Asianet Suvarna News Asianet Suvarna News

ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ನಿಧನ

ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನ‌ ಹೊಂದಿದ್ದಾರೆ. ಉಡುಪಿಯಲ್ಲಿ ಈ‌ಟಿವಿ ವರದಿಗಾರನಾಗಿ ಹಲವು ವರುಷಗಳ‌ ಕಾಲ ಸೇವೆ ಸಲ್ಲಿಸಿದ ರವಿರಾಜ್ ನಂತರ ಸುವರ್ಣ ವಾಹಿನಿಯಲ್ಲಿ  ಪೊಲಿಟಿಕಲ್ ವರದಿಗಾರನಾಗಿ‌ ಕೆಲಸ ಮಾಡಿ ಬಳಿಕ‌ ಉಡುಪಿಯಲ್ಲಿ ಪ್ರೈಮ್ ಟಿವಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

Udupi Senior journalist Raviraj Valalmbe Passes away
Author
Bangalore, First Published Jan 8, 2020, 8:41 AM IST
  • Facebook
  • Twitter
  • Whatsapp

ಉಡುಪಿ(ಜ.08): ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ (50) ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನ‌ ಹೊಂದಿದ್ದಾರೆ. ಉಡುಪಿಯಲ್ಲಿ ಪ್ರೈಮ್ ಟಿವಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಉಡುಪಿಯ‌ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿದ್ದ ಅವರಿಗೆ ಇದ್ದಕ್ಕಿದ್ದಂತೆ ಎದೆ‌ನೋವು‌ ಕಾಣಿಸಿಕೊಂಡ‌ ಹಿನ್ನಲೆಯಲ್ಲಿ ಕೂಡಲೇ ಅದರ್ಶ ಅಸ್ಪತ್ರೆಗೆ ಕರೆದುಕೊಂಡು‌ ಹೋಗುತ್ತಿದ್ದಾಗ ದಾರಿಯಲ್ಲಿಯೇ ಅಸುನೀಗಿದ್ದಾರೆ.

ಯಕ್ಷಋಷಿ ಹೊಸ್ತೋಟ ಮಂಜುನಾಥ್ ಭಾಗವತ ಇನ್ನಿಲ್ಲ, ಮಂದಾರ್ತಿ ಭಾಗವತ ಸುಬ್ರಹ್ಮಣ್ಯ ಆಚಾರ್ ಆತ್ಮಹತ್ಯೆ

ಉಡುಪಿಯಲ್ಲಿ ಈ‌ಟಿವಿ ವರದಿಗಾರನಾಗಿ ಹಲವು ವರುಷಗಳ‌ ಕಾಲ ಸೇವೆ ಸಲ್ಲಿಸಿದ ರವಿರಾಜ್ ನಂತರ ಸುವರ್ಣ ವಾಹಿನಿಯಲ್ಲಿ ಪೊಲಿಟಿಕಲ್ ವರದಿಗಾರನಾಗಿ‌ ಕೆಲಸ ಮಾಡುತ್ತಿದ್ದರು. ಇವರು ಉಡುಪಿ ಮತ್ತು ಬೆಂಗಳೂರಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಇಬ್ಬರು ಪುತ್ರಿಯರನ್ನು ಹೊಂದಿರುವ ಅವರು ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ.

ಭಾರತ್ ಬಂದ್: ಕೋಲಾರದಲ್ಲಿ ಪ್ರತಿಭಟನಾಕಾರರ ಬಂಧನ

Follow Us:
Download App:
  • android
  • ios