ತಾಯಿಯ ಕೊಳೆತ ಶವದ ಪಕ್ಕದಲ್ಲೇ ನಾಲ್ಕು ದಿನ ಕಳೆದಿದ್ದ ಬುದ್ದಿಮಾಂದ್ಯ ಮಗಳು ಆಸ್ಪತ್ರೆಯಲ್ಲಿ ಸಾವು!

ತಾಯಿಯ ಸಾವಿನ ಅರಿವಿಲ್ಲದೆ ಶವದ ಪಕ್ಕದಲ್ಲಿ ನಾಲ್ಕು ದಿನ ಕಳೆದ ಬುದ್ಧಿಮಾಂದ್ಯ ಯುವತಿಯೋರ್ವಳನ್ನು ಉಡುಪಿಯ ಕುಂದಾಪುರ ದಲ್ಲಿ ರಕ್ಷಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಆ ಯುವತಿಯೂ ಕೊನೆಯುಸಿರೆಳೆದ ದಾರುಣ ಘಟನೆ ನಡೆದಿದೆ.

Udupi news demented daughter pragathi shetty dies after spent 4 days near her mother corpse news rav

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಆ ತಾಯಿ ಮತ್ತು ಮಗಳು ಜೊತೆಯಾಗಿ ವಾಸಿಸುತ್ತಿದ್ದರು. ಅದೇನಾಯ್ತು ಗೊತ್ತಿಲ್ಲ, ಮೊದಲೇ ಅನಾರೋಗ್ಯ ಪೀಡಿತೆಯಾಗಿದ್ದ 61 ವರ್ಷ ವಯಸ್ಸಿನ ತಾಯಿ ಜಯಂತಿ ಶೆಟ್ಟಿ ಯಾರ ಅರಿವಿಗೂ ಬಾರದಂತೆ ಮನೆಯೊಳಗೆ ಶವವಾಗಿದ್ದರು.

ದುರಾದೃಷ್ಟವಶಾತ್ ಅವರ ಸಾವು ಆಸುಪಾಸಿನ ಯಾರ ಗಮನಕ್ಕೂ ಬಂದಿಲ್ಲ. ಬುದ್ಧಿಮಾಂದ್ಯ ಮಗಳು 32 ವರ್ಷ ಪ್ರಾಯದ ಪ್ರಗತಿ ತಾಯಿಯ ಶವದ ಪಕ್ಕದಲ್ಲಿ ಮೂರು ದಿನಕ್ಕೂ ಹೆಚ್ಚು ಕಾಲ ಕಳೆಯುವಂತಾಗಿತ್ತು. ಅನ್ನ ಆಹಾರವಿಲ್ಲದೆ ನಿಸ್ತೇಜವಾಗಿ ಕೊಳೆತ ಶವದ ಪಕ್ಕದಲ್ಲಿ ಮಲಗಿದ್ದ ಪ್ರಗತಿಯನ್ನು ತಡರಾತ್ರಿ ಪೊಲೀಸರ ನೆರವಿನೊಂದಿಗೆ ರಕ್ಷಿಸಲಾಗಿತ್ತು. ಬೇಸರದ ಸಂಗತಿ ಎಂದರೆ ಇದೀಗ ಬುದ್ಧಿಮಾಂದ್ಯ ಮಗಳು ಪ್ರಗತಿ ಕೂಡ ಆಸ್ಪತ್ರೆಯಲ್ಲಿ ಕೊನೆಯದಿದ್ದಾಳೆ.

ಉತ್ತರ ಕನ್ನಡ: ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು

ಈ ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ದಾಸರಹಾಡಿಯಲ್ಲಿ. ಜಯಂತಿಯವರ ಪತಿ ಬ್ಯಾಂಕ್ ಅಧಿಕಾರಿಯಾಗಿದ್ದು ಈ ಹಿಂದೆ ಅವರು ಮೃತಪಟ್ಟಿದ್ದರು. ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿಯವರು, ಮೇ 13ರಂದು ಕೋಟೇಶ್ವರ ದೇವಸ್ಥಾನಕ್ಕೆ ಹೋಗಲು ಇದೆ ಎಂದು ರಿಕ್ಷಾ ಚಾಲಕನಿಗೆ ತಿಳಿಸಿದರು. ಈ ನಡುವೆ ಅವರು ಕಾಲು ಜಾರಿ ಬಿದ್ದು ಮನೆಯಲ್ಲಿ ಸತ್ತಿದ್ದರು. ಅಕ್ಕ ಪಕ್ಕದ ಮನೆಯವರು ಮೂರು ದಿನದಿಂದ ಯಾವುದೇ ಚಟುವಟಿಕೆ ಇಲ್ಲದೆ ಇರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿ ಮನೆ ಒಳಗೆ ನೋಡಿದಾಗ, ತಾಯಿಯ ಕೊಳೆತ ಶವದ ಪಕ್ಕದಲ್ಲಿ ಬುದ್ಧಿಮಾಂದ್ಯ ಯುವತಿ ಪ್ರಗತಿ ಅನ್ನ ಆಹಾರವಿಲ್ಲದೆ ಬಳಲಿ ಮಲಗಿದ್ದರು. ಪೊಲೀಸರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಗತಿಯ ಜೀವ ಉಳಿಯಲಿಲ್ಲ. ಈ ಮೂಲಕ ತಾಯಿ ಮಗಳು ಮೂರೇ ದಿನದ ಅಂತರದಲ್ಲಿ ಅಸುನೀಗಿದ್ದಾರೆ.

ಅಂಜಲಿ ಕುಟುಂಬದ ಬೆನ್ನಿಗೆ ನಿಂತ ಹುಕ್ಕೇರಿ ಹಿರೇಮಠ; ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಬಂದ ಹಣ ಕುಟುಂಬಸ್ಥರಿಗೆ ನೀಡಿದ ಶ್ರೀಗಳು

ಇದೊಂದು ದಾರುಣ ಘಟನೆ. ಪ್ರಗತಿಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆದರೂ ಫಲಕಾರಿಯಾಗಲಿಲ್ಲ. ದಾಸರಹಾಡಿಯ ಆಸು ಪಾಸಿನ ಜನ ಈ ತಾಯಿ ಮಗಳ ಸಾವನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ.

Latest Videos
Follow Us:
Download App:
  • android
  • ios