ್ರಚಾರಕ್ಕಾಗಿ ಜೆಎನ್‌ಯು ವಿದ್ಯಾರ್ಥಿಗಳ ಪಕ್ಕ ಹೋಗಿ ನಿಲ್ಲುತ್ತಾರೆ ಎಂದು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ವಿರುದ್ಧ ಕಿಡಿ ಕಾರಿದ್ದಾರೆ. 

ಸಮಾವೇಶದಲ್ಲಿ ಸಂಸದ ಅಣ್ಣಾಸಾಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಬಿಜೆಪಿ ಶಾಸಕರಾದ ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ಅನಿಲ್ ಬೆನಕೆ, ಅಭಯ್ ಪಾಟೀಲ್, ಎಂಎಲ್‌ಸಿ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.