Udupi Paryaya 2022: ಸರ್ವಜ್ಞ ಪೀಠಾರೋಹಣ ಮಾಡಿದ ಕೃಷ್ಣಾಪುರ ವಿದ್ಯಾಸಾಗರ ಸ್ವಾಮೀಜಿ!

*ಶ್ರೀ ವಿದ್ಯಾಸಾಗರ ತೀರ್ಥರ 4ನೇ ಪರ್ಯಾಯ, 
*ಇಂದು ಬೆಳಗ್ಗೆ ಪೀಠಾರೋಹಣ, ದರ್ಬಾರ್‌, ಉಡುಪಿ ಕೃಷ್ಣನಪೂಜೆ
*ಇದು 6ನೇ ಶತಮಾನದ ಪ್ರಥಮ ಪರ್ಯಾಯ
*ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಮೆರವಣಿಗೆ
 

Udupi Paryaya 2022 Krishnapur Vidyasagar Swamiji to worship Shri Krishna for next two yaers mnj

ಉಡುಪಿ (ಜ. 18): ಉಡುಪಿ ಶ್ರೀ ಕೃಷ್ಣಮಠದ 500 ವರ್ಷಗಳ ದೈವಾರ್ಷಿಕ ಪರ್ಯಾಯೋತ್ಸವದ ಇತಿಹಾಸದಲ್ಲಿ, 251ನೇ ಪರ್ಯಾಯೋತ್ಸವ ಅತ್ಯಂತ ಸರಳವಾಗಿ, ಆದರೆ ಅಷ್ಟೇ ಸಂಪ್ರದಾಯಬದ್ಧವಾಗಿ ನಡೆಯಿತು. ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಪರ್ಯಾಯ ಕಾರ್ಯಕ್ರಮಗಳನ್ನು ಸರಳ ಹಾಗೂ ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು. ಪರ್ಯಾಯದ ಸಂಪ್ರದಾಯದಂತೆ ಕೃಷ್ಣಾಪುರ ಮಠದ ಸಂಪ್ರದಾಯವಾದಿ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಂಗಳವಾರ ಬೆಳಿಗ್ಗೆ ಸರ್ವಜ್ಞ ಪೀಠಾರೋಹಣ ಮಾಡಿ, 8.30ರ ಸುಮಾರಿಗೆ ರಾಜಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ದರ್ಬಾರ್‌ ಸಭೆ ನಡೆಸಿ, ಕೃಷ್ಣನಿಗೆ ಮಹಾಪೂಜೆಯನ್ನು ನೆರವೇರಿಸಿದರು. ಈ ಮೂಲಕ ಇನ್ನೆರಡು ವರ್ಷಗಳ ಕಾಲ ಉಡುಪಿ ಕೃಷ್ಣನ ಪೂಜೆ ನೆರವೇರಿಸುವ ಅಧಿಕಾರ ಪಡೆದಿದ್ದಾರೆ.

.ಕೃಷ್ಣಮಠದ ಗರ್ಭಗುಡಿ ಬಳಿ ಅದಮಾರು ಈಶಪ್ರೀಯ ತೀರ್ಥರಿಂದ  ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಕೃಷ್ಣಾಪುರ ವಿದ್ಯಾಸಾಗರ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಿದರು. ಅಕ್ಷಯಪಾತ್ರೆ, ಅನ್ನದ ಸಟ್ಟುಗ ಹಸ್ತಾಂತರವಾಗಿದ್ದು ಅನ್ನಬ್ರಹ್ಮನ ಕ್ಷೇತ್ರದಲ್ಲಿ ಮುಂದೆ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಪೂಜೆ ನೆರವೇರಿಸುವ ಅಧಿಕಾರ ಪಡೆದಿದ್ದಾರೆ. ದರ್ಬಾರ್ ನಲ್ಲಿ ಎಂಟು ಸ್ವಾಮೀಜಿಗಳು ಭಾಗಿಯಾಗಿದ್ದರು.  ಅಷ್ಟಮಠಾಧೀಶರು ಕುಳಿತುಕೊಳ್ಳುವ ಪಲ್ಲಕ್ಕಿಗಳನ್ನು ಹೊರುವುದಕ್ಕೆ ಭಕ್ತರಿಗೆ ಅವಕಾಶ ನೀಡಲಿಲ್ಲ. ಪಲ್ಲಕ್ಕಿಗಳನ್ನು ವಾಹನದ ಮೇಲಿಟ್ಟು ಮೆರವಣಿಗೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು.ಇನ್ನು ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ , ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್ ಭಾಗಿಯಾಗಿದ್ದರು

ಇದನ್ನೂ ಓದಿ: Paryaya mahotsava 2022: ಉಡುಪಿ ಪರ್ಯಾಯೋತ್ಸವದ ನಿಮಗೆಷ್ಟು ಗೊತ್ತು?

