Asianet Suvarna News Asianet Suvarna News

27 ಸಾವಿರ ಕುಟುಂಬಕ್ಕೆ ತಲುಪದ ಅನ್ನ ಭಾಗ್ಯ ಹಣ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಪಡಿತರ ಅಕ್ಕಿಗೆ ಬದಲು ಹಣ ನೀಡುತ್ತಿದೆ. ಅರ್ಹರಿಗೆ ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ಪಾವತಿ ಆಗುತ್ತಿದೆ. ಆದರೆ ಜಿಲ್ಲೆಯಲ್ಲಿ ಇಂದಿಗೂ 27 ಸಾವಿರ ಅರ್ಹ ಪಡಿತರ ಚೀಟಿದಾರ ಕುಟುಂಬಗಳಿಗೆ ಹಣ ಪಡೆಯಲು ಸಾಧ್ಯವಾಗಿಲ್ಲ. ಇವರ ಖಾತೆಗಳಿಗೆ ಹಣ ಡಿಬಿಟಿ ಆಗಿಲ್ಲ.

Unable to reach 27,000 families, the food is lucky money snr
Author
First Published Oct 16, 2023, 10:04 AM IST

  ಚಿಕ್ಕಬಳ್ಳಾಪುರ :  ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಪಡಿತರ ಅಕ್ಕಿಗೆ ಬದಲು ಹಣ ನೀಡುತ್ತಿದೆ. ಅರ್ಹರಿಗೆ ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ಪಾವತಿ ಆಗುತ್ತಿದೆ. ಆದರೆ ಜಿಲ್ಲೆಯಲ್ಲಿ ಇಂದಿಗೂ 27 ಸಾವಿರ ಅರ್ಹ ಪಡಿತರ ಚೀಟಿದಾರ ಕುಟುಂಬಗಳಿಗೆ ಹಣ ಪಡೆಯಲು ಸಾಧ್ಯವಾಗಿಲ್ಲ. ಇವರ ಖಾತೆಗಳಿಗೆ ಹಣ ಡಿಬಿಟಿ ಆಗಿಲ್ಲ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇರುವುದು ಸೇರಿದಂತೆ ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ ತಲುಪಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಈ ಬಗ್ಗೆ ಪಡಿತರ ಚೀಟಿದಾರರಿಗೆ ತಿಳಿ ಹೇಳುತ್ತಿದ್ದಾರೆ. ಕೆಲವರು ಬ್ಯಾಂಕ್‌ ಖಾತೆ ತೆರೆಯಲು, ಇ-ಕೆವೈಸಿ ಲಿಂಕ್‌ ಮಾಡಿಸಲು ನಿತ್ಯ ಬ್ಯಾಂಕ್‌ ಮತ್ತು ಇಂಟರ್ನೆಟ್‌ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ.

ಇ–ಕೆವೈಸಿ ಮಾಡಿಸದಿದ್ದರೆ ಹಣ ಇಲ್ಲ

ಜಿಲ್ಲೆಯಲ್ಲಿ ಇಂದಿಗೂ ಸುಮಾರು 27 ಸಾವಿರ ಅನ್ನಭಾಗ್ಯ ಫಲಾನುಭವಿ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿಲ್ಲ. ಖಾತೆ ಹೊಂದಿದ್ದರೂ ಆಧಾರ್ ಜೋಡಣೆ ಆಗಿಲ್ಲ. ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಡಿಬಿಟಿ ಮೂಲಕ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಸಾಧ್ಯವಾಗಿಲ್ಲ.

ಫಲಾನುಭವಿಗಳಿಗೆ ಅನ್ನಭಾಗ್ಯದ ಹಣವನ್ನು ಡಿಬಿಟಿ ಮಾಡಲು ಆರಂಭಿಸಿದಾಗ 51 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರ ಕುಟುಂಬಗಳು ಇ–ಕೆವೈಸಿ ಮಾಡಿಸಿರಲಿಲ್ಲ. ಇದರಿಂದ ಇವರ ಖಾತೆಗಳಿಗೆ ಹಣ ಜಮೆ ಆಗಿರಲಿಲ್ಲ. ಹಂತ ಹಂತವಾಗಿ ಈ ಬಗ್ಗೆ ಪಡಿತರಚೀಟಿದಾರರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮನವರಿಕೆ ಮಾಡಿಕೊಟ್ಟ ನಂತರ ಇ–ಕೆವೈಸಿ ಪ್ರಕ್ರಿಯೆಗಳು ಹೆಚ್ಚಾದವು.

₹17.85 ಬದಲು ₹14.40 ಕೋಟಿ ಸಂದಾಯ

ಜಿಲ್ಲೆಯಲ್ಲಿ ಜುಲೈನಲ್ಲಿಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮೂಲಕ ಒಟ್ಟು 17.85 ಕೋಟಿ ರೂಪಾಯಿಗಳು ಬಿಡುಗಡೆ ಆಗಿತ್ತು. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳ ಖಾತೆ, ಇ–ಕೆವೈಸಿ ಆಗದ ಕಾರಣ 14.40 ಕೋಟಿ ರೂಗಳು ಮಾತ್ರ ಫಲಾನುಭವಿಗಳಿಗೆ ಡಿಬಿಟಿ ಆಗಿದೆ.

‘ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಬೇಕು. ಹೀಗೆ ಇ–ಕೆವೈಸಿ ಆಗದ ಫಲಾನುಭವಿಗಳಿಗೆ ಡಿಬಿಟಿ ಸಾಧ್ಯವಾಗುತ್ತಿಲ್ಲ. ಜುಲೈನಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾದ 51 ಸಾವಿರ ಪಡಿತರಚೀಟಿದಾರರಿಗೆ ಡಿಬಿಟಿ ಸಾಧ್ಯವಾಗಿರಲಿಲ್ಲ. ಈಗ 27 ಸಾವಿರವಿದೆ’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇ–ಕೆವೈಸಿ ಮಾಡಿಸಲು ಪರದಾಟ

ಕಳೆದ ತಿಂಗಳು ಡಿಬಿಟಿ ಆಗಿದ್ದವರಲ್ಲಿ 1500 ಕಾರ್ಡ್‌ದಾರರ ಹಣ ವಾಪಸ್ ಬಂದಿದೆ. ಕುಟುಂಬದ ಮುಖ್ಯಸ್ಥರು ನಿಧನರಾಗಿದ್ದರೆ ಮತ್ತೊಂದು ಖಾತೆ ತೆರೆದಿದ್ದರೆ ಅಂತಹವರಿಗೆ ಹಣ ತಲುಪದೆ ವಾಪಸ್ ಬಂದಿದೆ. ಬ್ಯಾಂಕ್‌ಗಳಲ್ಲಿ ಜನ ದಟ್ಟಣೆಯ ಕಾರಣದಿಂದ ಖಾತೆ ಮಾಡಿಸಲು ಮತ್ತು ಇ–ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲಿಯೂ ಖಾತೆ ಆರಂಭಿಸಬಹುದು. ಆ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಹಣ ಡಿಬಿಟಿ ಆಗುತ್ತದೆ. ಸುಮಾರು ಜನರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios