Udupi: ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸ್ಥಳೀಯ ಸಮಾವೇಶ

ಹಿಂದೂಗಳ ಅಸ್ತಿತ್ವ ಮತ್ತು ಹಿಂದೂ ಧರ್ಮದ ಉಳಿವಿಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ ಇದೆ. ಇದಕ್ಕಾಗಿ ಎಲ್ಲಾ ಸಂಘಟನೆಗಳು, ಪ್ರತಿಯೊಬ್ಬ ಹಿಂದೂವೂ ಒಟ್ಟಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಇವರು ಕರೆ ನೀಡಿದರು.

Udupi District Local Convention of Hindu Janajagruti Samiti gow

ಉಡುಪಿ(ಡಿ.26): ಹಿಂದೂಗಳ ಅಸ್ತಿತ್ವ ಮತ್ತು ಹಿಂದೂ ಧರ್ಮದ ಉಳಿವಿಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ ಇದೆ. ಇದಕ್ಕಾಗಿ ಎಲ್ಲಾ ಸಂಘಟನೆಗಳು, ಪ್ರತಿಯೊಬ್ಬ ಹಿಂದೂವೂ ಒಟ್ಟಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಇವರು ಕರೆ ನೀಡಿದರು. ಅವರು ಹಿಂದು ಜನಜಾಗೃತಿ ಸಮಿತಿಯು ಉಡುಪಿಯಲ್ಲಿ ಆಯೋಜಿಸಿದ ಜಿಲ್ಲಾ ಸ್ಥಳೀಯ ಹಿಂದೂ ರಾಷ್ಟ್ರ ಜಾಗೃತಿ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ. ಚಂದ್ರಶೇಖರ ಶೆಟ್ಟಿ, ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ. ರಾಜಶೇಖರ ಹೆಬ್ಬಾರ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ ಇವರು ಉದ್ಘಾಟನೆ ಮಾಡಿದರು. 

ಜಿಲ್ಲೆಯ ಅನೇಕ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಹಿಂದುತ್ವನಿಷ್ಠರು ಇದರಲ್ಲಿ ಭಾಗಿಯಾಗಿದ್ದಾರೆ. "ಹಿಂದೂ ಸಂಘಟನೆಯ ಅವಶ್ಯಕತೆ ಮತ್ತು ಅನಿವಾರ್ಯತೆ" ಈ ವಿಷಯದ ಬಗ್ಗೆ ಮಾತನಾಡಿದ ರಾಜಶೇಖರ್ ಹೆಬ್ಬಾರ್ ಇವರು,  "ವಸುದೈವ ಕುಟುಂಬಕಂ" ಎಂಬ ಔನ್ನತ್ಯ ಇರುವ ಹಿಂದೂ ರಾಷ್ಟ್ರದ ಅವಶ್ಯಕತೆ ನಮಗೆ ಇದೆ. ಹಿಂದೂಗಳು ಒಗ್ಗಟ್ಟಾಗಬೇಕು. ಹಿಂದೂ ಕುಟುಂಬದೊಳಗೆ ಸಾಮರಸ್ಯ ಇರಬೇಕು. ಹಿಂದೂಗಳು ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಅಗತ್ಯವಿದೆ ಎಂದರು.

Ballari: ಹಿಂದೂ‌-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾದ ಬಳ್ಳಾರಿ: ಅಯ್ಯಪ್ಪಸ್ವಾಮಿ ಪೂಜೆ ಆಯೋಜಿಸಿದ ನೂರ್ ಮೊಹಮ್ಮದ್

ಧರ್ಮ ಪ್ರಜ್ಞೆ ಮತ್ತು ತ್ಯಾಗ ಎಲ್ಲರಲ್ಲೂ ಬೇಕಾಗಿದೆ. ಸನಾತನ ಸಂಸ್ಕೃತಿ ಹಾಗೂ ಸನಾತನ ಧರ್ಮವು ಬೆಳೆಸಬೇಕು, ಉಳಿಸಬೇಕು ಎಂದರು.
"ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ" ಈ ವಿಷಯದ ಬಗ್ಗೆ ಮಾತನಾಡಿದ ಚಂದ್ರಶೇಖರ ಶೆಟ್ಟಿ ಇವರು ನಮ್ಮ ಮಕ್ಕಳಿಗೆ ನಾವು ಸಂಸ್ಕಾರ ಮತ್ತು ಸಂಸ್ಕೃತಿ ಯನ್ನು ನೀಡುವ ಅವಶ್ಯಕತೆ ಇದೆ. ಹಿಂದೂ ರಾಷ್ಟ್ರದ ಪರಿಕಲ್ಪನೆ ನಮ್ಮ ಮಕ್ಕಳಿಗೆ ಬರುವಂತೆ ಮಾಡಬೇಕು. ಹಿಂದೂ ರಾಷ್ಟ್ರ ಸ್ಥಾಪನೆಗೆ ಪಣ ತೊಟ್ಟಿರುವ ಹಿಂದೂ ಜನಜಾಗೃತಿ ಸಮಿತಿಯ ಜೊತೆಗೆ ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದರು.

ಬಲವಂತದ ಮತಾಂತರ ಆರೋಪ, ಕ್ರಿಸ್ಮಸ್ ಸಂಭ್ರಮಾಚರಣೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿತ!

ಹಿಂದೂ ಮಹಾಸಭಾ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ. ಪ್ರಮೋದ್ ಇವರು ಮಾತನಾಡಿ, ಹಿಂದೂಗಳಲ್ಲಿ ಭಯವನ್ನು ಹುಟ್ಟಿಸಲು ಮತ್ತು ಅವರನ್ನು ಆರ್ಥಿಕವಾಗಿ ಕುಗ್ಗಿಸಲು ಹಿಂದೂ ನೇತಾರರ ಹತ್ಯೆ ನಡೆಯುತ್ತಿದೆ. ಇವೆಲ್ಲ ನಿಲ್ಲಬೇಕಾದರೆ ಹಿಂದೂ ರಾಷ್ಟ್ರ ಒಂದೇ ಪರಿಹಾರ ಎಂದು ಹೇಳಿದರು.

Latest Videos
Follow Us:
Download App:
  • android
  • ios