Asianet Suvarna News Asianet Suvarna News

ಕೊಟ್ಟ ಮಾತಿನಂತೆ ನೀರು ಹರಿಸಿದ ಬಿಎಸ್‌ವೈ: ಕೇಂದ್ರ ಸಚಿವ ನಾರಾಯಣಸ್ವಾಮಿ

ಶಿರಾ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕೊಟ್ಟಮಾತಿನಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿದ ಕಾರಣ ಮದಲೂರು ಕೆರೆ ಮೂರು ಬಾರಿ ಕೊಡಿ ಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

Union Minister A Narayanaswamy Talks Over BS Yediyurappa At Sira gvd
Author
First Published Jan 14, 2023, 10:50 PM IST

ಶಿರಾ (ಜ.14): ಶಿರಾ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕೊಟ್ಟಮಾತಿನಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿದ ಕಾರಣ ಮದಲೂರು ಕೆರೆ ಮೂರು ಬಾರಿ ಕೊಡಿ ಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಪಟ್ಟನಾಯಕನಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 20ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಯಲಸೀಮೆ ಪ್ರದೇಶದ ನೀರಾವರಿ ಸೌಲಭ್ಯಕ್ಕೆ ಅಪ್ಪರ ಭದ್ರ, ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ ಮಾಡುವುದರ ಜೊತೆಗೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬೇಕೆಂದು ತಮ್ಮ ಜನ್ಮದಿನವನ್ನು ನೀರಾವರಿ ಹಕ್ಕೋತ್ತಾಯ ದಿನವಾಗಿ ಆಚರಣೆ ಮಾಡಿಕೊಂಡು ರೈತಪರ ಕಾಳಜಿ ಹೊಂದಿರುವ ಶ್ರೀ ನಂಜಾವಧೂತ ಶ್ರೀಗಳ ಸೇವಾ ಮನೋಭಾವ ಮೆಚ್ಚುವಂತಹದ್ದು ಎಂದರು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಂಜಾವಧೂತ ಸ್ವಾಮೀಜಿ, ಜಗತ್ತಿಗೆ ಬೆನ್ನೆಲುಬು ಯಾರೆಂದರೆ ಎಷ್ಟೇ ನೋವುಂಡರು ತಾನು ಇತರರಿಗೆ ಅನ್ನ ನೀಡಬೇಕೆಂಬ ಹಂಬಲದಿಂದ ಕೃಷಿ ಮಾಡುವಂತಹ ರೈತ. ಅಂತಹ ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ನೀಡುವಂತಹ ಕೆಲಸ ಸರಕಾರಗಳು ಮಾಡಿದಾಗ ಮಾತ್ರ ಅನ್ನದಾತನ ಬದುಕು ಹಸನಾಗಲಿದೆ.

ಯಾದಗಿರಿಯಲ್ಲಿ ಮೈಲಾರಲಿಂಗನ ಜಾತ್ರಾ ವೈಭವ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು

