ಉಡುಪಿ (ಫೆ.27):  ಕಿವುಡಿ ಮತ್ತು ಮೂಗಿ, 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಅಪರಾಧಿ ಹರೀಶ್ (33) ಎಂಬಾತನಿಗೆ ಉಡುಪಿಯ ಪೋಕ್ಸೋ ತ್ವರಿತ ನ್ಯಾಯಾಲಯ 15 ವರ್ಷಗಳ ಕಠಿಣ ಜೈಲು ಶಿಕ್ಷೆ, 15 ಸಾವಿರ ದಂಡ ವಿಧಿಸಿ ಶಿಕ್ಷೆ ನೀಡಿದೆ.

ಅಲ್ಲದೇ ನೊಂದ ಬಾಲಕಿಗೆ ದಂಡದಲ್ಲಿ 10 ಸಾವಿರ ರು. ಹಾಗೂ  ಸರ್ಕಾರದ ಸಂತ್ರಸ್ತ ಪರಿಹಾರ ನಿಧಿಯಿಂದ  9 ಲಕ್ಷ ರು. ಪರಿಹಾರ ನೀಡಲು ಆದೇಶಿಸಿದೆ.

   ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ ಡಿಸೆಂಬರ್ ತಿಂಗಳಿನಲ್ಲಿ ಈ ಅತ್ಯಾಚಾರ ಘಟನೆ ನಡೆದಿತ್ತು. ನೆರೆಮನೆಯ ಆರೋಪಿಯು ಬಾಲಕಿಯನ್ನು ನಿರ್ಮಾಣ ಹಂತದ ಮನೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದ. 2019ರಲ್ಲಿ ನೋವಿನಿಂದ ನರಳಿದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗರ್ಭವತಿಯಾಗಿದ್ದಳು, ನಂತಕ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯ ಸಂಜ್ಞೆಯಿಂದ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿತ್ತು. 

ಹೋಂ ವರ್ಕ್‌ಗೆ ಹೆದರಿ ರೇಪ್‌ಆಗಿದೆ ಎಂದು ವಿದ್ಯಾರ್ಥಿನಿ ನಾಟಕ... ಒಂದಿನ ಕಾಡಲ್ಲಿದ್ದಳು!

  ಘಟನೆಗೆ ಲಭ್ಯವಾಗಿದ್ದ 22 ಸಾಕ್ಷಿಗಳ ಪೈಕಿ ಸಂತ್ರಸ್ತೆ ತಾಯಿ ಸೇರಿದಂತೆ 13 ಮಂದಿ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿತ್ತು. ಬಾಲಕಿಯನ್ನು ವಿಶೇಷ ತಜ್ಞರ ಮೂಲಕ ವಿಚಾರಣೆಗೊಳಪಡಿಸಲಾಗಿತ್ತು. ಡಿ.ಎನ್.ಎ ವರದಿ ಕೂಡ  ಆರೋಪವನ್ನು ಸಾಬೀತು ಮಾಡಿತ್ತು. ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಬಾಲಕಿ ಪರ ವಾದ ಮಂಡಿಸಿದ್ದರು.   

  ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಫೋಕ್ಸೋ ನ್ಯಾಯಾಲಯ ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಅವರು ಶುಕ್ರವಾರ ಶಿಕ್ಷೆ ಘೋಷಿಸಿದ್ದಾರೆ. ಇದು ಫೋಕ್ಸೋ ಪ್ರಕರಣದಲ್ಲಿ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ನೀಡಿದ ಗರಿಷ್ಠ ಶಿಕ್ಷೆಯಾಗಿದೆ