Asianet Suvarna News Asianet Suvarna News

60 ವರ್ಷ ಕಾಶ್ಮೀರ ಜನತೆಯನ್ನ ಅಮಲಿನಲ್ಲಿ ಇಟ್ಟಿದ್ದು ಯಾರು?: ತಂಗಡಿಗೆ ನಾರಾಯಣ ಸ್ವಾಮಿ ತಿರುಗೇಟು

*  ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಡ್ರಗ್ಸ್ ತರಿಸಿದ್ದು ಯಾರು?
*  60 ವರ್ಷ ಕಾಶ್ಮೀರ ಜನತೆಯನ್ನ ಅಮಲಿನಲ್ಲಿ ಇಟ್ಟಿದ್ದು ಯಾರು?
*  ಕೋವಿಡ್ ನಿಯಮಗಳ ಪ್ರಕಾರ ಗಣೇಶೋತ್ಸವ ಆಚರಣೆ 
 

Union Minister A Narayanaswamy Slams Shivaraj Tangadagi grg
Author
Bengaluru, First Published Sep 9, 2021, 2:38 PM IST
  • Facebook
  • Twitter
  • Whatsapp

ಚಿತ್ರದುರ್ಗ(ಸೆ.09): ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಡ್ರಗ್ಸ್ ತರಿಸಿದ್ದು ಯಾರು?. 60 ವರ್ಷ ಕಾಶ್ಮೀರ ಜನತೆಯನ್ನ ಅಮಲಿನಲ್ಲಿ ಇಟ್ಟಿದ್ದು ಯಾರು?. ಈ ದೇಶದ ಮುಂದೆ ಮೊದಲು ಕಾಂಗ್ರೆಸ್ ನಾಯಕರು ಹೇಳಲಿ, ನಂತರ ಉಳಿದಿದ್ದನ್ನ ನಾನು ಹೇಳುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶಿವರಾಜ್ ತಂಗಡಗಿಗೆ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿಯವರಿಗೆ ಡ್ರಗ್ಸ್ ಟೆಸ್ಟ್ ಮಾಡಿಸಬೇಕು ಎಂಬ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಸಚಿವ ನಾರಾಯಣಸ್ವಾಮಿ ಟಾಂಗ್ಕೊಟ್ಟಿದ್ದಾರೆ. 

ಬಿಜೆಪಿ ನಾಯಕರೆಲ್ಲರ ಕೂದಲು ಚೆಕ್‌ ಮಾಡಬೇಕು: ಶಿವರಾಜ ತಂಗಡಗಿ

ಸರ್ಕಾರದ ಗಣೇಶೋತ್ಸವ ಷರತ್ತುಗಳಿಗೆ ಹಿಂದೂ ಪರ ಸಂಘಟನೆಗಳ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು, ಕೋವಿಡ್ ನಿಯಮಗಳ ಪ್ರಕಾರ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios