ಉಡುಪಿ, [ಡಿ.04]: ರಾಜ್ಯ ಮಟ್ಟದ ಪತ್ರಿಕೆಗೆ ಫ್ರೀಲಾನ್ಸ್ ಆಗಿ ಕೆಲಸ ಮಾಡುತ್ತಿರುವ ವರದಿಗಾರನೊಬ್ಬನ ಕಾಮಕಾಂಡ ಬಯಲಾಗಿದೆ. 

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಂದ್ರ ಕೆ. ಹೆಮ್ಮಾಡಿ ಎಂಬಾತನನ್ನು ಪೋಕ್ಸೋ ಕಾಯಿದೆಯಡಿ ಪೊಲೀಸರು ಬಂಧಿಸಿದ್ದಾರೆ.  ತನ್ನ ಸಲಿಂಗ ಕಾಮಾಸಕ್ತಿಗೆ ಶಾಲಾ ಬಾಲಕರನ್ನು ಬಳಸಿಕೊಂಡಿದ್ದು, ಈತನ ವಿರುದ್ಧ ಇದೀಗ 21 ಪೋಕ್ಸೋ ಪ್ರಕರಣಗಳು ಬೆಳಕಿಗೆ ಬಂದಿವೆ.

"

ಪತ್ರಿಕೋದ್ಯಮ ಹಾಗೂ ಕಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಚಂದ್ರ ಹೆಮ್ಮಾಡಿ ಹಲವು ಶಾಲಾ ಕಾರ್ಯಕ್ರಮಗಳಿಗೆ ತೆರಳುತ್ತಿದ್ದ. ಸಮಾರಂಭದ ನಂತರದಲ್ಲಿ ಅಲ್ಲಿನ ಮಕ್ಕಳ ಜೊತೆ ಆತ್ಮೀಯವಾಗಿ ಬೆರೆತು  ವಿಶ್ವಾಸ ಗಳಿಸುತ್ತಿದ್ದ. 

ಮಕ್ಕಳ ಆಸಕ್ತಿ ತಿಳಿಯುತ್ತಿದ್ದಂತೆ ಅವರಿಗೆ ಹಲವು ಆಮಿಷಗಳನ್ನೊಡ್ಡಿ ತನ್ನ ಕಾಮ ತೀಟೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. 

ತನ್ನ ಕೃತ್ಯಗಳು ಹೊರಬರದಂತೆ ಬಾಲಕರಿಗೆ ಕೊಲೆ ಬೆದರಿಕೆವೊಡ್ಡುತ್ತಿದ್ದ. ತನಿಖೆ ವೇಳೆ ತನ್ನ ಎಲ್ಲಾ ಕೃತ್ಯಗಳನ್ನು ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ. ಇದೀಗ ಆರೋಪಿಯನ್ನು ಉಡುಪಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಕೋರ್ಟ್ ಡಿಸೆಂಬರ್ 17 ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ.