'ಡಂಗುರಾವ ಸಾರಿ ಹರಿಯ' ದಾಸರ ಪದಕ್ಕೆ ಅದಮಾರು ಸ್ವಾಮೀಜಿ ಹರಿವಾಣ ನೃತ್ಯ
* 'ಡಂಗುರಾವ ಸಾರಿ ಹರಿಯ' ಎಂದು ಕುಣಿದರು ಪರ್ಯಾಯ ಶ್ರೀಗಳು
* "ಡಂಗುರಾವ ಸಾರಿ ಹರಿಯ" ದಾಸರ ಪದಕ್ಕೆ ಹರಿವಾಣ ನೃತ್ಯ
* ಆಷಾಢ ಮಾಸದ ಸಂಪ್ರದಾಯ ಆಚರಣೆ
ಉಡುಪಿ(ಜು. 21) ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿಯ ಪ್ರಯುಕ್ತ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತುಳಸಿ ಹರಿಮಾಣವನ್ನು ತಲೆಯ ಮೇಲಿಟ್ಟು "ಡಂಗುರಾವ ಸಾರಿ ಹರಿಯ" ದಾಸರ ಪದಕ್ಕೆ ಹರಿವಾಣ ನೃತ್ಯ ಮಾಡಿದರು.
ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಎಡನೀರು ಸ್ವಾಮೀಜಿ
ಆಷಾಢ ಮಾಸದಲ್ಲಿ ಕೃಷ್ಣ ದೇವರಿಗೆ ರಾತ್ರಿ ಪೂಜೆ ಆದ ನಂತರ ಉಡುಕು ವಾದ್ಯ, ಸೂರ್ಯ ವಾದ್ಯ, ನಾದಸ್ವರ, ಸಂಕೀರ್ತನೆ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆದ ನಂತರ ದೇವರ ಎದುರಿನ ಮಂಟಪದಲ್ಲಿ ಸ್ವಾಮೀಜಿಯವರು ದೇವರಿಗೆ ಮಂಗಳಾರತಿ ಮಾಡಿ ತುಳಸಿ ಹರಿವಾಣವನ್ನು ತಲೆಯಲಿಟ್ಟು ನೃತ್ಯ ನಡೆಸಿ ಪ್ರದಕ್ಷಿಣೆ ಮಾಡುವುದು ಸಂಪ್ರದಾಯವಾಗಿದೆ.
ಈ ಸೇವೆಯು ಆಷಾಢ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತೀಕ ಮಾಸದ ಶುಕ್ಲ ಏಕಾದಶಿಯವರೆಗೆ ಅಂದರೇ ಚಾತುರ್ಮಾಸದ 8 ಏಕಾದಶಿಗಳವರೆಗೂ ನಡೆಯುತ್ತದೆ.