ರಾಜಾಂಗಣ ದರ್ಬಾರ್‌ ಸಭೆ: ಪರ್ಯಾಯ ದರ್ಬಾರ್‌ ನಡೆಯುವ ರಾಜಾಂಗಣವನ್ನು ಹೂವುಗಳಿಂದ ಸಂಪೂರ್ಣವಾಗಿ ಸಿಂಗರಿಸಿದ್ದು, ಸೀಮಿತ ಸಂಖ್ಯೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆ ಮತ್ತು ದರ್ಬಾರ್‌ ಸಭೆ ವೀಕ್ಷಣೆಗೆ ನಗರದ ಕೆಲ ಕಡೆಗಳಲ್ಲಿ ಬೃಹತ್‌ ಎಲ್‌ಇಡಿ ಪರದೆಗಳನ್ನೂ ಅಳವಡಿಸಲಾಗಿದೆ.ಕೋವಿಡ್‌ ಸಾಂಕ್ರಾಮಿಕ ಮಿತಿ ಮೀರುತ್ತಿರುವುದರಿಂದ ಸರ್ಕಾರದ ಸೂಚನೆಯಂತೆ ಅನಿವಾರ್ಯವಾಗಿ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸಬೇಕಾಯಿತು. ಸಾಂಕೇತಿಕ ಮೆರವಣಿಗೆ, ಸೀಮಿತ ಸಂಖ್ಯೆಯ ಪ್ರೇಕ್ಷಕರ ಉಪಸ್ಥಿತಿಯಲ್ಲಿ ದರ್ಬಾರ್‌ ಸಭೆ ಆಯೋಜಿಸಲಾಯಿತು. 

ಶ್ರೀ ಈಶಪ್ರಿಯರಿಂದ ಪೂಜೆ: ಅದಮಾರು ಮಠದ ಪರ್ಯಾಯದ ಕೊನೇ ದಿನವಾದ ಸೋಮವಾರ ಪರ್ಯಾಯ ಪೀಠಾಧೀಶ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಕೊನೆಯ ಮಹಾಪೂಜೆ ನೆರವೇರಿಸಿದರು. ನಂತರ ತಮ್ಮ ಮಠದ ವತಿಯಿಂದ ಸಾವಿರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.

ಇದನ್ನೂ ಓದಿ: Udupi Paryayothsava: ಇಂದಿನಿಂದ ಕೃಷ್ಣಾಪುರ ಶ್ರೀಗಳ ಪರ್ಯಾಯ ಶುರು

ವಾಹನ-ಪಲ್ಲಕ್ಕಿ ಮೆರವಣಿಗೆ: ಕೋವಿಡ್‌ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಜನರ ಭಾಗವವಹಿಸುವಿಕೆಯನ್ನು ನಿರ್ಬಂಧಿಸಲಾಗಿದ್ದು, ಅಷ್ಟಮಠಾಧೀಶರು ಕುಳಿತುಕೊಳ್ಳುವ ಪಲ್ಲಕ್ಕಿಗಳನ್ನು ಹೊರುವುದಕ್ಕೆ ಭಕ್ತರಿಗೆ ಅವಕಾಶ ನೀಡಲಿಲ್ಲ. ಪಲ್ಲಕ್ಕಿಗಳನ್ನು ವಾಹನದ ಮೇಲಿಟ್ಟು ಮೆರವಣಿಗೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಪರಾರ‍ಯಯ ಹಿನ್ನೆಲೆಯಲ್ಲಿ ಡಿವೈಎಸ್ಪಿಯಿಂದ ಎಸೈವರೆಗಿನ 70, ಎಎಸೈ 60, ಮಹಿಳಾ ಪೊಲೀಸ್‌ 60, ಸಿಬ್ಬಂದಿ 650, 7 ಸಶಸ್ತ್ರ ತುಕಡಿ, 4 ಕೆಎಸ್‌ಆರ್‌ಪಿ ತುಕಡಿ ಹಾಗೂ 1 ಶೀಘ್ರ ಕಾರ್ಯಾಚರಣೆ ತಂಡಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.ಒಂದೆಡೆ ಸ್ವತಃ, ವೈಭವ ಒಲ್ಲದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಆಡಂಬರವಿಲ್ಲದೆ ಸರಳವಾಗಿ ಪರ್ಯಾಯೋತ್ಸವ ನಡೆಯಬೇಕು ಎಂದು ಆಶಿಸಿದ್ದರು. ಆದರೂ ಭಕ್ತರು ವೈಭವದಿಂದ ಪರ್ಯಾಯೋತ್ಸವ ನಡೆಸಲು ಸಿದ್ಧತೆಗಳನ್ನು ನಡೆಸಿದ್ದರು. ಇನ್ನೊಂದೆಡೆ ಜಿಲ್ಲೆಯಲ್ಲಿ

ನಿರಾಳವಾಗಿದ್ದ ಉಡುಪಿ: ಸರ್ಕಾರದ ನಿಯಮಗಳನ್ನು ಪಾಲಿಸಲು ಜಿಲ್ಲಾಡಳಿತದ ಸೂಚನೆ, ಪರ್ಯಾಯೋತ್ಸವ ಸಮಿತಿಯ ವಿನಂತಿ, ಶ್ರೀಗಳ ಆಶಯಕ್ಕೆ ಪೂರಕವಾಗಿ ಜನರು ಸ್ಪಂದಿಸಿದರು. ಸೋಮವಾರ ಹಗಲಿನಲ್ಲಿ ಉಡುಪಿ ನಗರದಲ್ಲಿ ಪರ್ಯಾಯದ ಕಳೆಯೇ ಕಾಣುತ್ತಿರಲಿಲ್ಲ. ಕೃಷ್ಣಮಠದ ಪರಿಸರ ಸೋಮವಾರ ದಿನವಿಡೀ ನಿರಾಳವಾಗಿತ್ತು. ಮಂಗಳವಾರ ಮುಂಜಾನೆ ಮೆರವಣಿಗೆಯಲ್ಲಿ ಭಾಗವಹಿಸಲಾಗದ ಸಾಕಷ್ಟುಜನರು ಸೋಮವಾರ ಹಗಲಿನಲ್ಲಿ ಕೃಷ್ಣಮಠಕ್ಕೆ ಭೇಟಿ ನೀಡುತ್ತಿದ್ದುದು ಕಂಡುಬಂತು.

Latest Videos
Follow Us:
Download App:
  • android
  • ios