Asianet Suvarna News Asianet Suvarna News

ಇಂಡಿ: ಫಿಲ್ಟರ್‌ ನೀರಿನ ಟ್ಯಾಂಕ್‌ ಮೈಮೇಲೆ ಬಿದ್ದು ಯುಕೆಜಿ ವಿದ್ಯಾರ್ಥಿ ಸಾವು

ಶಾಲೆಗೆ ಹೋದಾಗ ನೀರು ಕುಡಿಯಲು ಹೋದಾಗ ಫಿಲ್ಟರ್ ನೀರಿನ ಟ್ಯಾಂಕ್ ಮೈಮೇಲೆ ಬಿದ್ದಿರುವುದರಿಂದ ವಿದ್ಯಾರ್ಥಿ ತೀವ್ರ ಗಾಯಗೊಂಡಿದ್ದರಿಂದ ಮಗುವನ್ನು ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿಜಯಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. 

UKG Student Dies due to Filter Water Tank Fell at Indi in Vijayapura grg
Author
First Published Nov 23, 2023, 12:43 PM IST

ಇಂಡಿ(ನ.23):  ಫಿಲ್ಟರ್‌ ನೀರಿನ ಟ್ಯಾಂಕ್‌ ಮೈಮೇಲೆ ಬಿದ್ದು ಯುಕೆಜಿ ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಪಟ್ಟಣದ ಪುರಸಭೆ ವ್ಯಾಪ್ತಿಯ ಸಾತಪೂರ ಗ್ರಾಮದಲ್ಲಿನ ಆರ್.ಎಂ.ಶಹಾ ಪಬ್ಲಿಕ ಶಾಲೆಯಲ್ಲಿ ನಡೆದಿದೆ. ತಾಲೂಕಿನ ಮಾವಿನಹಳ್ಳಿ ಗ್ರಾಮದ ಶಿವರಾಜ ರೋಡಗಿ(6) ಮೃತ ವಿದ್ಯಾರ್ಥಿ. 

ಬುಧವಾರ ಶಾಲೆಗೆ ಹೋದಾಗ ನೀರು ಕುಡಿಯಲು ಹೋದಾಗ ಫಿಲ್ಟರ್ ನೀರಿನ ಟ್ಯಾಂಕ್ ಮೈಮೇಲೆ ಬಿದ್ದಿರುವುದರಿಂದ ವಿದ್ಯಾರ್ಥಿ ತೀವ್ರ ಗಾಯಗೊಂಡಿದ್ದರಿಂದ ಮಗುವನ್ನು ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿಜಯಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. 

ವಿಜಯಪುರ: ಗೊಂದಲಗಳ ಮಧ್ಯೆ ಕೊನೆಗೊಂಡ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ..!

ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಶಹರ ಠಾಣೆ ಸಿಪಿಐ ರಾಜಕುಮಾರ ಜಿರಗ್ಯಾಳ, ಗ್ರಾಮೀಣ ಸಿಪಿಐ ಎಂ.ಎಂ.ಡಪ್ಪಿನ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow Us:
Download App:
  • android
  • ios