Asianet Suvarna News Asianet Suvarna News

ಹಸುಗಳ ಕೆಚ್ಚಲಿನಲ್ಲಿ ಹುಣ್ಣು: ರೈತರ ಆತಂಕ

ಗ್ರಾಮದಲ್ಲಿ 200ಕ್ಕೂ ಹೆಚ್ಚು ಎಚ್‌ಎಫ್, ಜರ್ಸಿಯಂತಹ ಮಿಶ್ರತಳಿ ಹಸು, ಅಲ್ಪ ಪ್ರಮಾಣದಲ್ಲಿ ದೇಶಿ ತಳೀಯ ಹಸುಗಳು ಇವೆ. ಮಿಶ್ರತಳಿಗಳ ಕೆಚ್ಚಲಿನಲ್ಲಿ ಹುಣ್ಣು ಕಾಣಿಸಿಕೊಂಡಿವೆ. ರೈತರು ಹಾಲು ಕರೆಯಲು ತೊಂದರೆಯಾಗಿದೆ. ಹುಣ್ಣಿನಿಂದ ಹಾಲು ನೀಡಲು ಹಸು ಹಿಂಜರಿದರೆ, ಹಾಲು ಕರೆಯುವ ರೈತರ ಕೈಗಳಲ್ಲಿ ಕೂಡ ಹುಣ್ಣು ಆಗುತ್ತಿವೆ. 

Udder diseases of dairy cows at Kikkeri
Author
Bengaluru, First Published Oct 23, 2018, 5:29 PM IST

ಕಿಕ್ಕೇರಿ[ಅ.23]: ಹೋಬಳಿಯ ಸಾಸಲು ಗ್ರಾಮದಲ್ಲಿನ ಹಸುಗಳ ಕೆಚ್ಚಲು, ಹಾಲು ಕರೆಯುವ ರೈತರ ಕೈಗಳಲ್ಲಿ ಹುಣ್ಣಿನ ಗುಳ್ಳೆ ಕಾಣಿಸಿಕೊಂಡಿರುವುದರಿಂದ ರೈತರು ಆತಂಕಗೊಂಡಿದ್ದಾರೆ.

ಗ್ರಾಮದಲ್ಲಿ 200ಕ್ಕೂ ಹೆಚ್ಚು ಎಚ್‌ಎಫ್, ಜರ್ಸಿಯಂತಹ ಮಿಶ್ರತಳಿ ಹಸು, ಅಲ್ಪ ಪ್ರಮಾಣದಲ್ಲಿ ದೇಶಿ ತಳೀಯ ಹಸುಗಳು ಇವೆ. ಮಿಶ್ರತಳಿಗಳ ಕೆಚ್ಚಲಿನಲ್ಲಿ ಹುಣ್ಣು ಕಾಣಿಸಿಕೊಂಡಿವೆ. ರೈತರು ಹಾಲು ಕರೆಯಲು ತೊಂದರೆಯಾಗಿದೆ. ಹುಣ್ಣಿನಿಂದ ಹಾಲು ನೀಡಲು ಹಸು ಹಿಂಜರಿದರೆ, ಹಾಲು ಕರೆಯುವ ರೈತರ ಕೈಗಳಲ್ಲಿ ಕೂಡ ಹುಣ್ಣು ಆಗುತ್ತಿವೆ. ಇದರಿಂದ ಹಸು, ರೈತರು ನೋವಿನಿಂದ ನರಳುವಂತಾಗಿದೆ. ಸಿಡುಬು ರೋಗ ಚಹರೆಯಂತಿದ್ದು ಪಶುವೈದ್ಯರು ನೀಡಿರುವ ಮುಲಾಮು ಹಚ್ಚಿದರೆ ಹಾಲಿನ ಬಣ್ಣ ಕಂದು ಬಣ್ಣವಾಗಲಿದೆ.

ವೈದ್ಯರು ಕೆಚ್ಚಲುವಿಗೆ ಹಚ್ಚಲು ಕೊಟ್ಟಿರುವ ಔಷಧಿ(ಪೊಟಾಷಿಯಂ ಪರಮಾಂಗನೇಟ್) ಹರಳಿನಂತಿದೆ. ನೀರಿನಲ್ಲಿ ಮಿಶ್ರಣ ಮಾಡಿದರೆ ಕೆಚ್ಚಲುವಿನಲ್ಲಿ ಬಣ್ಣ ಉಳಿದು ಹಾಲು ಕಂದು ಆಗುತ್ತಿದೆ. ಹಸುಗಳಿಗೆ ಕಾಡುತ್ತಿರುವ ಕೆಚ್ಚಲು ಬಾವು ರೋಗದಿಂದ  ಹಾಲು ಇಳುವರಿ ಕಡಿಮೆಯಾಗಿದೆ. ಇದರಿಂದ ಡೈರಿಗೆ ಹಾಲು ನೀಡಲು ಕಷ್ಟವಾಗುತ್ತಿದೆ ಎಂದು ರೈತರು, ರೈತ ಮಹಿಳೆಯರು ತಿಳಿಸಿದ್ದಾರೆ.

ಕೊಟ್ಟಿಗೆ ಶುಚಿತ್ವಕ್ಕೆ ರೈತರು ಗಮನಹರಿಸಬೇಕಿದೆ. ಹರಳಿನಂತಹ(ಪೊಟಾಷಿಯಂ ಪರಮಾಂಗನೇಟ್) ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಮಿಶ್ರಣ ಮಾಡದಿರುವುದರಿಂದ ಕೆಚ್ಚಲು, ಕೈಗಳು ಕೆಂಪಾಗಲಿವೆ. ಹೆಚ್ಚು ನೀರಿನಲ್ಲಿ ಮಿಶ್ರಣ ಮಾಡಿ ಕೆಚ್ಚಲು ಶುಚಿಗೊಳಿಸಬೇಕಿದೆ. ಬೇವಿನ ಸೊಪ್ಪು ಹೊಗೆ, ಬೇವಿನ ಸೊಪ್ಪಿನ ಲೇಪನದಂತಹ ಚಿಕಿತ್ಸಾ ಕ್ರಮ ಮಾಡಲು ರೈತರು ಮುಂದಾಗಬೇಕು. ಸಿಡುಬು ರೋಗದ ಲಕ್ಷಣ ಇದಾಗಿದ್ದು ಶುಚಿತ್ವಕ್ಕೆ ಗಮನಹರಿಸಲು ಸಿಬ್ಬಂದಿ ಜತೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ದೇವರಾಜ್ ತಿಳಿಸಿದರು.

Follow Us:
Download App:
  • android
  • ios