ಶಿರಾ ಮತ್ತು ಚಿತ್ರದುರ್ಗ ರೈಲ್ವೇ ಮಾರ್ಗ ನಿರ್ಮಾಣವಾದರೆ ರಫ್ತು ವಹಿವಾಟು ಸರಳವಾಗಿ ರೈತರಿಗೆ ಹಾಗೂ ಬಡ ಕುಟುಂಬಗಳ ಪ್ರಯಾಣಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಶ್ರೀಮಠ ಇತರ ಸಂಘಟನೆಗಳ ಜೊತೆ ರೈಲ್ವೆ ಹೋರಾಟ ನಡೆಸಿತ್ತು. ಇದರ ಪರಿಣಾಮ ಕೇಂದ್ರ ಸರಕಾರ ಅನುಮೋದನೆ ನೀಡಿ 600 ಕೋಟಿ ರುಪಾಯಿ ವೆಚ್ಚದ ಅನುದಾನ ಕಾಮಗಾರಿಗೆ ಮೀಸಲಿಡಿಸುವಲ್ಲಿ ಶ್ರಮಿಸಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ರವರ ಸೇವಾ ದಕ್ಷತೆ ಮೆಚ್ಚುವಂಥದ್ದು, ಅಪ್ಪರ ಭದ್ರ ಎತ್ತಿನಹೊಳೆ ನೀರಾವರಿ ಯೋಜನೆಗಳಲ್ಲಿ ಹಾಗೂ ಮದಲೂರು ಕೆರೆಗೆ ನಿಗದಿಯಾಗಿರುವ ನೀರಿನ ಪ್ರಮಾಣದಲ್ಲಿ ಬದಲಾವಣೆಯಾಗದಂತೆ ಸರಕಾರದ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ, ಹಲವಾರು ದಶಕಗಳಿಂದ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಬಯಲು ಸೀಮೆಗೆ ನೀರು ಹರಿಸಬೇಕೆಂಬ ಶ್ರೀಗಳ ಸಂಕಲ್ಪ ಯಶಸ್ಸು ಕಂಡಿದೆ. ದಶಕಗಳ ಹಿಂದೆ ಇದೇ ವಸ್ತು ಪ್ರದರ್ಶನದಲ್ಲಿ ಸಂಸದ ಜನಾರ್ದನ ಸ್ವಾಮಿರವರಿಗೆ ಅಪ್ಪರ ಭದ್ರ ಯೋಜನೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುವಂತೆ ಮನವಿ ಮಾಡಿದ ಪರಿಣಾಮ ಅಂದಿನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅಪರಭದ್ರ ಯೋಜನೆಗೆ ಅನುಮೋದನೆ ನೀಡಿದ್ದರು ಇದರ ಪರಿಣಾಮ ಶಿರಾ ತಾಲೂಕಿನ 65 ಕೆರೆಗಳಿಗೆ ಅಪ್ಪರ ಭದ್ರ ನೀರಾವರಿ ಯೋಜನೆಯಲ್ಲಿ ನೀರು ಸಿಗುವಂತಹ ದಿನಗಳು ಅತಿ ಶೀಘ್ರದಲ್ಲಿಯೇ ಬರಲಿವೆ ಎಂದರು.

ಸಮಾರಂಭದಲ್ಲಿ ವಿಧಾನಸಭೆ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಕೆಂಪೇಗೌಡ ಅಭಿವೃದ್ದಿ ನಿಗಮ ನಿರ್ದೇಶಕ ಮುನಿರಾಜು ಗೌಡ, ತಹಶೀಲ್ದಾರ್‌ ಮಮತ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ನಾದೂರು ಗ್ರಾಪಂ ಅಧ್ಯಕ್ಷೆ ಮೆಹರ್‌ ತಾಜ್‌ ಬಾಬು, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಮಾಜಿ ಜಿ.ಪಂ. ಸದಸ್ಯ ಎಸ್‌.ರಾಮಕೃಷ್ಣ, ಪ್ರಕಾಶ್‌ ಗೌಡ, ಪಿ.ಎಲ್‌.ಡಿ ಬ್ಯಾಂಕ್‌ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಸಮಾಜ ಸೇವಕ ಕಲ್ಕೆರೆ ರವಿಕುಮಾರ್‌, ಮೂಡಲ ಗಿರಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಪ್ರಕ​ರ​ಣ​ಗ​ಳಿಗೆ ಹೆದ​ರದೆ ಹೋರಾಟ ಮುಂದು​ವ​ರೆ​ಸಿ​ದ್ದೇವೆ: ಡಿ.ಕೆ.​ಶಿ​ವ​ಕು​ಮಾರ್‌

ರೈಲ್ವೆ ಮಾರ್ಗದ ಕಾಮಗಾರಿಗೆ ಕೇಂದ್ರ ಅನುಮೋದನೆ: ಶಿರಾ ತಾಲೂಕಿನ ಬಹುದಿನಗಳ ಕನಸಾಗಿರುವ ತುಮಕೂರು-ಶಿರಾ-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿಗೆ ಕೇಂದ್ರ ಸರಕಾರದಲ್ಲಿ ಅನುಮೋದನೆ ಸಿಕ್ಕಿದ್ದು ಸುಮಾರು 600 ಕೋಟಿ ರೂಪಾಯಿ ಹಣ ಯೋಜನೆಗೆ ಮೀಸಲಿಡಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

Follow Us:
Download App:
  • android
  • ios