ಬೈಂದೂರು ಸರ್ಕಲ್ ಬಳಿ  ಪೊಲೀಸರು ಪರಿಶೀಲನೆ ನಡೆಸುವ ವೇಳೆ ಕಂಟೈನರ್‌ನಲ್ಲಿ ಅಕ್ರಮ ಸಾಗಾಟ ಪತ್ತೆ

ಉಡುಪಿ : ಕಂಟೈನರ್ ನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಐವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೈಂದೂರು ಸರ್ಕಲ್ ಬಳಿ ಪರಿಶೀಲನೆ ನಡೆಸುವ ವೇಳೆ, ಕಂಟೈನರ್ ನಲ್ಲಿ ಜಾನುವಾರು ಸಾಗಿಸುತ್ತಿರುವುದು ಪತ್ತೆಯಾಗಿದೆ. ಕಂಟೈನರ್ ನಲ್ಲಿದ್ದ 20 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಬೆಳಗಾವಿಯಿಂದ ಜಾನುವಾರುಗಳನ್ನು ತರಲಾಗುತ್ತಿತ್ತು ಎನ್ನಲಾಗಿದೆ. ಹಿಂಸಾತ್ಮಕ ರೂಪದಲ್ಲಿ ಜಾನುವಾರುಗಳನ್ನು ಕಂಟೈನರ್ ನಲ್ಲಿ ತುಂಬಲಾಗಿತ್ತು.

ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.