ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿದ್ರೆ ಹುಷಾರ್!, ಉಡುಪಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಮರಳು ದಂಧೆ ಉದ್ಯಾವರ ಗ್ರಾಮದ ರಾ.ಹೆ 66 ರ ಪಕ್ಕದಲ್ಲಿನ ಸೋದೆ ಮಠದ ಜಾಗದಲ್ಲಿ ತನ್ನ ಸ್ಕೂಟರ್ ನಿಲ್ಲಿಸಿ ಮನೆಗೆ ಹೊರಡುತ್ತಿದ್ದ ವ್ಯಕ್ತಿ ವಿರುದ್ಧ ಅಪರಿಚಿತ 3 ಜನರು, ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿರುವ ಘಟನೆ ನಡೆದಿದೆ.

Udupi man attacked by a gang who raised voice against sand mining gow

ಉಡುಪಿ (ಮಾ.20): ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥರು ಶನಿವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಅಕ್ರಮ ಮರಳು ಮಾಫಿಯಾದ ವಿರುದ್ದ ಧ್ವನಿ ಎತ್ತಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವ್ಯಕ್ತಿಯೋರ್ವರಿಗೆ ದುಷ್ಕರ್ಮಿಗಳು ತಡರಾತ್ರಿ ಹಲ್ಲೆ ನಡೆಸಲು ಮುಂದಾದ ಘಟನೆ ವರದಿಯಾಗಿದೆ. ಉದ್ಯಾವರ ಮಠದ ಕುದ್ರು ಪಾಪನಾಶಿನಿ ಹೊಳೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಅನೇಕ ಸಮಸ್ಯೆಗಳು ಉಂಟಾಗುತ್ತಿದ್ದು ಇದರ ವಿರುದ್ದ ಚಳುವಳಿ ನಡೆಸುತ್ತೇವೆ ಎಂದು ಶ್ರೀಗಳು ಗುಡುಗಿದ್ದರು. 

ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಕಾರ್ಕಳ ಕೃಷ್ಣಶಿಲೆ ರವಾನೆ

ಇದರ ಬೆನ್ನಲೇ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ಥಳೀಯರಾದ ಭಾಸ್ಕರ್ ಕರ್ಕೇರಾ (55) ಶನಿವಾರ ರಾತ್ರಿ ಉದ್ಯಾವರ ಗ್ರಾಮದ ರಾ.ಹೆ 66 ರ ಪಕ್ಕದಲ್ಲಿನ ಸೋದೆ ಮಠದ ಜಾಗದಲ್ಲಿ ತನ್ನ ಸ್ಕೂಟರ್ ನಿಲ್ಲಿಸಿ ಮನೆಗೆ ಹೊರಡುತ್ತಿದ್ದಂತೆ ಅಪರಿಚಿತ 3 ಜನರು, ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದಾರೆ. ಅವರಿಂದ ತಪ್ಪಿಸಿಕೊಂಡು ಮನೆಗೆ ತೆರಳಿದ್ದರು.

ಉಡುಪಿಯಲ್ಲಿ ಪ್ರಚಾರ ಫಲಕ ಅಳವಡಿಸಲು ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ

ಬೆಳಗ್ಗೆ ಸ್ಕೂಟರ್ ನಿಲ್ಲಿಸಿದ ಸ್ಥಳಕ್ಕೆ ಆಗಮಿಸಿದಾಗ ಸ್ಕೂಟರ್ ರನ್ನು ದುಷ್ಕರ್ಮಿಗಳು ನಜ್ಜುಗುಜ್ಜುಗೊಳಿಸಿದ್ದಾರೆ. ಇದರಿಂದಾಗಿ ರೂ 10,000 ನಷ್ಟವಾಗಿದೆ ಎಂದು ಭಾಸ್ಕರ್ ಅವರು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios